ಜೇನು ಸಾಕಾಣಿಕೆ ಕುರಿತು ತರಬೇತಿ ಕಾರ್ಯಾಗಾರ
ಲೋಕದರ್ಶನ ವರದಿ
ಮುಂಡಗೋಡ 20: 2023-24ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಜೇನು ಸಾಕಾಣಿಕೆ ಕುರಿತು ರೈತರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ತಾಲೂಕಿನ ಕೊಪ್ಪ ಗ್ರಾಮದ ನಾಗರಾಜ ಬೆಣ್ಣಿ ಅವರ ತೋಟದಲ್ಲಿ ಹಮ್ಮಿಕೊಳ್ಳಲಾಗಿತ್ತು.
ತೋಟಗಾರಿಕಾ ಅಧಿಕಾರಿ ಕೃಷ್ಣಾ ಕುಳ್ಳೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ರೈತ ನಾಗರಾಜ ಬೆಣ್ಣಿ ಜೇನು ಕೃಷಿ ಬಗ್ಗೆ ತಮ್ಮ ಅನುಭವವನ್ನು ರೈತರೊಂದಿಗೆ ಹಂಚಿಕೊಂಡರು. ಸಿದ್ದಾಪುರದ ನರ್ಸರಿಯ ಬೇನಕಾ ಬಿ. ಜೇನು ಕೃಷಿಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಸಹಾಯಕ ತೋಟಗಾರಿಕೆ ಅಧಿಕಾರಿ ರಮೇಶ ಜಮಖಂಡಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ತೋಟಗಾರಿಕೆ ಅಧಿಕಾರಿ ಕೆ.ಬಿ.ಪಠಾಣ ಇದ್ದರು