ವಿದ್ಯಾನಗರದಲ್ಲಿ ಅನೀರೀಕ್ಷಿತ ಪ್ರತಿಭಟನೆ
ಮುದ್ದೇಬಿಹಾಳ ಪಟ್ಟಣದ ವಿದ್ಯಾನಗರ ಬಡಾವಣೆಯ ಮುಖ್ಯ ರಸ್ತೆಯಲ್ಲಿ ನಿರ್ಮಿಸಿದ ಒಳಚರಂಡಿಯ ಚೇಂಬರ್ ತುಂಬಿ ಮಲೀನ ನೀರು ರಸ್ತೆ ಮೇಲೆ ಹರಿಯುತ್ತಿರುವುದರ ಖಂಡಿಸಿ ಕ್ರಮ ಆಗ್ರಹಿಸಿ ವಿದ್ಯಾನಗರ ಬಡಾವಣೆಯ ಮುಖಂಡ ವಿಜಯ ಬಡಿಗೇರವರ ನೇತೃತ್ವದಲ್ಲಿ ಬಡಾವಣೆಯ ನಿವಾಸಿಗಳು ರಸ್ತೆ ಬಂದ ಮಾಡಿ ದಿಢೀರ ಪ್ರತಿಭಟನೆ ನಡೆಸಿರುವ ಘಟನೆ ಸೋಮವಾರ ನಡೆಸಿಯಿತು.
ಮುದ್ದೇಬಿಹಾಳ 27: ಕಳೆದ ಒಂದು ತಿಂಗಳಿಂದ ಪಟ್ಟಣದ ವಿದ್ಯಾನಗರ ಬಡಾವಣೆಯ ಮುಖ್ಯ ರಸ್ತೆಯಲ್ಲಿ ನಿರ್ಮಿಸಿದ ಒಳಚರಂಡಿಯ ಚೇಂಬರ್ ತುಂಬಿ ಮಲೀನ ನೀರು ರಸ್ತೆ ಮೇಲೆ ಹರಿಯುತ್ತಿದ್ದರೂ ಒಳಚರಂಡಿ ಮಂಡಳಿ ಇಲಾಖೆಯವರಾಗಲಿ ಅಥವಾ ಪುರಸಭೆ ಇಲಾಖೆ ಅಧಿಕಾರಿಗಳ ಸಕಾರಾತ್ಮಕ ಸ್ಪಂದಿಸುತ್ತಿಲ್ಲ ಎಂದು ಖಂಡಿಸಿ ಮುಖಂಡ ವಿಜಯ ಬಡಿಗೇರವರ ನೇತೃತ್ವದಲ್ಲಿ ಬಡಾವಣೆಯ ನಿವಾಸಿಗಳು ರಸ್ತೆ ಬಂದ ಮಾಡಿ ದಿಢೀರ ಪ್ರತಿಭಟನೆ ನಡೆಸಿರುವ ಘಟನೆ ಸೋಮವಾರ ನಡೆಸಿಯಿತು.
ಈ ವೇಳೆ ವಿದ್ಯಾನಗರ ಮುಖಂಡ ವಿಜಯ ಬಡಿಗೇರ ಸುದ್ದಿಗಾರರೊಂದಿಗೆ ಮಾತನಾಡಿ ಕಳೇದ ಒಂದು ತಿಂಗಳಿಂದ ವಿದ್ಯಾನಗರ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಒಳಚಂಡಿ ಚೇಂಬರ್ ಸಂಪೂರ್ಣ ತುಂಬಿ ಮಲೀನ ನೀರು ರಸ್ತೆ ಮೇಲೆ ಹರಿದು ಗಬ್ಬು ವಾಸನೆ ಹರಡುತ್ತಿದೆ. ಮಾತ್ರವಲ್ಲದೇ ನದಿ ನೀರಿನ ಪೈಪಿನೊಳಗೆ ಸೇರಿಕೊಂಡು ಅಂತಹ ನೀರನ್ನು ಕುಡಿಯಬೇಕಾಗಿದೆ. ಈ ಮಾರ್ಗದಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಮಲೀನ ನೀರಲ್ಲಿ ಚಲಿಸುವಂತಾಗಿದೆ. ಆದರೇ ಒಳಚರಂಡಿಯವರಾಗಲಿ ಅಥವಾ ಪುರಸಭೆಯವಾಗಲಿ ಸ್ಪಂದಿಸಿ ಸ್ವಚ್ಚಾತಾ ಕಾರ್ಯ ಮಾಡುತ್ತಿಲ್ಲ.
ಇದರಂತೆ ಬಡಾವಣೆಯಲ್ಲಿ ವಿದ್ಯುತ್ ದ್ವೀಪ ಅಳವಡಿಸಿಲ್ಲ, ಚರಂಡಿ ಸ್ವಚ್ಚತೆ ಮಾಡುತ್ತಿಲ್ಲ ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಯಾವೂದೇ ಪ್ರಯೋಜನವಾಗಿಲ್ಲ ಕಾರಣ ಅನಿವಾರ್ಯವಾಗಿ ನಿವಾಸಿಗಳೇಲ್ಲರೂ ಸೇರಿ ದೀಢಿರ ಪ್ರತಿಭಟನೆ ನಡೆಸಬೇಕಾಗಿ ಬಂದಿದೆ ಸಧ್ಯ ಸಮಸ್ಯೆ ಬಗೆಹರಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೇಯೇ ಇಲ್ಲ ಎಂದರು.
