ಲೇಖನಗಳು

ಸಾರ್ವತ್ರೀಕರಣ ಜಾಗೃತಿ ಜಾತ್ರೆ

ಸಾರ್ವತ್ರೀಕರಣ ಜಾಗೃತಿ ಜಾತ್ರೆ

ರಕ್ತದಾನ ಶಿಬಿರ, ಬಾಲ್ಯ ವಿವಾಹ ತಡೆ, ಜಲ ಸಂರಕ್ಷಣೆ, ಸಶಕ್ತಮನ, ಸಂತೃಪ್ತ ಜೀವನ, ಕೃಪಾದೃಷ್ಟಿ (ಕಣ್ಣುದಾನ), ಲಕ್ಷ ಲಕ್ಷ ವೃಕ್ಷೊತ್ಸವ, ಹಾಗೂ ಅಂಗಾಂಗದಾನ ಹೀಗೆ ಇಂತಹ ಹತ್ತು ಹಲವಾರು ಸಮಾಜಮುಖಿ ಪರಿಕಲ್ಪನೆಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜದ ಸ್ವಾಸ್ತ್ಯವನ್ನು ಕಾಪಾಡುತ್ತ ಸಧೃಢ ಸಮಾಜವನ್ನು ನಿರ್ಮಿಸುವಂತಹ ಮಹೋನ್ನತ ಕಾರ್ಯವನ್ನು ಜಾತ್ರಾ ಮಹೋತ್ಸವದ ಮುಖೇನ ಸಾಕಾರಗೊಳಿಸುತ್ತ ಬಂದಿರುವದು ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವನ್ನು ಸಾಮಾಜೀಕರಣ ಹಾಗೂ ಸಾರ್ವತ್ರೀಕರಣ ಗೊಳಿಸಿದುದಲ್ಲದೆ ಜಾತ್ರೆ ಎಂಬ ಶಬ್ದಕ್ಕೆ ಹೊಸ ಭಾಷೆಯನ್ನೇ ಬರೆದವರು ಶ್ರೀ ಗವಿಮಠದ ಇಂದಿನ ಪೀಠಾಧಿಪತಿಗಳವರು. ಜಾತ್ರೆ ಯಾತ್ರೆ, ಉತ್ಸವ, ಪರಿಸೆ, ಜನಗಳ ಗುಂಪು ಸಮೂಹ ಎಂಬಂತಹ ಅರ್ಥಗಳ ಜೊತೆಗೆ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಪಾದಗಟ್ಟ್ಲೆಗೊತ್ತಾದ ಸ್ಥಳ ಯ ವರೆಗೆ ಜಯಘೋಷ ಮಾಡುತ್ತ ರಥವನ್ನು ಎಳೆದುಕೊಂಡು ಹೋಗುವುದು. ಭಕ್ತ ಜನ ಸಮೂಹ ರಥಕ್ಕೆ ಉತ್ತತ್ತಿ, ಬಾಳೆ, ಕಬ್ಬು, ಮುಂತಾದವುಗಳನ್ನು ಎಸೆದು ಕೃತಾರ್ಥರಾಗುವುದು ಜಾತ್ರೆಗಿರುವ ಸಾಂಪ್ರಾದಾಯಿಕ ಹಾಗೂ ಸಾಮಾನ್ಯ ಅರ್ಥ. ಆದರೆ ಜನರನ್ನು ಸಮಾಜವನ್ನು ಜಾಗೃತಗೊಳಿಸಬೇಕು ಜನ-ಮನವನ್ನು ತಿದ್ದಬೇಕು ತೀಡಬೇಕು ಎಂಬ ವಿಶಿಷ್ಟ ರೀತಿಯಲ್ಲಿ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವನ್ನು ಇಂದಿನ ಶ್ರೀಗಳವರು ಆಚರಿಸಿಕೊಂಡು ಬರುತ್ತಿದ್ದಾರೆ. 

ಸತ್ತವರನ್ನು ಬದುಕಿಸುವ ಶಕ್ತಿ ನಮಗಿಲ್ಲ ಆದರೆ ಸಾಯುತ್ತಿರುವವರನ್ನು ಬದುಕಿಸುವ ಶಕ್ತಿಯನ್ನು ಭಗವಂತ ನಮಗೆ ಕರುಣಿಸಿದ್ದಾನೆ. ಹಾಗೆಯೇ ರಕ್ತದಾನ ಮಾಡುವುದರ ಮೂಲಕ ಜೀವ ಉಳಿಸುವ ಪುಣ್ಯಕಾರ್ಯಗಳಲ್ಲಿ ಭಾಗಿಯಾಗೋಣ. 

