ತರಬೇತಿ ಸಮಾರೋಪ ಸಮಾರಂಭ
ಬಳ್ಳಾರಿ 12: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ (SಥಿಟಿಜಖSಇಖಿI) ಆವರಣದಲ್ಲಿ ಜಿಲ್ಲಾ ಪಂಚಾಯತ ಸಹಯೋಗದೊಂದಿಗೆ ತಾಲೂಕು ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಮತ್ತು ಮಿಶನ್ ಒನ್ ಜಿಪಿ ಒನ್ ಬಿಸಿ ಸಖಿ ತರಬೇತಿ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರು ಡಿ. ಜಾನಕಿ ರಾಮ್ ಮಾತನಾಡಿ, ಗ್ರಾಮ ಮತ್ತು ಪಂಚಾಯತ ಮಟ್ಟದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಸಂಘ ಮತ್ತು ಒಕ್ಕೂಟಗಳನ್ನು ರಚನೆ ಮಾಡುವದರ ಜೊತೆಗೆ ಅವರಿಗೆ ಜೀವನೋಪಾಯ ಚಟುವಟಿಕೆ ಅಳವಡಿಸಿಕೊಳ್ಳುವದರಿಂದ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿಯ ಜೊತೆಗೆ ಬಡತನದ ತೀವ್ರತೆ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದರು. ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಬಸವ ರೆಡ್ಡಿ ಡಿ, ಮಾತನಾಡಿದರು.
ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ರಾಜೇಂದ್ರ,, ವಿಜಯ, ಸಂಪನ್ಮೂಲ ವ್ಯಕ್ತಿಗಳಾದ ಮಿನಾಕ್ಷೀ, ಉಪನ್ಯಸಕರಾದ ಮಹಮ್ಮದ ನಿಸಾರ, ಸಿದ್ದಲಿಂಗಮ್ಮ, ಸಂತೋಷ ಕುಮಾರ, ಕಿರಣ ಕುಮಾರ ಉಪಸ್ಥಿತರಿದ್ದರು, ಬಳ್ಳಾರಿ ಜಿಲ್ಲೆಯ 34 ಜನ ತಾಲ್ಲೂಕು ಮಟ್ಟದ ಸಂಪನ್ಮೂಲ ವ್ಯಕ್ಕಿಗಳು ಮತ್ತು 16ಜನ ಮಿಶನ್ ಒನ್ ಜಿಪಿ ಒನ್ ಬಿಸಿ ಸಖಿ ಒಟ್ಟು 50 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.