ಪ್ರತಿಭಟನೆ ನಡೆಸುತ್ತಿರುವ ಖಚಿತ ಮಾಹಿತಿ ಪಡೆದ ಪಿಎಸೈ ಸಂಜಯ ತಿಪ್ಪಾರೆಡ್ಡಿ ಯವರ ನೇತೃತ್ವದ ಪೋಲಿಸ್ ತಂಡ ಹಾಗೂ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರು ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿ ನಿವಾಸಿಗಳ ಸಮಸ್ಯೆ ಆಲಿಸಿದರು.ಬಳಿಕ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರು ಮಾತನಾಡಿ ಸಧ್ಯ ಒಳಚರಂಡಿ ಮಂಡಳಿಯವರು ನಿರ್ಮಿಸಿದ ಕಾಮಗಾರಿ ಮುಕ್ತಾಯಗೊಂಡಿದೆಯೋ ಅಥವಾ ಇಲ್ಲವೋ ಎಂಬದು ಇಲಾಖೆಯವರು ಇಲ್ಲಿಯವರೆಗೂ ಸ್ಪಷ್ಟ ವರದಿ ನೀಲನಕ್ಷೆಯ ವರದಿ ಪುರಸಭೆಗೆ ಹಸ್ತಾಂತರ ಮಾಡಿಲ್ಲ. ಇದರಿಂದ ನಮಗೆ ಚೆಂಬರ್ ಬ್ಲಾಕ್ ಆದರೆ ಸ್ವಚ್ಛತೆ ಮಾಡುವುದು ಬಹಳ ಕಷ್ಟಕರವಾಗಿದೆ. ಜೊತೆಗೆ ವಿದ್ಯುತ್ ದೀಪ ಸೇರಿದಂತೆ ಇತರೇ ಮೂಲಬೂತ ಸಮಸ್ಯೆಗಳನ್ನು ಮುಂಬರುವ 24 ಗಂಟೆಯೋಳಗಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದರು. ಇಷ್ಟು ದಿನ ಮಾಡದೇ ಇರುವವರು 24 ಗಂಟೆಗಳಲ್ಲಿ ಹೇಗೆ ಬಗೆ ಹರಿಸುತ್ತಿರಿ ನಮ್ಮ ಸಮಸ್ಯೆ ಬಗೆಹರಿಸಿದ ಮೇಲೇಯೆ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುತ್ತೇವೆ ಎಂದು ಪ್ರತಿಭಟಣಾಕಾರರು ಪಟ್ಟು ಹಿಡಿದರು.
ಈ ವೇಳೆ ಪಿಎಸೈ ಸಂಜಯ ತಿಪ್ಪಾರೆಡ್ಡಿಯವರು ಮದ್ಯ ಪ್ರವೇಶಿಸಿ ಪೋಲಿಸ್ ಇಲಾಖೆಗೆ ತಿಳಿಸದೇ ಹೀಗೆ ದೀಢಿರ ಪ್ರತಿಭಟನೆ ಮಾಡುವುದು ಕಾನೂನು ವಿರುದ್ಧವಾಗಿದೆ ಜೊತಗೆ ಯಾವೂದೇ ಹೋರಾಟಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಾಡಬೇಕು ಕಾರಣ ಇದೊಂದು ಅವಕಾಶ ಅಧಿಕಾರಿಗಳಿಗೆ ನೀಡಿ ಹಾಗೊಂದು ವೇಳೆ ಆಗಲೂ ಸಮಸ್ಯೆ ಪರಿಹರಿಸಲಿಲ್ಲವೇಂದರೆ ಅಧಿಕೃತ ಪರವಾನಿಗೆ ಪಡೆದು ನಿಮ್ಮ ಹೋರಾಟ ಮುಂದುವರೆಸಿ ಸಧ್ಯ ಪ್ರತಿಭಟನೆಯಯನ್ನು ಕೈಬಿಡಿ ಎಂದು ಮನೋಲಿಸಿದ ಪರಿಣಾಮ ಪ್ರತಿಭಟನೆಯಿಂದ ಹಿಂದಕ್ಕೆ ಸರಿದರು.
ಈ ವೇಳೆ ವಿದ್ಯಾನಗರ ಬಡಾವಣೆಯ ಮುಖಂಡರಾದ ರವಿ ಕಮತ, ಶರಣು ಮಾಡಗಿ, ಮಹಾಂತೇಶ ಹಿರೇಮಠ, ವಿಜಯ ವಡವಡಗಿ, ಮಹಾಂತೇಶ ಬಿರಾದಾರ, ವಿರುಪಾಕ್ಷೀ ಪತ್ತಾರ ಸೇರಿದಂತೆ ಹಲವರು ಇದ್ದರು.