ರಾಣೆಬೆನ್ನೂರಲ್ಲಿ ಜನ ಜಾಗೃತಿ ಮೂಡಿಸಿದ ಕ್ಷಯರೋಗಿಗಳು
ರಾಣೆಬೆನ್ನೂರು 18: ಇಲ್ಲಿನ ಮೇಡ್ಲೆರಿ ರಸ್ತೆ ಶ್ರೀ ಗಂಗಾಜಲ ಚೌಡೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ವಾರ್ಷಿಕ ಸಂಪ್ರದಾಯದ ಮಹಾ ಕಾರ್ತಿಕೋತ್ಸವವೂ ನಡೆಯಿತು.
ಇದೇ ಸಂದರ್ಭದಲ್ಲಿ ನಗರ ಮತ್ತು ತಾಲೂಕಿನ 145 ಕ್ಕೂ ಹೆಚ್ಚು ಕ್ಷಯರೋಗಿಗಳಿಂದ ಸಾಮೂಹಿಕ ಪ್ರಾರ್ಥನೆಯ ದೀಪೋತ್ಸವ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ,: ಜಗದೀಶ್ ಪಾಟೀಲ್ ಅವರು ಮಾತನಾಡಿ, ಕ್ಷಯ ರೋಗವು ವಾಸಿಯಾಗದ ರೋಗವೇನಲ್ಲ ಸರಿಯಾದ ರೀತಿಯಲ್ಲಿ ವೈದ್ಯರು ನೀಡಿದ ಓಷಧಿಗಳನ್ನು ತೆಗೆದುಕೊಂಡು, ಓಷದೂಪಚಾರ ಸರಿಯಾಗಿ ತೆಗೆದುಕೊಂಡರೆ ಮೂರು ತಿಂಗಳ ಅವಧಿಯಲ್ಲಿ ಸಂಪೂರ್ಣ ನಿವಾರಿಸಿಕೊಳ್ಳಬಹುದಾಗಿದೆ ಎಂದ ಅವರು, ರೋಗಿಗಳ ಬಗ್ಗೆ ಅತೀ ಮಡಿವಂತಿಕೆ ಬೇಡ, ಕುಟುಂಬದಲ್ಲಿ ಅವರನ್ನು ಸಹ ಇತರರಂತೆ ಸಹಜವಾಗಿ ಪರಿಗಣಿಸಬೇಕು ಯಾವುದೇ ರೀತಿಯ ಭೇದ ಭಾವ ಮಾಡಬಾರದು ಎಂದರು. ದೀಪೋತ್ಸವಕ್ಕೆ ಚಾಲನೆ ನೀಡಿದ ವಾಯುವ್ಯ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಡಾ: ಬಸವರಾಜ ಕೇಲಗಾರ ಅವರು ರೋಗಿಗಳು ಭಯಪಡುವ ಅಗತ್ಯವಿಲ್ಲ. ಇದರಿಂದ ಯಾರು ಮಾನಸಿಕವಾಗಿ ನೊಂದುಕೊಳ್ಳದೆ, ಉಪಚಾರದ ಸಂದರ್ಭದಲ್ಲಿ ಕಾಲಕಾಲಕ್ಕೆ ಓಷಧಿಗಳನ್ನು ಸೇಸುವುದರ ಮೂಲಕ ಆರೋಗ್ಯವಂತ ಬದುಕನ್ನು ತಾಗಿಸಲು ಮುಂದಾಗಬೇಕು ಎಂದರು. ಈ ಸಂದರ್ಭದಲ್ಲಿ ಗಣ್ಯರಾದ ಮುರುಗೇಂದ್ರ್ಪ, ದೀಪ್ತಿ ಬೆಲ್ಲದ, ವೆಂಕಟೇಶ್, ವಿಕ್ರಂ ಸಣ್ಮನಿ, ಗೀರೀಶ್ ಮುರನಾಳ, ಸಿದ್ದಣ್ಣ, ಆಕಾಶ್, ಅಕ್ಕಮ್ಮ ಜ್ಯೋತಿ, ಸಾವಿತ್ರಿ ತ್ರಿವೇಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.