ಮನರಂಜನೆ

ವಿಮಾನ ಅಪಘಾತ… ಹಾಲಿವುಡ್‌ ನಟ ದುರ್ಮರಣ

ವಿಮಾನ ಅಪಘಾತ… ಹಾಲಿವುಡ್‌ ನಟ ದುರ್ಮರಣ

ವಾಷಿಂಗ್ಟನ್,  ಮೇ 31:ಅಮೆರಿಕಾ ದಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಪ್ರಯಾಣಿಕರನ್ನು ಹೊತ್ತು  ಸಾಗುತ್ತಿದ್ದ  ಜೆಟ್ ವಿಮಾನವೊಂದು ಅಪಘಾತಕ್ಕೀಡಾಗಿ ಏಳು  ಮಂದಿ  ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ   ನಟ ಜೋಯಿ ಲಾರಾ ಕೂಡ  ಸೇರಿದ್ದಾರೆ ಎಂದು ತಿಳಿದುಬಂದಿದೆ.  ಜೋಯಿ ಲಾರಾ   ‘ಟಾರ್ಜನ್’ ಟಿವಿ  ಸರಣಿಮೂಲಕ  ಜಗತ್ತಿನೆಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದರು.ಶನಿವಾರ ಬೆಳಿಗ್ಗೆ ಟೆನ್ನೆಸ್ಸಿ   ಯಿಂದ   ಫ್ಲೋರಿಡಾಕ್ಕೆ     ತೆರಳುತ್ತಿದ್ದಾಗ   11 ಗಂಟೆಗೆ   ವಿಮಾನ ಅಪಘಾತಕ್ಕೀಡಾಗಿದೆ. ದಕ್ಷಿಣ ನ್ಯಾಶ್ವಿಲ್ಲೆಯ ಪರ್ಸಿ ಸ್ಟ್ರೀಕ್  ಸರೋವರದಲ್ಲಿ ವಿಮಾನದ  ಭಗ್ನಾವ ಶೇಷಗಳು  ಕಂಡುಬಂದಿವೆ  ಎಂದು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಹೇಳಿದೆ.  ಅಪಘಾತದಲ್ಲಿ   ಮೃತಪಟ್ಟವರಲ್ಲಿ  ನಟ ಜೋಯಿ ಲಾರಾ, ಪತ್ನಿ ಗ್ವೆನ್ ಶ್ವಾಂಬ್ಲಿನ್ ಸೇರಿದ್ದಾರೆ. ಅಪಘಾತದಲ್ಲಿ  ವಿಮಾನದ ಅವಶೇಷ ಗಳು ಚಲ್ಲಾ ಪಿಲ್ಲಿಯಾಗಿದ್ದು ಸೋಮವಾರ ಕೂಡಾ   ಶೋಧನೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಪಘಾತಕ್ಕೆ  ಕಾರಣ  ಏನು ಎಂಬುದು ಇನ್ನೂ ಪತ್ತೆಹಚ್ಚಬೇಕಿದೆ.ಲಾರಾ  (ವಿಲಿಯಂ ಜೋಸೆಫ್ ಲಾರಾ) 1989ರಲ್ಲಿ ತೆರೆ ಕಂಡ  “ ಟಾರ್ಜನ್ ಇನ್ ಮ್ಯಾನ್‌ಹ್ಯಾಟನ್” ಸಿನಿಮಾ   ಮೂಲಕ ಪ್ರಸಿದ್ಧರಾಗಿದ್ದರು.  ನಂತರ ಅವರು 1996 ರಿಂದ ವರ್ಷ  ಕಾಲ  ಪ್ರಸಾರಗೊಂಡ   ‘ಟಾರ್ಜನ್ ದಿ ಎಪಿಕ್ ಅಡ್ವೆಂಚರ್ಸ್’ ಟಿವಿ ಸರಣಿ ಮೂಲಕ ಜಾಗತಿಕ ಮಟ್ಟದಲ್ಲಿ ಅಭಿಮಾನಿಗಳನ್ನು ಪಡೆದಿದ್ದರು.  ಸ್ವಭಾವತಃ  ಮಾರ್ಷಲ್‌ ಆರ್ಟ್ಸ್‌ ತಜ್ಞರಾದ ಲಾರಾ   ಟಾರ್ಜನ್‌  ಆಗಿ   ಡೋಪ್ ಇಲ್ಲದೆ ಸಾಹಸ  ಮಾಡುತ್ತಿದ್ದರು. 55 ವರ್ಷದ ಲಾರಾ, ಗ್ವೆನ್ ಶ್ವಾಂಬ್ಲಿನ್ ಅವರನ್ನು 2018 ರಲ್ಲಿ ವಿವಾಹವಾಗಿದ್ದರು.


ಸುದ್ದಿ ಓದಿ