ಬಳ್ಳಾರಿ

ದೇಶದ ಅರಾಜಕತೆ ನರೇಂದ್ರ ಮೋದಿ ನೇರ ಹೊಣೆ: ಉಗ್ರಪ್ಪ

ದೇಶದ ಅರಾಜಕತೆ ನರೇಂದ್ರ ಮೋದಿ ನೇರ ಹೊಣೆ: ಉಗ್ರಪ್ಪ

ಬಳ್ಳಾರಿ 26: ದೇಶದ ಅರಾಜಕತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೆ ನೇರ ಹೊಣೆಯಾಗಿದ್ದಾರೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಆರೋಪಿಸಿದರು. ನಗರದ ಜಿಲ್ಲಾಧಿಕಾರಗಳ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ದೇಶದ ಮೊದಲ ಉಪ ಪ್ರಧಾನಿಗಳಾದ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಹೆಸರನ್ನು ಕೇವಲ ರಾಜಕೀಯವಾಗಿ ಬಳಸಿಕೊಂಡು ಅಗೌರವ ತೋರಿದ ನರೇಂದ್ರ ಮೋದಿ ಅವರು ಸೆಲ್ಫಿಸ್ ರಾಜಕಾರಣಿಯಾಗಿದ್ದಾರೆ ಎಂದರು. 1960ರಲ್ಲಿ ಮೋಟೆರಾ ಕ್ರಿಕೆಟ್ ಸ್ಥಾಪನೆಗೆ ಆಡಿಗಲ್ಲಿ ಹಾಕಲಾಗಿತ್ತು, ಆದಕ್ಕೆ ಸರ್ದಾರ ವಲ್ಲಭಾಯ್ ಪಟೇಲ್ ಹೆಸರಿಡಲಾಗಿತ್ತು. ಆದರೆ ಇತ್ತೀಚೆಗೆ ಪಟೇಲ್ ಅವರು ಹೆಸರು ತೆಗೆದು ಮೋದಿ ತನ್ನ ಹೆಸರು ಇಟ್ಟಿಕೊಂಡು ಪಟೇಲರಿಗೆ ಅವಮಾನ ಮಾಡಿದ್ದಾರೆ ಎಂದರು. ಪ್ರಜಾಪ್ರಭುತ್ವದಲ್ಲಿ ಬಿಜೆಪಿಯಿಂದ ಸ್ವತಂತ್ರ ಹರಣವಾಗ್ತಿದೆ. ಪ್ರಧಾನಮಂತ್ರಿಗಳ ಪೈಕಿ ಅತ್ಯಂತ ಸುಳ್ಳುಗಾರ, ಸಮಯಸಾಧಕ, ಕುತಂತ್ರ ರಾಜಕಾರಣಿ ಅಂದರೆ ಪ್ರಧಾನಿ ಮೋದಿ ಮಾತ್ರ ಎಂದರು. ಪ್ರಸ್ತುತ ದೇಶದಲ್ಲಿ ಕಚ್ಚಾ ತೈಲ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್ 100ರ ಗಡಿ ದಾಟಿದೆ. 800ರೂ ಚಿಲ್ಲರೇ ಗ್ಯಾಸ್ ಆಗಿದೆ. ರೈತರು ಹಾಗೂ ಜನಸಾಮಾನ್ಯರ ಜೊತೆಗೆ ಚೆಲ್ಲಾಟ ಆಡುವುದು ಸರಿಯಲ್ಲ, ಇದರ ಬಗ್ಗೆ ಬಿಜೆಪಿಯವರು ಏನ್ ಹೇಳ್ತಾರೆ ಎಂದು ಪ್ರಶ್ನಿಸಿದರು. 

ಹೊಸ ತಳಿಯ ಜಿಗಣೆ ಜೀವಿಗಳು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದೇ ಆದರೆ ರಾಜ್ಯ ಅಭಿವೃದ್ಧಿ ಆಗುತ್ತದೆ ಎಂದಿದ್ರು. ಆದರೆ ಕೇಂದ್ರ ಸರ್ಕಾರವು ರೈತರು ಹಾಗೂ ಜನಸಾಮಾನ್ಯರಿಗೆ ಬೆಲೆ ಏರಿಸಿ ರಕ್ತ ಹಿಂಡುಯು ಹೊಸ ತಳಿಯ ಜಿಗಣೆ ಜೀವಿಗಳು ಸೃಷ್ಠಿಯಾಗಿವೆ ಎಂದರು. ರಾಜ್ಯದಿಂದ 2,500 ಲಕ್ಷ ಕೋಟಿ ರೂ.ಗಳ ಆದಾಯ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಕೇವಲ 31 ಸಾವಿರ ಕೋಟಿ ರೂ. ರಾಜ್ಯಕ್ಕೆ ನೀಡುತ್ತಿದೆ. ತೈಲ, ಅನಿಲದಿಂದಲೇ 31 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ. ಆದಾಯ ತೆರಿಗೆಯಿಂದ ಅಂದಾಜು ಸಾವಿರ ಕೋಟಿಗೂ ಅಧಿಕ ತೆರಿಗೆ ಸಂಗ್ರಹವಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಕಡಿಮೆ ಅನುದಾನ ನೀಡಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು. 

ಮೋದಿಯಿಂದ ಸ್ವಾತಂತ್ರ್ಯ ಸೇನಾನಿಗೆ ಅವಮಾನ: ಅಹಮದಾಬಾದ್ ಕ್ರೀಡಾಂಗಣದಿಂದ ಸರ್ದಾರ್ ವಲ್ಲಭಭಾಯ್ ಪಟೇಲರ ಹೆಸರು ತೆಗೆದು, ತಮ್ಮ ಹೆಸರಿಡುವ ಮೂಲಕ ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕನಿಗೆ ಮೋದಿ ಅವಮಾನ ಮಾಡಿದ್ದಾರೆ. ಕೂಡಲೇ ಪಟೇಲರ ಹೆಸರನ್ನು ಕ್ರೀಡಾಂಗಣಕ್ಕೆ ಮರು ನಾಮಕರಣ ಮಾಡಬೇಕು. ಇಲ್ಲದಿದ್ದರೆ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ರೈತರಿಂದ ಎರಡನೇ ಸ್ವಾತಂತ್ರ್ಯ ಸಮರ: ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಮೊದಲನೇ ಸ್ವಾತಂತ್ರ್ಯ ಸಂಗ್ರಾಮ ಹೇಗೆ ನಡೆಯಿತೋ ಅದೇ ಮಾದರಿಯಲ್ಲಿ ದೇಶದ ನಿಜ ಸೇನಾನಿಗಳಾದ ರೈತಾಪಿ ವರ್ಗ ಕೇಂದ್ರ ಸರ್ಕಾರದ ವಿರುದ್ಧ ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡುವ ಕಾಲ ಸನ್ನಿಹಿತವಾಗಿದೆ ಎಂದು ಉಗ್ರಪ್ಪ ಹೇಳಿದರು. ರಾಜ್ಯ ಯುವ ಕಾಂಗ್ರೆಶ್ ಪ್ರಧಾನ ಕಾರ್ಯದರ್ಶಿ ಎಂ ಹನುಮ ಕಿಶೋರ್, ಎಲ್ ಮಾರೆಣ್ಣ ಸೇರಿದಂತೆ ಇತರರು ಇದ್ದರು.

ಸುದ್ದಿ ಓದಿ