ಹುನಗುಂದ

ತಾಲೂಕ ಘಟಕದ ನೂತನ ಅಧ್ಯಕ್ಷರ ಅವಿರೋಧ ಆಯ್ಕೆ

ತಾಲೂಕ ಘಟಕದ ನೂತನ ಅಧ್ಯಕ್ಷರ ಅವಿರೋಧ ಆಯ್ಕೆ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾನಿಪ ಸಭೆಯಲ್ಲಿ ನೂತನ ಕಾನಿಪ ಪದಾಧಿಕಾರಿ ಆಯ್ಕೆ ಮಾಡಲಾಯಿತು.

ಹುನಗುಂದ19: ಕಾರ್ಯ ನಿರತ ಪತ್ರಕರ್ತ ಸಂಘದ ತಾಲೂಕ ಘಟಕದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಎಂ ಬಂಡರಗಲ್ಲ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಗಂಗೂರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.                                                                         

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘ ತಾಲೂಕ ಘಟಕ ಅಧ್ಯಕ್ಷ ಅಶೋಕ ಹಂದ್ರಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾನಿಪ ಸದಸ್ಯರ ಸರ್ವಾನುಮತದಿಂದ ಈ ಆಯ್ಕೆ ಪ್ರಕ್ರಿಯೆ ನಡೆಯಲಾಯಿತು. ರವಿ ಕೆಲೂರ, ವಿಜಯ ಸಿಂಗದ, ರಮೇಶ ತಾರಿವಾಳ ಉಪಾಧ್ಯಕ್ಷರಾಗಿ ಆಯ್ಕೆಯಾದರೇ ಕಾರ್ಯದರ್ಶಿ ಬಸವರಾಜ ನಿಡಗುಂಡಿ, ಸಹ ಕಾರ್ಯದರ್ಶಿಯಾಗಿ ಎಫ್‌.ಎಂ. ಪಿಂಜಾರ, ಖಜಾಂಚಿಯಾಗಿ ಹಸನ್ ಬೇಪಾರಿ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶೋಕ ಹಂದ್ರಾಳ, ಸುರೇಶ ಪತ್ತಾರ, ಮುತ್ತು ಬಳಿಗಾರ, ಜಗದೀಶ ಹದ್ಲಿ ಅವರನ್ನು ಆಯ್ಕೆಯಾದರು.                         

ಹಿರಿಯ ಪತ್ರಕರ್ತ ಅಮರೇಶ ನಾಗೂರ, ವೀರೇಶ ಕುರ್ತಕೋಟಿ, ಮಹಾಂತೇಶ ಪಾಟೀಲ, ಮಲ್ಲಿಕಾರ್ಜುನ ಹೊಸಮನಿ, ಅಂದಾನೆಪ್ಪ ಸುಂಕದ, ರಾಜು ಬಡಿಗೇರ, ಯಮನೂರ ಮಾದರ ಸೇರಿದಂತೆ ಅನೇಕರು ಇದ್ದರು.  

ಸುದ್ದಿ ಓದಿ