ಕಬ್ಬು, ಅಡಿಕೆ ಬೆಳೆಗಳ ತರಬೇತಿ ಕಾರ್ಯಾಗಾರ
ಲೋಕದರ್ಶನ ವರದಿ
ಮುಂಡಗೋಡ:ತಾಲೂಕಿನ ಅತ್ತಿವೇರಿ ಗ್ರಾಮದಲ್ಲಿ ರೈತರಿಗೆ ಹಾಗೂ ರೈತ ಮಹಿಳೆಯರಿಗೆ ಕಬ್ಬು ಹಾಗೂ ಅಡಿಕೆ ಬೆಳೆಗಳ ಬಗ್ಗೆ ಬುಧವಾರ ತರಬೇತಿ ನೀಡಲಾಯಿತು.
ಶಿರಸಿ ಕೃಷಿ ವಿಜ್ಞಾನ ಕೇಂದ್ರದ ಡಾ.ಶಿವಶಂಕರಮೂರ್ತಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿದರು. ಕಬ್ಬು ಹಾಗೂ ಅಡಿಕೆ ಬೆಳೆಗಳ ವಿವಿಧ ರೀತಿಯ ತಳಿಗಳು, ರೋಗಬಾಧೆ ಹತೋಟಿ ಕ್ರಮಗಳು ಹಾಗೂ ಗೊಬ್ಬರ ಹಾಕುವ ರೀತಿ ಬಗ್ಗೆ ಸಂಪೂರ್ಣವಾಗಿ ತರಬೇತಿ ನೀಡಲಾಯಿತು. ಈ ಸಂದರ್ಭದಲ್ಲಿ ಹುನಗುಂದ ಗ್ರಾಮ ಪಂಚಾಯತ ಸದಸ್ಯೆ ಸಾಜೇದ್ ಅಗಸರ, ಗ್ರಾಮೀಣ ಅಭಿವೃದ್ಧಿ ಅಧಿಕಾರಿ ಮಹಾಬಲೇಶ್ವರ ನಾಯ್ಕ, ಮಂಜುನಾಥ ನೀರಲಗಿ ಮತ್ತು ಅತ್ತಿವೇರಿ ಗ್ರಾಮದ ಪ್ರಗತಿಪರ ರೈತರು ಉಪಸ್ಥಿತರಿದ್ದರು.