ಜೋಡು ಲಕ್ಷ್ಮೀ ದೇವಿ ಜಾತ್ರೆ ಅಂಗವಾಗಿ ಕೋಣ ಬಿಡುವ ಸಂಪ್ರದಾಯಕ್ಕೆ ಚಾಲನೆ
ವಿಜಯಪುರ 19 : ಮರಡಿ ಸ್ಥಳೀಯ ಗ್ರಾಮ ದೇವತೆಯರಾದ ಜೋಡು ಲಕ್ಷ್ಮಿ ದೇವತೆಯ ಜಾತ್ರಾ ಮಹೋತ್ಸವ ಅಂಗವಾಗಿ ಪ್ರತಿ ಐದು ವರ್ಷಕ್ಕೊಮ್ಮೆ ಜರುಗುವ ಜಾತ್ರೆ ಅಂಗವಾಗಿ ಕೋನಗಳ ಬಿಡುವ ಸಂಪ್ರದಾಯವು ಅತಿ ಪೂರ್ವದಿಂದಲೂ ಬಂದಿರುವುದರಿಂದ ಯಾತ್ರಾ ಕಮಿಟಿಯವರು ಗ್ರಾಮಸ್ಥರ ಒಪ್ಪಿಗೆಯ ಮೇರೆಗೆ ಬರುವ 2027 ಮೇ ತಿಂಗಳಲ್ಲಿ ಗ್ರಾಮದೇವತೆಯರ ಜಾತ್ರಾ ಮಹೋತ್ಸವವನ್ನು ಮಾಡುವದಾಗಿ ಗೊತ್ತುಪಡಿಸಿದು ಅದರ ಅಂಗವಾಗಿ ಸಂಪ್ರದಾಯದಂತೆ ಮುಂಚಿತವಾಗಿ ಕೋನಗಳನ್ನು ಬಿಡುವ ಸಂಪ್ರದಾಯ ವಿದ್ದು ಅದರಂತೆ ದಿನಾಂಕ 21 ರಂದು ಮಂಗಳವಾರ ರಾಮದೇವತೆಯರಿಗೆ ಕೋಣ ಬಿಡುವ ಕಾರ್ಯಕ್ರಮ ಜರುಗಲಿದ್ದು ಸದರಿ ಕಾರ್ಯಕ್ರಮಗಳು ದೇವಸ್ಥಾನ ಜಾತ್ರಾ ಮಹೋತ್ಸವ ಕಮಿಟಿಯವರ ಆದೇಶದಂತೆ ಜರುಗುತ್ತ ಬಂದಿರುವದೊಂದು ಗ್ರಾಮದ ಸಂಪ್ರದಾಯವಾಗಿದೆ ಆದಕಾರಣ ಮಂಗಳವಾರದಂದು ಕೋನಗಳನ್ನು ಮೆರವಣಿಗೆ ಮೂಲಕ ದೇವಸ್ಥಾನಗಳಿಗೆ ತೆಗೆದುಕೊಂಡು ಹೋಗಿ ಸಂಪ್ರದಾಯದಂತೆ ಬಿಡುವದಾಗಿ ಜಾತ್ರಾ ಕಮಿಟಿ ತಿಳಿಸಿದೆ ಮೆರವಣಿಗೆಯಲ್ಲಿ ಶಿಸ್ತು ಕಾಯ್ದುಕೊಂಡು ಹೋಗುವುದರ ಜೊತೆಗೆ ಭಕ್ತಾದಿಗಳು ಸಂಪ್ರದಾಯದಂತೆ ಭಂಡಾರವನ್ನು ಉಪಯೋಗಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಯಾತ್ರಾ ಕಮಿಟಿ ತಿಳಿಸಿರುತ್ತದೆ.