ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಗೆ ಅಭೂತಪೂರ್ವ ಜಯ: ವಿಜಯೋತ್ಸವ
ಮುದ್ದೇಬಿಹಾಳ 04: ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಯವರು ನಾಲ್ಕನೇ ಬಾರಿ ಅಭೂತಪೂರ್ವ ಜಯಸಾಧಿಸಿದ್ದು ಮಾತ್ರವಲ್ಲದೇ ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಯಾಗುತ್ತಿರುವ ಹಿನ್ನೆಲೆ ತಾಲೂಕಾ ಬಿಜೆಪಿ ಮಂಡಲದಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಹರ್ಷೋದ್ಘಾರದಿಂದ ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಇದಕ್ಕೂ ಮೊದಲು ನೂರಾರು ಕಾರ್ಯಕರ್ತರು ಕೈಯಲ್ಲಿ ಬಿಜೆಪಿ ಕಮಲದ ಚಿನ್ಹೇ ಇರುವ ಕೇಸರಿ ಬಾವಟ ಪ್ರದರ್ಶಿಸಿ ಪಟ್ಟಣದ ಬಸವೇಶ್ವರ ವೃತ್ತದ ಮಾರ್ಗವಾಗಿ ಮುಖ್ಯಬಜಾರ, ಗ್ರಾಮದೇವತೆ ಕಟ್ಟೆ, ಇಂದಿರಾ ವೃತ್ತ, ಕಿಲ್ಲಾಗಲ್ಲಿ, ಸರಾಫ್ ಬಜಾರ, ಸಂಗೋಳ್ಳಿ ರಾಯಣ್ಣ ವೃತ್ತ, ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ, ಹುಡ್ಕೋ ಬಡಾವಣೆ, ಅಂಬೇಡ್ಕರ ವೃತ್ತ ಸೇರಿದಂತೆ ಎಲ್ಲ ಪ್ರಮುಖ ರಸ್ತೆಗಳಲ್ಲಿ ಬೈಕ್ ರಾ್ಯಲಿ ನಡೆಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ರಮೇಶ ಜಿಗಜಿಣಗಿಯವರಿಗೆ ಜಯವಾಗಲಿ ಎಂದು ಜಯಕಾರ ಘೋಷಣೆ ಕೂಗಿದರು.
ಬಿಜೆಪಿ ಮುಖಂಡ ಸಿದ್ದರಾಜ ಹೊಳಿ, ಶ್ರೀಶೈಲ ದೊಡಮನಿ, ಪುರಸಭೆ ಸದಸ್ಯ ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ವಿಕ್ರಮ ಓಸ್ವಾಲ ಅವರು ಮಾತನಾಡಿ ದೇಶದಲ್ಲಿ ಪ್ರದಾನಿ ನರೇಂದ್ರ ಮೋದಿಯವರು ಕಳೆದ 10 ವರ್ಷಗಳ ಸುದೀರ್ಘ ಆಡಳಿತದಲ್ಲಿ ಉತ್ತಮ ಜನಪರ ರೈತರ, ಬಡವರ ಪರ ಆಡಳಿತ ನಡೆಸಿದ ಪರಿಣಾಮ ದೇಶದಲ್ಲಿನ ಜನರು ಭರ್ಜರಿಗೆಲ್ಲುವ ನೀಡುವದರೊಂದಿಗೆ ಮತ್ತೇ ಮೂರನೇ ಬಾರಿಗೆ ನರೇಂದ್ರ ಮೋದಿಯವರನ್ನು ಪ್ರದಾನಿಯನ್ನಾಗಿ ಮಾಡಿದ್ದು ಇದೊಂದು ಜನತಾ ಜನಾರ್ಧನರ ಆಶಿರ್ವಾದದಿಂದ ಗೆಲವುವಾಗಿದೆ, ಕಾಂಗ್ರೇಸ್ ನವರ ಗ್ಯಾರಂಟಿಗಳು ಸುಳ್ಳು ಆಶ್ವಾಸನೆಗಳು ರಾಜ್ಯದಲ್ಲಿ ಮಾತ್ರವಲ್ಲದೇ ದೇಶದೆಲ್ಲೆಡೆ ಒರ್ಕೌಟ ಆಗಲಿಲ್ಲ. ಇದೊಂದು ಹಿಂದೂ ಧರ್ಮದ ಸಂಸ್ಕೃತಿಗೆ ಸಿಕ್ಕ ಗೆಲುವಾಗಿದೆ, ಅದರಂತೆ ವಿಜಯಪುರ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಯವರು ಸ್ವಚ್ಚ ಹಾಗೂ ನೇರ ನಿಷ್ಠುರ ಸಂಭಾವಿತ ರಾಜಕಾರಿಣಿಯಾಗಿದ್ದಾರೆ. ಅದಕ್ಕೆ ಜಿಲ್ಲೆಯ ಜನರು ಈ ಬಾರಿಯೂ ಕೂಡ ಅತ್ಯಧಿಕ ಮತ ನೀಡುವ ಮೂಲಕ ಗೆಲ್ಲುವಂತೆ ಆಶೀರ್ವಾದ ಮಾಡಿದ್ದಾರೆ ಹಾಗಾಗಿ ಈ ಗೆಲುವಿಗೆ ಕಾರಣರಾದ ಜ್ಯಾತ್ಯಾತೀತವಾಗಿ ಒಗ್ಗಟ್ಟಾಗಿ ಪಟ್ಟಣದ ಎಲ್ಲ ಗಣ್ಯವ್ಯಾಪಾರಸ್ತರಿಗೆ, ಮತದಾರರ ಪ್ರಭುಗಳಿಗೆ ಹಾಗೂ ಮಾಜಿ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರಿಗೆ ಹಾಗೂ ಮುಖಂಡರಿಗೆ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಸೋಮನಗೌಡ ಪಾಟೀಲ(ನಡಹಳ್ಳಿ) ಡಾ, ವಿರೇಶ ಪಾಟೀಲ, ಗೌರಮ್ಮ ಹುನಗುಂದ, ರಾಜಶೇಖರ ಹೊಳಿ, ಮಾಣಿಕ ದಂಡಾವತಿ, ಶ್ರೀಕಾಂತ ಹಿರೇಮಠ, ನ್ಯಾಯವಾದಿಗಳಾದ ಚಿದಾನಂದ ಚಿಲ್ಲಾಳಶೇಟ್ಟರ, ಎಂ.ಆರ್ ಪಾಟೀಲ,ಅಶೋಕ ರಾಠೋಡ, ಸಂಗಮೇಶ ಕರಭಂಟನಾಳ, ಈರಣ್ಣ ಬಡಿಗೇರ, ಕಾವೇರಿ ಕಂಬಾರ, ಪ್ರೀತಿ ಕಂಬಾರ ಸೇರಿದಂತೆ ಹಲವರು ಇದ್ದರು.