ತಾಳಿಕೋಟಿ

ಜ್ಯೋತಿಷ್ಯರತ್ನ ರಾಮಲಿಂಗಯ್ಯ ಶ್ರೀಗಳಿಗೆ ಸನ್ಮಾನ

ಜ್ಯೋತಿಷ್ಯರತ್ನ ರಾಮಲಿಂಗಯ್ಯ ಶ್ರೀಗಳಿಗೆ ಸನ್ಮಾನ

ತಾಳಿಕೋಟಿ: ನಾಡಿನ ಖ್ಯಾತ ಜ್ಯೋತಿಷ್ಯರತ್ನ ಸಾಮರಸ್ಯದ ಪ್ರತೀಕವಾಗಿರುವ ತಾಲೂಕಿನ ಚಬನೂರ ಹಿರೇಮಠದ ಪೀಠಾಧಿಪತಿ ಪ.ಪೂ. ರಾಮಲಿಂಗಯ್ಯ ಮಹಾಸ್ವಾಮಿಗಳನ್ನು ಗ್ರಾಮಸ್ಥರ ವತಿಯಿಂದ ಸನ್ಮಾನಿಸಿ ಗೌರವ ಸಮರ್ಪಣೆ ನೀಡಲಾಯಿತು.

ಇತ್ತೀಚೆಗೆ ಚಬನೂರ ಗ್ರಾಮದಲ್ಲಿ ಸರ್ವಧರ್ಮೀಯರಿಗಾಗಿ ಹಮ್ಮಿಕೊಂಡ ಟಿಪ್ಪು ಜಯಂತಿ ಭಾವೈಕ್ಯತಾ ಸಮಾವೇಶದಲ್ಲಿ ಅವರಿಗೆ ಈ ಸನ್ಮಾನ ನೀಡಲಾಯಿತು. 

ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಡಿನ ಖ್ಯಾತ ನೇತ್ರತಜ್ಞ  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಖಂಡ ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ) ಅವರು ಪ.ಪೂ. ರಾಮಲಿಂಗಯ್ಯ ಮಹಾಸ್ವಾಮಿಗಳು ಈ ಭಾಗದಲ್ಲಿ ಎಲ್ಲ ಧರ್ಮೀಯರ ಮಧ್ಯದಲ್ಲಿ ಸಾಮರಸ್ಯವನ್ನು ಮೂಡಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಮಾನವ ಜನಾಂಗ ಒಂದೇಯಾಗಿದೆ ಎಂಬುದು ಅವರ ಮೂಲಮಂತ್ರವಾಗಿದೆ ಅವರ ಸತ್ಕಾರ್ಯಗಳಲ್ಲಿ ನಾವೆಲ್ಲರೂ ಸಹಾಯ ಸಹಕಾರ ನೀಡಬೇಕಾಗಿದೆ ಎಂದರು.

ಸಾನಿಧ್ಯವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಗಳು ಈ ಜಗತ್ತಿಗೆ ಬಂದ ಎಲ್ಲ ಧರ್ಮಗಳು ಹಾಗೂ ದಾರ್ಶನಿಕರು ಮಾನವ ಜನಾಂಗದ ಏಳಿಗೆಗಾಗಿ ಕೆಲಸ ಮಾಡಿದ್ದಾರೆ. ಅವರ್ಯಾರು ಮನುಷ್ಯರ ಮಧ್ಯೆ ಭೇದ-ಭಾವ ಮಾಡಿಲ್ಲ. ನಾನು ಎಲ್ಲ ಜಾತಿ-ಧರ್ಮದವರನ್ನೂ ನನ್ನವರೆಂದು ಭಾವಿಸುತ್ತೇನೆ ಎಂದರು.

ಈ ವೇಳೆ ಗ್ರಾಮದ ಗಣ್ಯರಾದ ಮಲ್ಲನಗೌಡ ಬಿರಾದಾರ, ವೇ.ಮೂ. ವೀರಪ್ಪಯ್ಯ ಹಿರೇಮಠ, ಮಹಾಂತಗೌಡ ಪಾಟೀಲ, ನಜೀರ ಮುಲ್ಲಾ, ಮಶ್ಯಾಕಸಾಬ, ಎಸ್.ಜಿ. ಕುಲಕಣರ್ಿ, ಮಂಜುನಾಥ ಕವಡಿಮಟ್ಟಿ ಇದ್ದರು.

ಸುದ್ದಿ ಓದಿ