ಬೈಲಹೊಂಗಲ

ಅಭಿವೃದ್ಧಿ ಕಾಣದ ಏಣಗಿ, ಹಿಟ್ಟಣಗಿ ಗ್ರಾಮಗಳು

ಅಭಿವೃದ್ಧಿ ಕಾಣದ ಏಣಗಿ, ಹಿಟ್ಟಣಗಿ ಗ್ರಾಮಗಳು

ಗ್ರಾಮಸ್ಥರಿಂದ ಬೀಗ ಜಡಿದು ಪ್ರತಿಭಟನೆ: ಸುತಗಟ್ಟಿ ಪಂಚಾಯತಿ ಪಿಡಿಓಗೆ ಘೇರಾವ  

ಬೈಲಹೊಂಗಲ 28: ಮತಕ್ಷೇತ್ರದ ಸವದತ್ತಿ ತಾಲೂಕಿನ ವ್ಯಾಪ್ತಿಗೆ ಒಳಪಟ್ಟಿರುವ ಏಣಗಿ, ಹಿಟ್ಟಣಗಿ ಗ್ರಾಮಗಳನ್ನೊಳಗೊಂಡಿರುವ ಸುತಗಟ್ಟಿ  ಗ್ರಾಮ ಪಂಚಾಯತಿ ವತಿಯಿಂದ ಈ ಗ್ರಾಮಗಳಲ್ಲಿ ಕಳೆದ ಅನೇಕ ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗದಿರುವುದನ್ನು ಖಂಡಿಸಿ ಗ್ರಾಮಸ್ಥರೆಲ್ಲ ಸೇರಿ  ಸೋಮವಾರ ಗ್ರಾಮ ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.  

ಕಳೆದ 13 ವರ್ಷಗಳಿಂದ  ಸುತಗಟ್ಟಿ ಪಂಚಾಯತಿಯಲ್ಲೇ ಝಂಡಾ ಹೊಡೆದು ಕುಳಿತಿರುವ ಪಿಡಿಓ ಚಂದ್ರಶೇಖರ ಬಾರ್ಕಿಯವರ ನಿರ್ಲಕ್ಷ್ಯ, ಅಸಹಕಾರ ಮತ್ತು ದರ​‍್ದ ವರ್ತನೆಯೇ ಗ್ರಾಮಗಳು ಅಭಿವೃದ್ಧಿ ಕಾಣದೆ ಇರುವುದಕ್ಕೆ  ಎಂದು ಗ್ರಾಮಸ್ಥರು ಪಿಡಿಓಗೆ ಘೇರಾವ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.  

ಗ್ರಾಪಂ ಸದಸ್ಯರು ಕೂಡ ಗ್ರಾಮಸ್ಥರ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಪಿಡಿಓ ರವರು ಗ್ರಾಮ ಪಂಚಾಯತಿ ಸದಸ್ಯರಿಗೆ, ಜನ ಪ್ರತಿನಿಧಿಗಳಿಗೆ ಯಾವುದೇ ವಿಷಯ ತಿಳಿಸದೇ ಏಕ ಪಕ್ಷೀಯ ನಿರ್ಧಾರ ಕೈಗೊಳ್ಳುವ ಪಿಡಿಓ ಸಾಕಷ್ಟು ಅವ್ಯವಹಾರ ನಡೆಸುತ್ತ ಬರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಗ್ರಾಮದ ಪಕ್ಕದಲ್ಲೇ ಮಲಪ್ರಭಾ ನದಿ ಹರಿದಿದ್ದರೂ ಗ್ರಾಮಸ್ಥರು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಗ್ರಾಮದಲ್ಲಿ ಬಹಳ ವರ್ಷಗಳಿಂದ ರಸ್ತೆ ಕಾಮಗಾರಿ, ಚರಂಡಿ ಅಭಿವೃದ್ಧಿ, ಗ್ರಂಥಾಲಯ ನಿರ್ಮಾಣ, ಅಂಗನವಾಡಿ ಕಟ್ಟಡ ನಿರ್ಮಾಣ ಸೇರಿದಂತೆ ಯಾವುದೇ ಪ್ರಗತಿ ಪೂರಕ ಯೋಜನೆಗಳನ್ನು ರೂಪಿಸಿಲ್ಲ 13 ವರ್ಷಗಳಿಂದ ಇದೇ ಪಂಚಾಯತಿಯಲ್ಲಿ ಠಿಕಾಣಿ ಹೂಡಿರುವ ಪಿಡಿಓ ಮಾತ್ರ ಸ್ವಅಭಿವೃದ್ಧಿ ಹೊಂದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಕೂಡಲೇ ಪಿಡಿಓ ರವರನ್ನು ವರ್ಗಾವಣೆಗೊಳಿಸದಿದ್ದರೆ ತಾಲೂಕು ಪಂಚಾಯತಿ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.  

ಪ್ರತಿಭಟನೆ ಸುದ್ದಿ ತಿಳಿದ ಸವದತ್ತಿ ತಾಪಂ ಇಓ ಯಶವಂತಕುಮಾರ, ಸಹಾಯಕ ನಿರ್ದೇಶಕ ಸಂಗನಗೌಡ ಹಂದ್ರಾಳ, ಪಿಎಸ್‌ಐ ಶಿವಾನಂದ ಗುಡಗನಟ್ಟಿ, ಸ್ಥಳಕ್ಕೆ ಆಗಮಿಸಿ ಇನ್ನು ಎರಡು ಮೂರು ದಿನಗಳೊಳಗಾಗಿ ಪಿಡಿಓ ವರ್ಗಾವಣೆಗೆ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.   

ಗ್ರಾಪಂ ಅಧ್ಯಕ್ಷೆ ಶೋಭಾ ತಳವಾರ, ಉಪಾಧ್ಯಕ್ಷ ಶಿವಾನಂದ ಸಂಗೊಳ್ಳಿ, ನಾಗರಾಜ ದಳವಾಯಿ, ಬಸವರಾಜ ಹರ್ಲಾಪೂರ, ಶಾರದಾ ಸೊಗಲದ, ರುದ್ರ​‍್ಪ ಪೆಂಟೆದ, ಶಾಂತವ್ವ ಪಠಾಣಿ, ಉಮೇಶ ಕುರಿ, ಮಲ್ಲವ್ವ ಸಣ್ಣಾರ, ಪ್ರೇಮಾ ಗದನಮಠ, ಕಾಶವ್ವ ಕುರಿ, ರತ್ನವ್ವ ಮಾದರ, ವಸಂತಗೌಡ ಪಾಟೀಲ, ಪಾಂಡುರಂಗ ತಳವಾರ, ನಾಗಪ್ಪ ತಳವಾರ, ಗ್ರಾಮಸ್ಥರಾದ ಮಹೇಶ ಪಾಟೀಲ, ಶಶಿಧರ ಚಿಕ್ಕೋಡಿ, ಯಲ್ಲಪ್ಪ ಲಗಮಣ್ಣವರ, ಚನ್ನಪ್ಪ ಹರ್ಲಾಪೂರ, ಮಂಜುನಾಥ ಪಠಾಣಿ, ರವಿ ಅಬ್ಬಾಯಿ, ಬೀರ​‍್ಪ ಕುರಿ ಹಾಗೂ ನೂರಾರು ಇದ್ದರು. 


ಸುದ್ದಿ ಓದಿ