ತಾಳಿಕೋಟಿ

ಮಕ್ಕಳ ಪ್ರತಿಭೆ ಅನಾವರಣಗೊಳಿಸಿ: ಬಿರಾದಾರ

ಮಕ್ಕಳ ಪ್ರತಿಭೆ ಅನಾವರಣಗೊಳಿಸಿ: ಬಿರಾದಾರ

ತಾಳಿಕೋಟಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರಹಾಕಲು ಹಾಗೂ ಅವರ ಭೌದ್ಧಿಕ ಮಟ್ಟವನ್ನು ಹೆಚ್ಚಿಸಲು ಪ್ರತಿಭಾ ಕಾರಂಜಿಯಂತ ಕಾರ್ಯಕ್ರಗಳು ತುಂಬಾ ಸಹಕಾರಿಯಾಗಿವೆ. ಶಿಕ್ಷಕರು ಇದನ್ನು ಉತ್ತಮವಾದ ರೀತಿಯಲ್ಲಿ ಬಳಸಿಕೊಂಡು ಮಕ್ಕಳ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು ಎಂದು ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಬಿರಾದಾರ ಹೇಳಿದರು.

ಪಟ್ಟಣದ ವಿಕಾಸ ಪಬ್ಲಿಕ್ ಸ್ಕೂಲದಲ್ಲಿ ಮುದ್ದೇಬಿಹಾಳ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ 2022-23 ನೇ ಸಾಲಿನ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜೆ. ನಾಯಕ ಮಾತನಾಡಿ ಕೇವಲ ನಾಲ್ಕು ಗೋಡೆಗಳ ಮಧ್ಯ ಪಠ್ಯ ಪುಸ್ತಕದಿಂದ ಕಲಿತ ಕಲಿಕೆಯಿಂದ ಮಾತ್ರ ಮಕ್ಕಳ ವ್ಯಕ್ತಿತ್ವ ನಿಮರ್ಾಣ ಅಸಾಧ್ಯ. ಮಕ್ಕಳಲ್ಲಿ ಸುಪ್ತವಾಗಿರುವ ಕಲೆ, ಸಂಗೀತ ಸೇರಿದಂತೆ ಇತರೆ ಪ್ರತಿಭೆಗಳನ್ನು ಹೊರತರಲಿಕ್ಕಾಗಿಯೇ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಸಲಾಗುತ್ತದೆ. ಶಿಕ್ಷಕರು ಇದರಲ್ಲಿ ಯಾವ ಮಗುವಿಗೂ ಪಕ್ಷಪಾತಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಬೇಕು ಎಂದರು.

ಈ ಸಮಯದಲ್ಲಿ ವಿಕಾಸ ಪಬ್ಲಿಕ್ ಸ್ಕೂಲ ಅಧ್ಯಕ್ಷ ರಾಮನಗೌಡ ಬಾಗೇವಾಡಿ, ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ. ಧರಿಕಾರ, ಪಿ.ಇ.ಓ. ಬಿ.ವಾಯ್. ಕವಡಿ, ನೂಡಲ್ ಅಧಿಕಾರಿ ವಿಜಯಲಕ್ಷ್ಮೀ ಚಿಲ್ಲಾಳಶೆಟ್ಟಿ, ಪಿಡಿಓ. ಎನ್.ಎಸ್. ದೊಡ್ಡಮನಿ, ಬಿ.ಟಿ. ವಜ್ಜಲ್, ಬಿ.ಎಚ್. ಮುದ್ನೂರ, ಎಸ್.ಎಸ್. ಹಿರೇಮಠ, ವಿಕಾಸ ಸ್ಕೂಲ ಮು.ಗು. ಎಸ್.ಬಿ. ಬಿರಾದಾರ, ಶಿಕ್ಷಕ ರಾಜು ವಿಜಾಪುರ, ನಬಿ ಮಿಣಜಗಿ ಇದ್ದರು 

ಸುದ್ದಿ ಓದಿ