ಮದುವೆ-ವಿವಾಹ ಎಂಬ ಶಬ್ದಗಳ ಅರ್ಥವನ್ನೇ ಅರಿಯದ ಮುದ್ದುಕಂದಮ್ಮಗಳನ್ನು ವಿವಾಹದ ಸಂಕೋಲೆಯಲ್ಲಿ ಬಂಧಿಸಿ ಅವರ ಬಾಲ್ಯದ ಬದುಕನ್ನೇ ಛಿದ್ರಗೊಳಿಸುತ್ತಿದ್ದಂತಹ ಬಾಲ್ಯ ವಿವಾಹ ತಡೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ಸತತ ಮಳೆಯ ಅಭಾವದಿಂದ ಬರಗಾಲದಿಂದ ಪರಿತಪಿಸುತ್ತಿದ್ದ ರೈತ ಸಮುದಾಯದಲ್ಲಿ ನಾಗರೀಕರಲ್ಲಿ, ಮಕ್ಕಳಲ್ಲಿ ನೀರಿನ ಮಿತವ್ಯಯದ ಬಳಕೆ ಮಳೆನೀರು ಕೊಯ್ಲು ಬಗೆಗೆ ಅರಿವು ಮೂಡಿಸುವ ಜವಬ್ದಾರಿ ಎಂಬ ವಿಚಾರ ಕುರಿತು ಜಲದೀಕ್ಷೆ ಎಂಬ ಪರಿಕಲ್ಪನೆಗೆ ಹೊಸ ಆಯಾಮ ದೊರಕಿತು. ಅಷ್ಟೇ ಅಲ್ಲದೆನೆ ಕೊಪ್ಪಳದ ನೆರೆಯ ಹೀರೆಹಳ್ಳದ ಸುಮಾರು 26 ಕೀ.ಮಿ ಉದ್ದದ ಹಳ್ಳವನ್ನು ಸ್ವಚ್ಛ ಗೊಳಿಸಿ ಪುನಃಶ್ಚೇತನಗೊಳಿಸಲಾಯಿತು. ಈ ಜಲದೀಕ್ಷೆಯ ಮುಂದುವರಿದ ಭಾಗವಾಗಿ ಕಲ್ಭಾವಿ ಕೆರೆ, ರಾಯನ ಕೆರೆ, ನಿಡಸೇಸಿಕೆರೆ ಇಂದರಗಿಕೆರೆ, ಗಂಗಾವತಿಯ ದುರ್ಗಮ್ಮನ ಹಳ್ಳ ಇವೆಲ್ಲವೂ ಸ್ವಚ್ಛಗೊಂಡವು. ಇಂದಿನ ಒತ್ತಡದ ಬದುಕು, ಖಿನ್ನತೆ, ಬಿ.ಪಿ, ಸಕ್ಕರೆ ಖಾಯಿಲೆಗಳಂತ ರೋಗಗಳಿಂದ ಹಲವು ಮಾನಸಿಕ ರೋಗಗಳಿಂದ ಬಳಲುತ್ತಿರುವವರಲ್ಲಿ ಸಧೃಡ ಮನಸ್ಸು, ಒಳ್ಳೆಯ ಭಾವನೆ ನಿರ್ಮಾಣ ಮಾಡುವಲ್ಲಿ ಸಶಕ್ತ ಮನ ಸಂತೃಪ್ತ ಜೀವನ ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಿ ಸ್ವಾಸ್ತ್ಯ ಸಧೃಡ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡುವಂತಹದ್ದಾಗಿತ್ತು. 

