ಬಳ್ಳಾರಿ

ಬಳ್ಳಾರಿ ಎಪಿಎಂಸಿ ಅಧ್ಯಕ್ಷರಾಗಿ ಉಮೇಶ್ ಕುಮಾರ್

ಬಳ್ಳಾರಿ ಎಪಿಎಂಸಿ ಅಧ್ಯಕ್ಷರಾಗಿ ಉಮೇಶ್ ಕುಮಾರ್



ಲೋಕದರ್ಶನ ವರದಿ 

ಬಳ್ಳಾರಿ 26: ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷರನ್ನಾಗಿ ಉಮೇಶ್ ಕುಮಾರ್ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಕರ್ನಾಟಕ ಸರ್ಕಾರ ನಾಮ ನಿರ್ದೇಶನಗೊಳಿಸಿ ಆದೇಶಿಸಿದೆ.  

ಈ ಸಂದರ್ಭದಲ್ಲಿ ಬಳ್ಳಾರಿಯ ಭಾರತೀಯ ಜನತಾ ಪಕ್ಷದ ಮುಖಂಡರು, ಎ.ಪಿ.ಎಂ.ಸಿ ವರ್ತಕರು ಮತ್ತು ಅವರ ಸ್ನೇಹ ಬಳಗದವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.  

ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಉಮೇಶ್‌ಕುಮಾರ್‌ರವರು, ಪಕ್ಷಕ್ಕೆ ನನ್ನ ಸೇವೆಯನ್ನು ಗುರುತಿಸಿ ನನಗೆ ಈ ಜವಾಬ್ದಾರಿಯನ್ನು ನೀಡಿದ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಸಚಿವ ಬಿ ಶ್ರೀರಾಮುಲು, ಶಾಸಕ ಗಾಲಿ ಸೋಮಶೇಖರ್‌ರೆಡ್ಡಿ, ಮಾಜಿ ಶಾಸಕ ಸುರೆಶ್‌ಬಾಬು, ಮಾಜಿ ಎಂ.ಪಿ ಸಣ್ಣ ಪಕ್ಕೀರ​‍್ಪ, ಹಾಲಿ ಸಂಸದ ವೈ ದೇವೇಂದ್ರ ಇವರುಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಮತ್ತು ಈ ಹುದ್ದೆಗೆ ನಾನು ಮತ್ತು ನಮ್ಮ ಪದಾಧಿಕಾರಿಗಳು ನ್ಯಾಯ ಒದಗಿಸಿ ಎ.ಪಿ.ಎಂ.ಸಿ ಲೋಪದೋಷಗಳನ್ನು ಸರಿಪಡಿಸಿ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದರು.  

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ ಪಂಪನಗೌಡ ಕಾರೆಕಲ್ಲು, ಸದಸ್ಯ ಕೆ ಬಾಬು ಕಾಕರ‌್ಲತೋಟ, ಬಿ ವೆಂಕಟೇಶ್, ಜಿ ತಿರುಮಲರೆಡ್ಡಿ ದಮ್ಮೂರು, ಕೃಷ್ಣಾರೆಡ್ಡಿ ಅವ್ವಂಬಾವಿ, ಸುಜಾತ ಬೆಳಗಲ್ಲು, ಟಿ ಬುಗ್ಗಯ್ಯ ಸಂಗನಕಲ್ಲು, ಜಿ ಹುಲುಗಪ್ಪ ಹೊಸಯರಗುಡಿ, ಎ ಎರಿ​‍್ರಸ್ವಾಮಿ ಬೊಬ್ಬಕುಂಟೆ, ಸುಶೀಲಾಬಾಯಿ ಹೊನ್ನಳ್ಳಿತಾಂಡ, ಮದಿರೆ ಕುಮಾರಸ್ವಾಮಿ, ಪೂಜಾರಿ ಲಕ್ಷ್ಮಿ, ರಾಮಾಂಜಿನಿ ಕಪ್ಪಗಲ್ಲು, ಜಿ ಸೋಮಶೇಖರಗೌಡ ಕುರುಗೋಡು ಮತ್ತು ಪಕ್ಷದ ಮುಖಂಡರು ಮತ್ತು ಸ್ನೇಹಿತರಾದ ಮೆಡಿಕಲ್ ಶಾಪ್ ಮಲ್ಲಿ, ಬಿ ಮಲ್ಲಿಕಾರ್ಜುನ, ಸತ್ಯಾ, ಶಿವಶಂಕರ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