15ಲಕ್ಷ ಖಾತೆಗೆ ಬರುವುದಿರಲಿ ಮೊದಲು ಅಗತ್ಯ ವಸ್ತುಗಳ ಬೆಲೆ ಇಳಿಸಲಿ: ಯು.ಟಿ.ಖಾದರ್
ಹಗರಿಬೊಮ್ಮನಹಳ್ಳಿ 08: ಪ್ರತಿಯೊಬ್ಬರ ಖಾತೆಗೆ 15ಲಕ್ಷ ಹಣವನ್ನು ಹಾಕಲಾಗುವುದು ಎಂದು ಬಡಾಯಿ ಕೊಚ್ಚ್ಚಿಕೊಂಡಿದ್ದ ಬಿಜೆಪಿ ಸರಕಾರ ಮೊದಲು ತೈಲ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಸಲಿ ಎಂದು ಶಾಸಕ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
ಕೋವಿಡ್19 ಸಹಾಯ ಹಸ್ತ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಬೆಲೆ ಏರಿಕೆ ನೀತಿ ಖಂಡಿಸಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾದಲ್ಲಿ ಪಾಲ್ಗೊಂಡು ಪಟ್ಟಣದ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪಕ್ಷದ ಹತ್ತಾರು ಸುಳ್ಳುಗಳಿಂದ ಲಾಭ ಪಡೆಯುವಲ್ಲಿ ಮುಂಚಿಣಿಯಲ್ಲಿದೆ ಅಂತಹುದರಲ್ಲಿ ಕಣ್ಣಿಗೆ ಕಾಣುವ ಸತ್ಯವನ್ನು ಹೇಳುವುದಕ್ಕೆ ಅಂಜಿಕೆ ಎಕೆ ಜಾಲತಾಣದಲ್ಲಿ ಸಮರ್ಥನೀಯವಾದ ಉತ್ತರ ನೀಡಿ ಎಂದರು.
ದೇಶದ ಧೆಯೋಧ್ಧೇಶಗಳನ್ನು ಹೊತ್ತ ಬಿ.ಆರ್.ಅಂಬೇಡ್ಕರ್ರವರ ಸಂವಿಧಾನ, ಮಹಾತ್ಮಾ ಗಾಂಧಿಯ ಕನಸಿನ ಭಾರತವೇ ಕಾಂಗ್ರೇಸ್ ಪಕ್ಷದ ಆದರ್ಶಗಳಾಗಿವೆ ಆದರೆ ಇಂದಿನ ಬಿಜೆಪಿ ಪಕ್ಷವು ಸಂವಿಧಾನವನ್ನೆ ತಿರುಚಲು ಮೂಂದಾಗಿದೆ,ಇದಕ್ಕಾಗಿ ಸರಕಾರಗಳು ಹೊಂದಾಣಿಕೆ ಇಲ್ಲದ್ದರಿಂದ ಪ್ರಜೆಗಳು ನೆಮ್ಮದಿಯಿಂದ ಇಲ್ಲದಂತಾಗಿದೆ, ಜನರ ಮೇಲೆ ತೆರಿಗಳ ಮೂಲಕ ಲೂಟಿಕೋರ ಸರಕಾರವಾಗಿದೆ , ಬಂಡವಾಳ ಶಾಹಿಗಳ ಪರವಾದ ಸರಕಾರವಾಗಿದೆ,ಕೇಂದ್ರ ಸರಕಾರದಿಂದ ಯವುದೇ ಜನಪರ ಯೋಜನೆಗಳು ಜಾರಿಯಾಗಿಲ್ಲ, ಇಲ್ಲಸಲ್ಲದ ಹೇಳಿಕೆಗಳ ಮೂಲಕ ಜನತೆಯನ್ನು ಮೂರ್ಖರನ್ನಾಗಿ ಮಾಡುತ್ತಿದೆ. ಕೋವಿಡ್ ಸಂಧರ್ಭದಲ್ಲಿ ಜನ ಸಮಾನ್ಯರ ಪರವಾಗಿ ನಿಲ್ಲದೆ ಲಸಿಕೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ, ರಾಜ್ಯಕ್ಕೆ ಕೇಳಿದರೆ ಕೇಂದ್ರದ ಮೇಲೆ ಹಾಕುವ ತಂತ್ರಗಾರಿಕೆ ಮೂಲಕ ಜನರ ಸಾವಿಗೆ ಕಾರಣರಾದರು, ಪರದೇಶಗಲ್ಲಿ 2ನೇ ಹಂತದ ಲಸಿಕೆ ಮುಗಿದು ಮೂರನೆ ಬೂಸ್ಟರ್ ನೀಡುವ ಹಂತಕ್ಕೆ ತಲುಪಿದ್ದಾರೆ ಆದರೆ ನಮ್ಮ ದೇಶ ಇನ್ನು ಎರಡನೇ ಲಸಿಕೆ ನೀಡುವ ಗೋಜಿನಲ್ಲಿ ಸಿಲುಕಿದೆ.ಶೈಕ್ಷಣಿಕ ಕ್ಷೇತ್ರದ ದಿನಕ್ಕೊಂದು ಹೇಳಿಕೆಗಳಿಂದ ಪೋಷಕರು ಇಂದಿಗೂ ಗೊಂದಲದಲ್ಲಿದ್ದಾರೆ.ಬಿಜೆಪಿ ಸರಕಾರ ನೀಚ ರಾಜಕಾರಣ ಮುಂದಿನ ದಿನಗಳಲ್ಲಿ ಇತಿಹಾಸ ಪುಟ ಸೇರಲಿದ್ದು ನಮ್ಮ ಮುಂದಿನ ಪೀಳಿಗೆ ಅದನ್ನು ಒದಬಹುದಗಿದೆ ಎಂದು ಲೇವಡಿ ಮಾಡಿದರು.