ಇಂದು ಪ್ರಪಂಚದಾದ್ಯಂತ ಸುಮಾರು. 37ಮಿಲಿಯನ್ ಜನರು ಅಂಧರಿದ್ದಾರೆ. ಹಾಗೆಯೇ ನಮ್ಮ ದೇಶದಲ್ಲಿಯೂ ಸಹ ಸುಮಾರು. 15 ಮಿಲಿಯನ್ ಜನ ಅಂಧರಿದ್ದಾರೆ. ಈ ಅಂಧತ್ವಕ್ಕೆ ಹತ್ತು ಹಲವಾರು ಕಾರಣಗಳಿವೆ. ಅದರಲ್ಲಿ ಕಾರ್ನಿಯಾ ಸಮಸ್ಯೆಯಿಂದ ಅಂಧತ್ವ ಉಂಟಾಗಿದ್ದರೆ ಕಾರ್ನಿಯಾ ಚಿಕಿತ್ಸೆಯೇ ಬೇಕು. ಕೃತಕ ಕಾರ್ನಿಯಾಗಳನ್ನು ಅಭಿವೃದ್ಧಿ ಪಡಿಸಲಾಗಿಲ್ಲ. ಹೀಗಾಗಿ ನಾವು ದಾನ ಮಾಡಿದ ಕಣ್ಣುಗಳಿಂದ ಕಾರ್ನಿಯಾಗಳನ್ನು ಅಭಿವೃದ್ಧಿ ಪಡಿಸಲಾಗಿಲ್ಲ. ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದು ಅಂಧರ ಕಣ್ಣಿಗೆ ಇಂಪ್ಲಾಂಟೆಶನ್ ಮಾಡಲಾಗುತ್ತದೆ. ಹೀಗೆ ಚಿಕಿತ್ಸೆಯ ದಾನದ ಮೂಲಕ ಜಾಗೃತಿ ಮೂಡಿಸುವ ಸಂಕಲ್ಪದಿಂದ ಕೃಪಾದೃಷ್ಟಿ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಗಿಡ ಮರಗಳು ಕೊಡುವ ನೆರಳು-ನೆರವು ಪ್ರಾಣಾವಾಯು ಮಳೆ-ಬೆಳೆ ಪಶು ಪಕ್ಷಿಗಳಿಗೆ ಆಶ್ರಯ ಮುಂತಾದವುಗಳ ಬಗ್ಗೆ ಕೇವಲ ಉಪನ್ಯಾಸವನ್ನು ನೀಡದೆನೆ ಶ್ರೀಮಠದದಿಂದ ಲಕ್ಷ ಲಕ್ಷ ಸಸಿಗಳನ್ನು ವಿತರಿಸಿ ಲಕ್ಷ ವೃಕ್ಷೊತ್ಸವವನ್ನು ಆಚರಿಸಲಾಯಿತು. ಇದೇ ರೀತಿಯ ಈ ಸಾರೆ “ಅಂಗಾಂಗ ದಾನ” ಎಂಬ ಪರಿಕಲ್ಪನೆಯಲ್ಲಿ ವಿಶೇಷ ದಾನ ಜೀವ ಉಳಿಸುವ ಬಗೆ ಕುರಿತು ವಿನೂತನ ಕಾರ್ಯಕ್ರಮವನ್ನು ಆಯೋಜಿಸಿ ‘ದಾನದ’ ಭಾಷೆಗೆ ವಿಶೇಷ ಪರಿಕಲ್ಪನೆಯನ್ನೇ ನೀಡಲಾಯಿತು. 

ಹೀಗೆ ಸರಿ ಸುಮಾರು. 2015 ರಿಂದ ಆರಂಭವಾದ ಈ ವಿನೂತನ ಪರಿಕಲ್ಪನೆಯು ಜಾತ್ರಾ ಮಹೋತ್ಸವಕ್ಕೆ ಹೊಸ ಭಾಷ್ಯೆಯನ್ನೇ ಬರೆದಿದೆ ಎಂದರೆ ತಪ್ಪಾಗಲಾರದು. 

ಶ್ರೀ ಗವಿಸಿದ್ಧೆಶ್ವರ ಜಾತ್ರಾ ಮಹೋತ್ಸವಕ್ಕೆ ಈ ನಾಡಿನ ಲಕ್ಷ ಲಕ್ಷ ಭಕ್ತ ಸಮೂಹ ಸಾಕ್ಷಿಭೂತರಾಗುತ್ತಾರೆ ಸತ್ಯ. ಶ್ರೀ ಗವಿಮಠ ಈಗಾಗಲೇ 18ನೇ ಪೀಠಾಧಿಪತಿಗಳನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಶ್ರೀ ಮಠದ ಇಂದಿನ 18ನೇ ಪೀಠಾಧಿಪತಿಗಳಾದ ಜಽಽ ಗವಿಸಿದ್ಧೇಶ್ವರ ಮಹಾ ಶಿವಯೋಗಿಗಳವರು ಜಾತ್ರೆಯನ್ನು ಕೇವಲ ಧಾರ್ಮಿಕ ಕಾರ್ಯಕ್ರಮಕ್ಕೆ ಸಿಮೀತಗೊಳಿಸದೇ ಸಾರ್ವತ್ರಿಕಕರಣಗೊಳಿಸಿದ್ದಾರೆ. 

