ಬಳ್ಳಾರಿ

ನಿರುದ್ಯೋಗಿಗಳು ಸ್ವಯಂ ಉದ್ಯೋಗ ಪಡೆಯಲು ಆಸಕ್ತಿ ತೋರಿ: ಶಾಸಕ ಗಣೇಶ್

ನಿರುದ್ಯೋಗಿಗಳು ಸ್ವಯಂ ಉದ್ಯೋಗ ಪಡೆಯಲು ಆಸಕ್ತಿ ತೋರಿ: ಶಾಸಕ ಗಣೇಶ್

ಲೋಕದರ್ಶನ ವರದಿ 

ಕಂಪ್ಲಿ 23: ನಿರುದ್ಯೋಗಿಗಳು ಸ್ವಯಂ ಉದ್ಯೋಗ ಪಡೆಯಲು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆಯವುದರ ಜೊತೆಗೆ ಪ್ರಗತಿ ಸಾಧಿಸಬಹುದು ಎಂದು ಶಾಸಕ ಜೆ.ಎನ್‌.ಗಣೇಶ್ ಹೇಳಿದರು.  

ಪಟ್ಟಣದ ಕುರುಗೋಡು ರಸ್ತೆಯ ಓಂ ಶಾಂತಿ ಪಕ್ಕದಲ್ಲಿರುವ ಸಮೃದ್ಧಿ ಯೋಜನಡಿ 10ಲಕ್ಷ ರೂ.ಗಳಲ್ಲಿ ಸೂಪರ್ ಮಾರ್ಕೆಟ್ ಆರಂಭಕ್ಕೆ ಆರೋಗ್ಯ ರಿಟೇಲ್ ಮಾರ್ಟ್‌ ಉದ್ಘಾಟಿಸಿ ಮಾತನಾಡಿ ಮಾಜಿ ಸಚಿವ ಪ್ರೀಯಾಂಕ ಖರ್ಗೆಯವರು  2018-19ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್‌.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ, ಬಡ ವಿದ್ಯಾವಂತ ನಿರುದ್ಯೋಗಿ ಯುವಜನತೆಗೆ ಸ್ವಯಂ ಉದ್ಯೋಗ ಕೈಗೊಳ್ಳಲು, ಈಯೋಜನೆ ಜಾರಿಗೆ ತಂದರು ನಿರುದ್ಯೋಗಿಗಳು ಸರ್ಕಾರಿ ನೌಕರಿ ನೆಚ್ಚಿಕೊಳ್ಳದೆ  ಸ್ವಯಂ ಉದ್ಯೋಗ ಪಡೆಯಲು ಆಸಕ್ತಿ ತೋರಬೇಕು ಎಂದರು. 


ಡಾ.ಬಿ.ಆರ್‌.ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿ ಕೆ.ಎಚ್‌.ಲಕ್ಷ್ಮಣ ಮಾತನಾಡಿ, ಸಮೃದ್ಧಿ ಯೋಜನಡಿ ಸ್ವಯಂ ಉದ್ಯೋಗ ಕಂಡುಕೊಳ್ಳಲು ಜಿಲ್ಲೆಯ 61ಜನ ಪರಿಶಿಷ್ಟ ಜಾತಿ ಜನಾಂಗದ ಯುವಜನತೆ ಆಯ್ಕೆಗೊಂಡಿದ್ದು, ಕಂಪ್ಲಿ ಕ್ಷೇತ್ರದಲ್ಲಿ 11ಜನ ಒಳಗೊಂಡಿರುತ್ತಾರೆ. ಈಗಾಗಲೇ 7ಜನರು ಸ್ವಯಂ ಉದ್ಯೋಗ ಆರಂಭಿಸಿದ್ದಾರೆ ಎಂದರು.ಡಾ.ಬಿ.ಆರ್‌.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ದಿವಾಕರ್, ಪ್ರಮುಖ ಸಿ.ಲೋಕೇಶ್, ಭಟ್ಟ ಪ್ರಸಾದ್, ಕರಿಬಸವನಗೌಡ, ಅಬ್ದುಲ್ ಮುನಾಫ್, ಮೌಲ, ಲಡ್ಡು ಹೊನ್ನೂರವಲಿ, ಬಿ.ಜಾಫರ್ ಹಬೀಬ್ ರೆಹಮಾನ್ ಇತರರಿದ್ದರು. 


ಸುದ್ದಿ ಓದಿ