ಮುಂದಗೋಡ

ಅನಧಿಕೃತ ಸೆಪ್ಟಿಕ್ ಟ್ಯಾಂಕ್ ನಿರ್ಮಾಣ: ಕಾನೂನು ಕ್ರಮ ಆಗ್ರಹ

ಅನಧಿಕೃತ ಸೆಪ್ಟಿಕ್ ಟ್ಯಾಂಕ್ ನಿರ್ಮಾಣ: ಕಾನೂನು ಕ್ರಮ ಆಗ್ರಹ

ಲೋಕದರ್ಶನ ವರದಿ 

ಮುಂಡಗೋಡ: ಪಟ್ಟಣದ ಬೃಂದಾವನ ಲೇಓಟ್‌ನಲ್ಲಿ ಪಟ್ಟಣ ಪಂಚಾಯತಗೆ ನೀಡಿದ ಜಾಗದಲ್ಲಿ ಅನಧಿಕೃತವಾಗಿ ಸೆಪ್ಟಿಕ್ ಟ್ಯಾಂಕ್ ನಿರ್ಮಾಣ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಪ.ಪಂ.ಕೆಲವು ಸದಸ್ಯರು ಆಗ್ರಹಿಸಿದರು. 

ಮಂಗಳವಾರ ಪಟ್ಟಣ ಪಂಚಾಯತ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಈ ಬಗ್ಗೆ ಮಾತನಾಡಿದರು. ಇದಕ್ಕೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಮಾತನಾಡಿ ಈಗಾಗಲೆ ಬೃಂದಾವನ ಲೇಓಟ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಅಕ್ಟೋಬರ್‌ದಲ್ಲಿ ತೆರವು ಮಾಡಿ ಕೊಡುತ್ತೇವೆ ಎಂದು ಲಿಖಿತವಾಗಿ ನೀಡಿದ್ದಾರೆ. ಎಂದಾಗ ಸದಸ್ಯ ವಿಶ್ವನಾಥ ಪವಾಡಶೆಟ್ಟರ ಮಾತನಾಡಿ ನಮಗೆ ನೀಡಿದ ಸಿಎ ಸೈಟ್ನಲ್ಲಿ ಅನಧಿಕೃತವಾಗಿ ಸೇಫ್ಟಿಕ್ ಟ್ಯಾಂಕ್ ನಿರ್ಮಿಸಿದ್ದಾರೆ. ಈತನ ಮೇಲೆ ಎನು ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಪ್ರಶ್ನಿಸಿದರು. ಮಧ್ಯೆ ಪ್ರವೇಶಿಸಿದ ಸದಸ್ಯ ಫಣಿರಾಜ ಹದಳಗಿ ತಮ್ಮ ಇಲಾಖೆಯ ವಕೀಲರನ್ನು ಸಂಪರ್ಕಿಸಿ ಅದರಂತೆ ಕಾನೂನು ಕ್ರಮ ಕೈಗೊಳ್ಳಲು ಮುಖ್ಯಾಧಿಕಾರಿಗೆ ಹೇಳಿದರು.  