ಅಂಧತ್ವ ನಿವಾರಣೆ, ರಕ್ತದಾನ, ಕಣ್ಣುದಾನ, ಅಂಗಾಂಗದಾನ, ಸಶಕ್ತಮನ, ಸಂತೃಪ್ತ ಜೀವನ ಜಲ-ಜಾಗೃತಿ, ಸಸ್ಯ ಸಂರಕ್ಷಣೆ ಲಕ್ಷ ವೃಕ್ಷೊತ್ಸವ ಗಳೆಂಬ ಮುಂತಾದ ಹತ್ತು ಹಲವಾರು ಜಾಗೃತಿ ಜಾಥಾಗಳನ್ನು ಹಾಗೂ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ತನ್ಮೂಲಕ ಜಾತ್ರೆಗೆ ಹೊಸ ಭಾಷ್ಯಾಯನ್ನೇ ಬರೆದಿದ್ದಾರೆ ಇಂದಿನ ಪೀಠಾಧಿಪತಿಗಳು ಕೇವಲ ಇಂತಹ ಸಾಮಾಜಿಕ ಕಾರ್ಯಗಳಲ್ಲದನೇ ಬಾಬಾ ರಾಮದೇವ, ವೀರೇಂದ್ರ ಹೆಗ್ಗಡೆ, ಪೇಜಾವರ ಶ್ರೀಗಳವರು, ರವಿಶಂಕರ ಗುರೂಜಿ, ಮ್ಯಾಥ್ಯೂ ಫ್ರೌರ್ಟಿಯರ್ (ಕೆನಡಾ ದೇಶ), ಅಣ್ಣಾ ಹಜಾರೆ, ವಿಶ್ವೇಶ್ವರಭಟ್, ಸಿ.ಎನ್‌.ಆರ್‌.ರಾವ್ ಮುಂತಾದ ವಿಜ್ಞಾನಿಗಳ ಹಾಗೂ ಮಹೋನ್ನತ ಸಮಾಜ ಸುಧಾರಕರ ತತ್ವಜ್ಞಾನಿಗಳ ಉಪನ್ಯಾಸವಲ್ಲದೆನೇ ಸಂಗೀತ ಸಾಹಿತ್ಯವೂ ಸಹ ಜಾತ್ರಾ ಮಹೋತ್ಸವದಲ್ಲಿ ಅಣುರಣಿಸುತ್ತದೆ. 

ಅರಿವು-ಆಚಾರ ಸಾಹಿತ್ಯ ಶಿಕ್ಷಣ ಸಂಸ್ಕೃತಿ ಸಂಸ್ಕಾರಗಳನ್ನು ನೀಡುತ್ತಾ ಬಂದಿರುವುದು ಗವಿಮಠದ ಹಾಗೂ ಜಾತ್ರಾ ಮಹೋತ್ಸವದ ವೈಶಿಷ್ಟ್ಯವೂ ಆಗಿದೆ. 

ದೇವನಿಗಾಗಿ ಭಕ್ತ ಕಾಯುವುದಲ್ಲ ದೇವನೇ ಭಕ್ತ ಸ್ವರೂಪನಾಗಿ ಭಕ್ತನ ಬರುವಿಕೆಗಾಗಿ ಕಾಯುವ ಭಕ್ತಮಂದಿರ ಶ್ರೀ ಗವಿಮಠ ಭಕ್ತಿ-ಶಕ್ತಿಗಳ ಸಹ್ಯಾದ್ರಿ, ಕೊಪಣಾದ್ರಿ, ಭಕ್ತ-ಭಕ್ತಿಭಾವದಲ್ಲಿ ಮಿಂದು ಮಡಿಯುಟ್ಟು ಭಾವ ಪರವಶನಾಗುವ ಶಿವ ಸಾಯುಜ್ಯದ ಷಣ್ಮುದ್ರಿ. ಕಲ್ಲಿನಡಿಯ ಕೈಲಾಸವಾಗಿರುವ ಗವಿಮಠದ ಹನ್ನೊಂದನೆ ಪೀಠಾಧೀಶರಾಗಿದ್ದ ಜಽಽ ಗವಿಸಿದ್ಧೇಶ್ವರರು ತಮ್ಮ ಗುರುಗಳ ಅಗಲಿಕೆಯ ಅನುತಾಪವನ್ನು ತಾಳಲಾರದೇ ಅವರಿಗಾಗಿಯೇ ನಿರ್ಮಿಸಿದ್ದ ಸಮಾಧಿಯಲ್ಲಿ ಧ್ಯಾನಗೈಯುತ್ತ ನಿರ್ವಿಕಲ್ಪ ಸಮಾಧಿ ಹೊಂದಿದ ಮಹಿಮಾಧೀಶ ್ಲಕ್ರಿ.ಶ 1816್ವ ಸ್ವತಃ ಗುರುಗಳಿಂದಲೇ ಗೌರವಿಸಿಕೊಂಡ ಶಿವಯೋಗಿ ಅಂದಿನಿಂದ ಇಂದಿನವರೆಗೂ ನಿರಂತರ ಸಾಗಿಬಂದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವದೊಂದು ನಮ್ಮ ನಿಮ್ಮಗಳ ಭಾಗ್ಯವಲ್ಲವೇ? 

- ಎಸ್‌. ಎಮ್‌. ಕಂಬಾಳಿಮಠ  

ಕೊಪ್ಪಳ 





ಸುದ್ದಿ ಓದಿ