ಸರ್ಕಾರ ಸಮೃದ್ಧಿ ಯೋಜನೆ ಮುಂದುವರೆಸಿದಾಗ ನಿರುದ್ಯೋಗಿಗಳು ಆರ್ಥಿಕವಾಗಿ ಸಬಲ: ಶಾಸಕ ಗಣೇಶ್
ಲೋಕದರ್ಶನ ವರದಿ
ಕಂಪ್ಲಿ 11: ಸರ್ಕಾರ ಸಮೃದ್ಧಿ ಯೋಜನೆ ಮುಂದುವರೆಸಿದಾಗ ಮಾತ್ರ ನಿರುದ್ಯೋಗಿಗಳು ಆರ್ಥಿಕವಾಗಿ ಸಬಲರಾಗಬಹುದು ಎಂದು ಶಾಸಕ ಜೆ.ಎನ್.ಗಣೇಶ್ ಇಲ್ಲಿನ ವಿನಾಯಕ ನಗರದಲ್ಲಿ ಸೋಮವಾರ ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಮೃದ್ಧಿ ಯೋಜನಡಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಮಳಿಗೆ ಆರಂಭಕ್ಕೆ ಚಾಲನೆ ನೀಡಿ ರಾಜ್ಯ ಸರ್ಕಾರ ಈ ಯೋಜನೆಯನ್ನು ಮುಂದೆವರಿಸಿದಾಗ ಮಾತ್ರ ನಿರುದ್ಯೋಗಿಗಳ ಸಮಸ್ಯೆಯನ್ನು ನೀಗಿಸಲು ಸಾಧ್ಯ ಹಬ್ಬದ ಸಮಯ ಮತ್ತು ರೈತರಿಗೆ ಹೊಲಗಳಿಗೆ ವಿದ್ಯುತ್ ಲೋಡ್ ಶೆಡ್ಡಿಂಗ್ ಅಗುತ್ತಿದೆ. ಕಲ್ಲಿದ್ದಲು ಖರೀದಿಯಲ್ಲಿ ಸರ್ಕಾರ ವಿಳಂಬ ಮಾಡಬಾರದು ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಬೊಮ್ಮಾಯಿ ಆಡಳಿತ ವಿಫಲವಾಗಿದೆ. ಕೊರೊನಾ ನಿಯಂತ್ರಿಸುವಲ್ಲಿಯೂ ಸರ್ಕಾರ ವಿಫಲವಾಗಿದ್ದರಿಂದ ಕೊರೊನಾ ಅಲೆಗಳಿಗೆ ಜನ ಈಡಾಗಬೇಕಾಯಿತು ಎಂದು ಗಂಭೀರವಾಗಿ ಆರೋಪಿಸಿದರು. ನವರಾತ್ರಿ ಹಬ್ಬದ ದಿನಗಳಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ನಿಲುಗಡೆ ಮಾಡಬಾರದು ಎಂದು ಸರ್ಕಾರವನ್ನು ಆಗ್ರಹಿಸಿದರು.
ಬಳ್ಳಾರಿಯ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕೆ.ಎಸ್.ದಿವಾಕರ, ತಾಲೂಕು ಅಭಿವೃದ್ಧಿ ಅಧಿಕಾರಿಗಳಾದ ಡಿ.ರಮೇಶ್ ನಾಯಕ್, ಎ.ಎಂ.ಸಿದ್ದಿಕಿ, ಫಲಾನುಭವಿ ಸಿ.ಎಸ್.ಪಾರ್ವತಿ ಉಮೇಶ್ ಗುಡಿಮನೆ, ಪ್ರಮುಖರಾದ ಆರ್.ಎಂ.ರಾಮಯ್ಯ, ಜಿ.ರಾಮಣ್ಣ, ಎಂ.ಉಸ್ಮಾನ್, ಪರಮೇಶ್, ಎಚ್.ಪಿ.ಶಿಕಾರಿರಾಮು, ಸಿ.ಪರಶುರಾಮ, ರುದ್ರ್ಪ ಹಂಪಾದೇವನಹಳ್ಳಿ, ಮಣ್ಣೂರು ಬಸವರಾಜ್ ಸೇರಿ ಇತರರಿದ್ದರು.