ರಾಜ್ಯ

ಉಡುಪಿ; ಚಲಿಸುತ್ತಿದ್ದ ರೈಲಿನ ಮೇಲೆ ಉರುಳಿದ ಬೃಹತ್ ಮರ

ಉಡುಪಿ; ಚಲಿಸುತ್ತಿದ್ದ ರೈಲಿನ ಮೇಲೆ ಉರುಳಿದ ಬೃಹತ್ ಮರ

ಮಂಗಳೂರು, ಆಗಸ್ಟ್ 6   ಉಡುಪಿ ರೈಲ್ವೆ ನಿಲ್ದಾಣದ ಬಳಿ ಕೇರಳ ಮಾರ್ಗವಾಗಿ ಚಲಿಸುತ್ತಿದ್ದ  ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನ ಮೇಲೆ ಮಂಗಳವಾರ ಬೆಳಗ್ಗೆ ಭಾರಿ ಮರವೊಂದು ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ.  

ಮುಂಬೈನ ಕುರ್ಲಾದಿಂದ ತಿರುವನಂತಪುರಂ ಮಾರ್ಗವಾಗಿ ಸಂಚರಿಸುತ್ತಿದ್ದ ನೇತ್ರಾವತಿ ಎಕ್ಸ್ ಪ್ರೆಸ್ ಮೇಲೆ, ಭಾರಿ ಮರವೊಂದು ಉರುಳಿ ಬಿದ್ದಿದೆ. ಜಿಲ್ಲೆಯಲ್ಲಿ ಭಾರಿ ಗಾಳಿ ಮಳೆಯ ಪರಿಣಾಮವಾಗಿ  

ಬುಡ ಸಡಿಲವಾಗಿದ್ದ ಮರ ಧರೆಗುರುಳಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ರೈಲು ಕೆಲ ಕಾಲ ಸ್ಥಗಿತಗೊಂಡು ನಂತರ ಸಂಚಾರ ಮುಂದುವರಿಸಿದೆ ಎಂದು ಮೂಲಗಳು ತಿಳಿಸಿವೆ.

ಸುದ್ದಿ ಓದಿ