ಚಿಕ್ಕೋಡಿ

ಸಾರಿಗೆ ಸಿಬ್ಬಂದಿ ಮುಷ್ಕರ: ಬಸ್ ಸಂಚಾರ ಸ್ತದ್ಧ

ಸಾರಿಗೆ ಸಿಬ್ಬಂದಿ ಮುಷ್ಕರ: ಬಸ್ ಸಂಚಾರ ಸ್ತದ್ಧ

ಚಿಕ್ಕೋಡಿ 07: ವಿವಿಧ ಬೇಡಿಕೆಗೆ ಆಗ್ರಹಿಸಿ ಸಾರಿಗೆ ಸಿಬ್ಬಂದಿ ನಡೆಸುತ್ತಿರುವ ಮುಷ್ಕರಕ್ಕೆ ಚಿಕ್ಕೋಡಿ ಸಾರಿಗೆ ವಿಭಾಗದಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರು ಜಿಲ್ಲೆಯಲ್ಲಿ ಸಾರಿಗೆ ಸೇವೆ ಸಂಪೂರ್ಣ ಸ್ತಭ್ದಗೊಂಡಿದೆ. ಮುಷ್ಕರದಿಂದ ಚಿಕ್ಕೋಡಿ ಸಾರಿಗೆ ವಿಭಾಗಕ್ಕೆ ಅಂದಾಜು 45 ಲಕ್ಷ ರೂ ನಷ್ಟವಾಗಿದೆ.

ನಿರಂತರವಾಗಿ ಬಸ್ ಹಾಗೂ ಪ್ರಯಾಣಿಕರಿಂದ ಗಿಜುಗುಡುತ್ತಿದ್ದ ಚಿಕ್ಕೋಡಿ ಸಾರಿಗೆ ವಿಭಾಗದ ಎಲ್ಲ ಬಸ್ ನಿಲ್ದಾಣಗಳು ಖಾಲಿಖಾಲಿಯಾಗಿವೆ. ಬಸ್ ಸಂಚಾರ ಅಕ್ಷರಶ: ಸ್ತಭ್ಧಗೊಂಡು  ಒಂದೇ ದಿನ ಚಿಕ್ಕೋಡಿ ಸಾರಿಗೆ ವಿಭಾಗಕ್ಕೆ ಭಾರಿ ಪ್ರಮಾಣದಲ್ಲಿ ನಷ್ಟಗೊಂಡಿದೆ. ಬೆರಳಣಿಕೆಯಷ್ಟು ಮಾತ್ರ ಬಸ್ ಸಂಚಾರ ಮಾಡಿವೆ.

ಸಾರಿಗೆ ನೌಕರ ಮುಷ್ಕರದಿಂದ ಚಿಕ್ಕೋಡಿ ವಿಭಾಗ ವ್ಯಾಪ್ತಿಯ ಚಿಕ್ಕೋಡಿ, ನಿಪ್ಪಾಣಿ, ಅಥಣಿ, ರಾಯಬಾಗ, ಸಂಕೇಶ್ವರ, ಗೋಕಾಕ ಸೇರಿ ಆರು ಘಟಕ ವ್ಯಾಪ್ತಿಯಲ್ಲಿ ಪ್ರತಿದಿನ 5 ಸಾವಿರ ಟ್ರಪ್ ಮಾಡುವ ಬಸ್ ಸಂಚಾರದಲ್ಲಿ ಬುಧವಾರ ಕೇವಲ 42 ಟ್ರಿಪ್ ಮಾತ್ರ ಸಂಚಾರ ಮಾಡುವ ಮೂಲಕ ಶೇ 99 ರಷ್ಟ್ರು ಬಸ್ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಹೈರಾಣಾದರು.

