ವೃಕ್ಷಾರೋಪಣ ಅಭಿಯಾನ
ಬಳ್ಳಾರಿ 27: ಯುವ ಮೋರ್ಚಾ ಬಳ್ಳಾರಿ ನಗರ ಘಟಕ 2, 3, 4, 5 ಮತ್ತು 6ನೇ ವಾರ್ಡ್ಗಳ ಅಶೋಕ್ ಗಸ್ತಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಶಿವು ಗೌಳಿ ಅವರ ನೇತೃತ್ವದಲ್ಲಿ ಬಳ್ಳಾರಿ ನಗರದ ಗೊಲ್ಲರಹಟ್ಟಿ, ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ಮತ್ತು ಸುತ್ತಮುತ್ತ 25 ಸಸಿಗಳನ್ನು ನಡೆಯಲಾಯಿತು.
ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗುರುಲಿಂಗಗೌಡ, ಮತ್ತು ಯುವ ಮೋರ್ಚಾ ರಾಜ್ಯ ಕಾರ್ಯಕಾರಿ ಸದಸ್ಯ ಅಡವಿಸ್ವಾಮಿಯವರು ಹಾಗೂ ಯುವ ಮೋರ್ಚಾ ಬಳ್ಳಾರಿ ನಗರ ಘಟಕ ಅಧ್ಯಕ್ಷ ಅರುಣ್ ಬಾಲಚಂದ್ರ, ಪ್ರಧಾನ ಕಾರ್ಯದರ್ಶಿ ಓಂ ಪ್ರಕಾಶ್, ಉಮೇಶ್, ಉಪಾಧ್ಯಕ್ಷ ಸುಧಾಕರ್, ವಿನೋದ್ ಕುಮಾರ್, ಸತೀಶ್, ದುರ್ಗಾಪ್ರಸಾದ್, ಉಲ್ಲಾಸ್, ಜೀವನ್, ಬಸವರಾಜ್, ಸಾಗರ್, ಕುಮಾರಸ್ವಾಮಿ, ಕೃಷ್ಣ ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.