ಮನರಂಜನೆ

ಮೆಗಾಸ್ಟಾರ್ ಚಿರಂಜೀವಿ ಸೊಸೆಯ ವೆಬ್ ಸೈಟ್ ಗೆ ಅತಿಥಿ ಸಂಪಾದಕಿಯಾದ ರಾಕುಲ್ ಪ್ರೀತ್ ಸಿಂಗ್

ಮೆಗಾಸ್ಟಾರ್ ಚಿರಂಜೀವಿ ಸೊಸೆಯ  ವೆಬ್ ಸೈಟ್ ಗೆ ಅತಿಥಿ ಸಂಪಾದಕಿಯಾದ ರಾಕುಲ್ ಪ್ರೀತ್ ಸಿಂಗ್

ಹೈದರಾಬಾದ್‍/ಬೆಂಗಳೂರು, ಫೆ 09 : ತೆಲುಗಿನ ಖ್ಯಾತ ನಟ ಚಿರಂಜೀವಿ ಅವರ ಸೊಸೆ, ರಾಮ್ ಚರಣ್ ತೇಜ ಅವರ ಪತ್ನಿ ಉಪಾಸನಾ ಕಮಿನೇನಿ ಕೊನಿಡೇಲಾ ಆನ್ಲೈನ್ನಲ್ಲಿ ಹೊಸ ಸಾಹಸಕ್ಕೆ ಮುಂದಾಗಿರುವುದು ಎಲ್ಲರಿಗೂ ತಿಳಿದಿದ್ದು, ಅವರ  ಸಾಹಸಕ್ಕೆ ಬಹುಭಾಷಾ ತಾರೆ ರಾಕುಲ್ ಪ್ರೀತ್ ಕೈ ಜೋಡಿಸಿದ್ದಾರೆ. ಇತ್ತೀಚೆಗಷ್ಟೇ ಇದೇ ಶೋಗೆ ರಶ್ಮಿಕ ಮಂದಣ್ಣ ಆಗಮಿಸಿದ್ದರು.ಆರೋಗ್ಯ, ಲೈಫ್ ಸ್ಟೈಲ್, ಮಾನಸಿಕ ಮತ್ತು ದೈಹಿಕ ಆರೋಗ್ಯ, ಪ್ರಸ್ತುತ ಟ್ರೆಂಡಿಂಗ್ ವಿಚಾರಗಳನ್ನು ಯೂಆರ್ಲೈಫ್ ಮೂಲಕ ಉಪಾಸನಾ ಹೇಳಹೊರಟಿದ್ದಾರೆ. URLife.co.in. ಹೆಸರಿನ ನೂತನ ವೆಬ್ ಸೈಟ್ ತೆರೆದಿದ್ದು, ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಉಪಾಸನಾ ಉಸ್ತುವಾರಿ ವಹಿಸಿಕೊಂಡರೆ, ಈ ಸಲದ ಅತಿಥಿ ಸಂಪಾದಕಿಯಾಗಿ ರಾಕುಲ್ ಪ್ರೀತ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಈ ಸಲದ ಸಂಚಿಕೆಯಲ್ಲಿ ಯುವಪೀಳಿಗೆ, ಆರೋಗ್ಯ, ಫಿಟ್ನೆಸ್, ಆಹಾರ ಪದ್ಧತಿ, ವ್ಯಸನ ಬಿಡುವಿಕೆ, ಒತ್ತಡ ನಿವಾರಣೆ ಸೇರಿ ಹಲವು ವಿಚಾರವಾಗಿ ರಾಕುಲ್ ಮಾತನಾಡಿದ್ದಾರೆ. ಅವರ ಆರೋಗ್ಯಕರ ಜೀವನದ ಗುಟ್ಟನ್ನು ಓದುಗರಿಗೆ ಈ ಮೂಲಕ ತಿಳಿಸಲಿದ್ದಾರೆ. 

ಉಪಾಸನಾ ಅವರ  URLife.co.in. ಎಂಬುದು ಒಂದು ಆರೋಗ್ಯಕರ ವೇದಿಕೆ. ಇಲ್ಲಿ ಆಯ್ದ ಕೆಲ ಕ್ಷೇತ್ರಗಳ ನುರಿತ ಪರಣಿತರು, ವೈದ್ಯರು ಸದ್ಯದ ಲೈಫ್ಸ್ಟೈಲ್, ತಂತ್ರಜ್ಷಾನದ ಬಗ್ಗೆ ಈ ವೇದಿಕೆ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ಓದುಗರಿಗೆ ಅತ್ಯುತ್ತಮವಾದ ಡಯಟ್ ಟಿಪ್ಸ್, ನುರಿತವರಿಂದ ಉಪಯುಕ್ತ ಮಾಹಿತಿ, ಉಚಿತ ತರಗತಿಗಳು, ವಿಡಿಯೋ ಮಾಹಿತಿ, ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯೂ ಬೆರಳ ತುದಿಯಲ್ಲಿಯೇ  ಲಭ್ಯವಾಗಲಿದೆ.

ಈ ವಿಶೇಷಗಳ ಗುಚ್ಛದ URLife.co.in. ಗೆ ಈ ಸಲದ ಗೆಸ್ಟ್ ಎಡಿಟರ್ ಆಗಿ ರಾಕುಲ್ ಪ್ರೀತ್ ಕಾಣಿಸಿಕೊಳ್ಳಲಿದ್ದು, ಅವರನ್ನೇ ಆಯ್ದುಕೊಳ್ಳುವುದಕ್ಕೆ ಒಂದಷ್ಟು ಅಂಶಗಳನ್ನು ಸ್ವತಃ ಉಪಾಸನಾ ಹೇಳಿಕೊಂಡಿದ್ದು, ರಾಕುಲ್ ಸದಾ ನಗುಮೊಗದ ಮತ್ತು ಪಾಸಿಟಿವ್ ವೈಬ್ಅನ್ನು ತನ್ನೊಳಗೆ ಇಟ್ಟುಕೊಂಡಿರುವ ನಟಿ. ಕೋಟ್ಯಂತರ ಯುವ ಪೀಳಿಗೆಯ ನೆಚ್ಚಿನ ನಟಿಯಾಗಿ ಗುರುತಿಸಿಕೊಳ್ಳುವುದರ ಜತೆಗೆ ನಗುವಿನ ಮೂಲಕವೇ ಆರೋಗ್ಯಕರ ಸಂದೇಶವನ್ನು ನೀಡುತ್ತಿದ್ದಾರೆ. ಡಜನ್ ಗಟ್ಟಲೇ ಸಿನಿಮಾಗಳಲ್ಲಿ ಬಿಜಿಯಾಗಿರುವ ರಾಕುಲ್ ಫಿಟ್ನೆಸ್ ವಿಚಾರವಾಗಿಯೂ ಸಾಕಷ್ಟು ಕಾಳಜಿ ವಹಿಸುತ್ತಾರೆ ಎಂದಿದ್ದಾರೆ.

  


ಸುದ್ದಿ ಓದಿ