ಚಿಕ್ಕೋಡಿ ಸಾರಿಗೆ ವಿಭಾಗದ ಆರು ಘಟಕದಿಂದ ಬಸ್ ರಸ್ತೆಗಿಳಿಯಲ್ಲಿ, ಸಿಬ್ಬಂದಿಗಳು ಬಸ್ ಘಟಕದತ್ತ ಸುಳಿಯಲಿಲ್ಲ, ನಮ್ಮ ಬೇಡಿಕೆಗಳನ್ನು ಈಡೇರಿಸಿದರೇ ಮಾತ್ರ ಬಸ್ ಓಡಿಸುವುದಾಗಿ ಕಡಾಖಂಡಿತವಾಗಿ ಹೇಳಿದ ಸಿಬ್ಬಂದಿಗಳು ಮುಷ್ಕರಕ್ಕೆ ಬೆಂಬಲ ನೀಡಿದರು.  ಇದರಿಂದ ಬಸ್ ಸಂಚಾರ ಆರಂಭ ಮಾಡದೇ ಇರುವುದರಿಂದ ಪ್ರಯಾಣಿಕರು ಖಾಸಗಿ ವಾಹನ ಮೋರೆ ಹೋಗುವ ಮೂಲಕ ಸುಗಮ ಸಂಚಾರಕ್ಕೆ ಪ್ರಯಾಣಿಕರು ಪರದಾಡಿದ ಘಟನೆ ನಡೆಯಿತು. ದೂರದ ಊರಿಗೆ ಹೋಗುವ ಮಹಿಳೆಯರು, ವಯೋವೃದ್ಧರು, ಬಾಣಂತಿಯರು ಬಸ್ ನಿಲ್ದಾಣ, ರಸ್ತೆ ಅಕ್ಕಪಕ್ಕ ವಾಹನಗಳಿಗೆ ಕಾಯ್ದು ಸುಸ್ತಾಗಿ ಹೋದರು. 

ಬುಧವಾರ ಬೆಳಿಗ್ಗೆ ಚಿಕ್ಕೋಡಿ ಘಟಕದಿಂದ ಸ್ಥಳಿಯವಾಗಿ ಗ್ರಾಮೀಣ ಭಾಗಕ್ಕೆ ಕೆಲವೊಂದು ಬಸ್ ಸಂಚಾರ ಆರಂಭಿಸಿದ್ದು ಬಿಟ್ಟರೇ ಉಳಿದ ಯಾವ ಬಸ್‍ಗಳು ರಸ್ತೆಗೆ ಬರಲಿಲ್ಲ, ಸಾರಿಗೆ ಅಧಿಕಾರಿಗಳು ಎಷ್ಟೇ ಪ್ರಯತ್ನ ಮಾಡಿದರೂ ಯಾವ ಸಿಬ್ಬಂದಿಯೂ ಬಸ್ ಘಟಕದತ್ತ ಸುಳಿಯಲ್ಲಿಲ್ಲ, ಇದರಿಂದ ಚಿಕ್ಕೋಡಿ ಸಾರಿಗೆ ವಿಭಾಗದಿಂದ ಮುಷ್ಕರದಕ್ಕೆ ಭಾರಿ ಬೆಂಬಲ ವ್ಯಕ್ತವಾಯಿತು. 

ಸಾರಿಗೆ ಸಿಬ್ಬಂದಿ ಮುಷ್ಕರ ಕೈಬಿಟ್ಟು ಡ್ಯೂಟಿಗೆ ಹಾಜರಾಗಬೇಕೆಂದು ಸಾಕಷ್ಟು ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ, ಚಿಕ್ಕೋಡಿ ವಿಭಾಗದಿಂದ ಕೇವಲ 42 ಟ್ರಿಪ್ ಮಾತ್ರ ಬಸ್ ಸಂಚಾರ ಮಾಡಿವೆ. ಬುಧವಾರ 45 ಲಕ್ಷ ರೂ ನಷ್ಟವಾಗಿದೆ.

ಶಶಿಧರ ವ್ಹಿ.

ವಿಭಾಗೀಯ ನಿಂತ್ರಿಣಾಧಿಕಾರಿಗಳು ಕೆಎಸ್‍ಆರ್‍ಟಿಸಿ ಚಿಕ್ಕೋಡಿ ವಿಭಾಗ


ಸುದ್ದಿ ಓದಿ