ಬಳ್ಳಾರಿ

ಯುವಕರು ದುಶ್ಚಟಗಳ ದಾಸರಾಗದಿರಿ: ಹೊಂಬಳ

ಯುವಕರು ದುಶ್ಚಟಗಳ ದಾಸರಾಗದಿರಿ: ಹೊಂಬಳ

ಬಳ್ಳಾರಿ 10: ಇಂದಿನ ಯವಕರೇ ದೇಶದ ಶಕ್ತಿ, ಇದರ ಮಹತ್ವವನ್ನು ಯುವಸಮುದಾಯ ಅರಿತುಕೊಂಡು ಕಾರ್ಯನಿರ್ವಹಿಸಬೇಕು ಮತ್ತು ದುಶ್ಚಟಗಳತ್ತ ಯಾವುದೇ ಕಾರಣಕ್ಕೂ ದಾಸರಾಗಬೇಡಿ ಎಂದು ಹಿರಿಯ ಉಪನ್ಯಾಸಕ ಎಸ್.ಪಿ. ಹೊಂಬಳ ಅವರು ಹೇಳಿದರು.

ನೆಹರು ಯುವ ಕೇಂದ್ರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ಮಹಾಲಕ್ಷ್ಮಿ ಮಹಿಳಾ ಕಲಾ ಸಂಘ, ಹಾಗೂ ರಾಷ್ಕ್ರೀಯ ಸೇವ ಯೋಜನಾ ಘಟಕದ ವತಿಯಿಂದ ಮಂಗಳವಾರ ನಗರದ ಗುಗ್ಗರಹಟ್ಟಿಯಲ್ಲಿರುವ ಎಸ್.ಯು.ಜೆ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛಗ್ರಾಮ-ಹಸಿರುಗ್ರಾಮ ಯುವ ಜನರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪರಿಸರ ಸ್ವಚ್ಚವಾಗಿದ್ದರೆ ಆರೋಗ್ಯ ಸರಿಯಾಗಿರುತ್ತದೆ. ಆದ್ದರಿಂದ ಯುವಕರು ಉತ್ತಮ ಆರೋಗ್ಯವಂತರಾಗಿರಬೇಕು ಎಂದರು. ನಿವೃತ್ತ ಎ.ಎಸ್.ಐ ನಾಗರಾಜ ಮಾತನಾಡಿ, ಆರೋಗ್ಯವೇ ಮಹಾಭಾಗ್ಯ ಎಲ್ಲಾ ಸಂಪತ್ತಿನಲ್ಲೂ ಆರೋಗ್ಯದ ಸಂಪತ್ತು ಅತೀ ಮುಖ್ಯ; ಆದ್ದರಿಂದ ಇಂದಿನ ಯುವಜನತೆ ಒಳ್ಳೆಯ ಮಾರ್ಗದಲ್ಲಿ ನಡೆದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಜೆ.ಎಸ್.ಹಿರೇಮಠ ಮತ್ತು ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಎಚ್.ಸಿ. ರಾಘವೇಂದ್ರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಕಲಾ ಸಂಘದ ಅಧ್ಯಕ್ಷೆ ಮಹಾಲಕ್ಷ್ಮಿ ಎನ್.ಎಸ್.ಎಸ್.ಅಧಿಕಾರಿ ಜೆ.ಮಹೇಶ, ಈರಮ್ಮ ಹಾಗೂ ಪುರುಷೋತ್ತಮ, ಅಬ್ರಾಹಂ, ಅಮರೇಶ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ನಂದಿನಿ ಪ್ರಾರ್ಥಿಸಿದರು. ಕಾವೇರಿಭಾಯಿ ಸ್ವಾಗತಿಸಿದರು.ಶಾಂತಾ ನಿರೂಪಿಸಿದರು.

ಸುದ್ದಿ ಓದಿ