ಬೃಂದಾವನ ಲೇಓಟ್‌ನ ಪಕ್ಕದ ಜಾಗವನ್ನು ರಸ್ತೆ ನಿರ್ಮಾಣ ಮಾಡಲು ಬಿಟ್ಟು ಕೊಡಲು ವ್ಯಕ್ತಿಯೊಬ್ಬರು ಹಾಕಿದ ಅರ್ಜಿಗೆ ಸದಸ್ಯರು ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿ ಈ ಹಿಂದೆ ಸಾಮಾನ್ಯ ಸಭೆಯಲ್ಲಿ ಇದೆ ವಿಷಯವಾಗಿ ಸಭೆಯಲ್ಲಿ ತಿರಸ್ಕರಿಸಿದ ಅರ್ಜಿಯನ್ನು ಸಭೆಗೆ ತಂದಿರುವುದು ಏಕೆ ಎಂದು ಮಾಜಿ ಉಪಾಧ್ಯಕ್ಷ ಮಂಜುನಾಥ ಹರಮಲಕರ ಪ್ರಶ್ನಿಸಿದರು. ಈ ಹಿಂದೆ ಅರ್ಜಿ ನೀಡಿರುವುದು ನನ್ನ ಗಮನಕ್ಕೆ ಇಲ್ಲಾ ಎಂದು ಮುಖ್ಯಾಧಿಕಾರಿ ಹೇಳುತ್ತಿದ್ದಂತೆ ಮತ್ತೆ ಮಧ್ಯೆ ಪ್ರವೇಶಿಸಿದ ಮಂಜುನಾಥ ಹರಮಲಕರ ಅವರ ಹೊಲಕ್ಕೆ ಹೋಗಲು ನೀವು ರಸ್ತೆ ಮಾಡಿ ಕೊಡಬೇಕೆ ಎಂದು ಪ್ರಶ್ನಿಸಿದರು. ರಸ್ತೆಗೆ ಸ್ಥಳ ಕೇಳಿದ್ದು ಬಿಟ್ಟು ಹೊಸ ಲೇಓಟ್ ಮಾಡಲು ಪರವಾನಗಿ ಕೇಳಿದ್ದಾರೆ ಎಂದು ಮುಖ್ಯಾಧಿಕಾರಿ ಹೇಳಿದರು. ಸದಸ್ಯ ಶೇಖರ ಲಮಾಣಿ ಮಾತನಾಡಿ ನಿಯಮದಂತೆ ಸನಿಹವಿರುವ ಕೆರೆಯಿಂದ ಮೂರು ಮೀಟರ್ ಬಿಟ್ಟು ರಸ್ತೆ ಮಾಡಬೇಕು ಎಂದು ನಿಯಮವಿದೆ. ಅಲ್ಲಿ ಜಾಗವೆ ಇಲ್ಲಾ ಮೊದಲು ಆ ಸ್ಥಳದ ನಕ್ಷೆ ತರಿಸಿ ಸ್ಥಳ ಪರೀಶೀಲನೆ ಮಾಡಿ ಮುಂದಿನ ಸಭೆಯಲ್ಲಿ ಚರ್ಚೆ ಮಾಡೋಣ ಎಂದು ನಿರ್ಧರಿಸಲಾಯಿತು. ಪಟ್ಟಣ ಪಂಚಾಯತ ಜಮಾ ಖರ್ಚು ನೋಡಿದರೆ ಸಾರ್ವಜನಿಕ ಗಣೇಶ ಚತುರ್ಥಿಯ ಜಮಾ ಖರ್ಚು ಇದ್ದಂತೆ ಇದೆ ಎಷ್ಟು ಜಮಾ ಬಂದಿದೆ ಅಷ್ಟೇ ಖರ್ಚು ತೋರಿಸುತ್ತೀರಿ. ಪ್ರತಿ ಸಭೆಯಲ್ಲಿ ಇದೆ ಆಗಿದೆ ಎಂದು ಪ.ಪಂ.ಸದಸ್ಯ ಮಂಜುನಾಥ ಹರಮಲಕರ ಹೇಳುತ್ತಿದ್ದಂತೆ ಸಭೆಯಲ್ಲಿ ಇದ್ದ ಸದಸ್ಯರು ಗೊಳ್ಳಂತ ನಕ್ಕಿದ್ದು ಕಂಡು ಬಂದಿತು. ಶುದ್ಧ ಕುಡಿಯುವ ನೀರಿನ ಘಟಕವನ್ನು ಟೆಂಡರ್ ನೀಡಿದಾಗ ಪ.ಪಂ.ಗೆ ಆದಾಯ ಬರುತ್ತಿತ್ತು. ಆದರೆ ಈಗ ಪಟ್ಟಣ ಪಂಚಾಯತ ನಿರ್ವಹಣೆ ಮಾಡುತ್ತಿರುವುದರಿಂದ ಹೆಚ್ಚಿನ ಆದಾಯ ಬರುತ್ತಿಲ್ಲ ಆದರಿಂದ ಕೂಡಲೆ ಟೆಂಡರ್ ಕರೆಯುವಂತೆ ಸದಸ್ಯ ಮಹಮ್ಮದ್‌ಗೌಸ್ ಮಕಾಂದಾರ  ಹೇಳಿದರು. 

ಅಧ್ಯಕ್ಷತೆಯನ್ನು ಪ.ಪಂ.ಅದ್ಯಕ್ಷೆ ಜಯಸುಧಾ ಭೋವಿ ವಹಿಸಿದ್ದರು. ಉಪಾಧ್ಯಕ್ಷ ಶ್ರೀಕಾಂತ ಸಾನು, ಸ್ಥಾಯಿ ಸಮಿತಿಯ ಅಧ್ಯಕ್ಷೆ ಶಕುಂತಲಾ ನಾಯಕ, ಕಿರಿಯ ಎಂಜಿನಿಯರ್ ಶಂಕರ ದಂಡಿನ, ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