ಶಾಸಕ ಎಸ್.ಭೀಮಾನಾಯ್ಕ್ ಮಾತನಾಡಿ ಕೋವಿಡ್ ಭಯಾನಕ ಪರಿಸ್ಥಿತಿಯಲ್ಲಿ ರಾಜ್ಯದ ಮುಖ್ಯ ಮಂತ್ರಿ ಸೂಕ್ತವಾದ ಕಾರ್ಯ ಮಾಡಲಿಲ್ಲ, ಬೆಡ್ ಸೇರಿದಂತೆ ಲಸಿಕೆ ಸಿಗದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದರು.ಈ ರಜ್ಯ ಸರಕಾರ ಹೆಣದ ಮೇಲೆ ಹಣ ಗಳಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.ಕೋವಿಡ್ ಸಮಯದಲ್ಲಿ20ಸಾವಿರ ಕೋಟಿ ಅನುದಾನ ಟೆಂಡರ್ ಮಾಡುವುದರ ಮೂಲಕ ಮುಖ್ಯಮಂತ್ರಿಯ ಪುತ್ರ 2ಸಾವಿರ ಕೋಟಿ ಹಣ ಲೂಟಿ ಹೊಡೆದಿದ್ದಾರೆ ಎಂದು ಸ್ವತಃ ಅವರ ಪಕ್ಷದವರೇ ವಿಶ್ವನಾಥ್ ಹೇಳಿದ್ದಾರೆ,ಕಾಂಗ್ರೇಸ್ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಬಿಜೆಪಿ ಪಕ್ಷ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದ್ದಾರೆ. ಸದ್ಯದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಂವಿಧಾನದ ಮೇಲೆ ನಂಬಿಕೆ ಇಲ್ಲದಂತೆ ನಡೆಯುತ್ತಿದೆ. ಕೋವಿಡ್ ಸಮಯದಲ್ಲಿ ಮೃತರಾದವರಿಗೆ ಘೋಶಿಸಿದ ಹಣ ನೀಡಲು ಆಗುತ್ತಿಲ್ಲ ಜೊತೆಗೆ ಮರಣ ಪ್ರಮಾಣ ಪತ್ರವನ್ನು ನೀಡವಲ್ಲಿ ವಿಫಲರಾಗಿದ್ದಾರೆ,ಇಂದಿನ ಸರಕಾರ ರೈತ,ಸಾಮಾನ್ಯ ಜನರ ಪರವಾಗಿಲ್ಲ ಎಂದು ದೂಷಿಸಿದರು.
ಈ ಸಂಧರ್ಭಧಲ್ಲಿ ಕೆಪಿಸಿಸಿ ಕಾರ್ಯದರ್ಶಿ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ವಿಜಯ ಸಿಂಗ್, ಜಿಲ್ಲಾಧ್ಯಕ್ಷ ಶಿವಯೋಗಿ, ಕೆಪಿಸಿಸಿ ಸದಸ್ಯ ಕುರಿ ಶಿವಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ , ತಾಲೂಕು ಪಂಚಾಯತ್ ಅಧ್ಯಕ್ಷೆ ನಾಗಮ್ಮ ಗೋಣಿಬಸಪ್ಪ, ತಾ,ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಜ್,ಅಕ್ಕಿ ತೋಟೇಶ್,ಪವಾಡಿ ಹನುಮಂತಪ್ಪ , ಜಂದಿಸಾಬ್,ನೆಲ್ಲು ಇಸ್ಮಾಯಿಲ್ ಸಾಹೇಬ್, ಮುಟುಗನ ಹಳ್ಳಿ ಕೊಟ್ರೇಶ್ ಸೇರಿದಂತೆ ಇನ್ನಿತರರು ಇದ್ದರು.