ನಾಗರಿಕರ ಅಗತ್ಯತೆಗೆ ಮೊದಲ ಆದ್ಯತೆ: ಎಚ್.ಕೆ. ಪಾಟೀಲ್ ಸೇವಾ ತಂಡದ ಪರಮೋದ್ದೇಶ
ಲೋಕದರ್ಶನ ವರದಿ
ಗದಗ, ಸೆ.24: ನಗರದ ಗದಗ-ಬೆಟಗೇರಿ ಹಾಗೂ ಗ್ರಾಮೀಣ ಭಾಗದ ನಾಗರಿಕರು ಸುಖಮಯ ಜೀವನ ನಡೆಸಲು, ಆರೋಗ್ಯಕರ ಬದುಕು ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸಲು ಅಗತ್ಯ ಸಹಕಾರ ನೀಡುವುದು ಎಚ್.ಕೆ. ಪಾಟೀಲ್ ಸೇವಾ ತಂಡದ ಪರಮೋದ್ದೇಶವಾಗಿದೆ ಎಂದು ತಂಡದ ಅಧ್ಯಕ್ಷ ಪ್ರಭು ಎಲ್. ಬುರ್ಬುರೆ ಹೇಳಿದರು.
ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಕಳೆದ ಹಲವು ವರ್ಷಗಳಿಂದ ಅತ್ಯಲ್ಪ ದರದಲ್ಲಿ ಶುದ್ಧ ಕುಡಿಯುವ ನೀರನ್ನು ಎಚ್.ಕೆ. ಪಾಟೀಲ್ ಸೇವಾ ತಂಡದ ವತಿಯಿಂದ ಪೂರೈಸಲಾಗುತ್ತಿದೆ. ಶುದ್ಧ ನೀರಿನ ಘಟಕಗಳನ್ನು ಅತ್ಯಾಧುನಿಕ ಯಂತ್ರೋಪಕರಣಗಳ ನೆರವಿನಿಂದ ಪುನಶ್ಚೇತನಗೊಳಿಸಿ, ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಕುರಿತು ಸೆ.24ರಂದು ಸೇವಾ ತಂಡದ ಕಚೇರಿಯಲ್ಲಿ ಅಧ್ಯಕ್ಷ ಪ್ರಭು ಎಲ್. ಬುರ್ಬುರೆ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಅವರು, ಸಮಸ್ತ ನಾಗರಿಕರ ಅಗತ್ಯತೆಗಳಿಗೆ ಮೊದಲ ಆದ್ಯತೆ ನೀಡಿ ಸೇವೆ ಸಲ್ಲಿಸುವುದೇ ಎಚ್.ಕೆ. ಪಾಟೀಲ್ ಸೇವಾ ತಂಡದ ಉದ್ದೇಶವಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಎಂ.ಸಿ. ಶೇಖ್, ಅಶೋಕ ಮಂದಾಲಿ, ರವಿ ಮೂಲಿಮನಿ, ಶುದ್ಧ ನೀರಿನ ಘಟಕದ ಅಧ್ಯಕ್ಷ ವಿಜಯಕುಮಾರ ಹಾಲಮಠ, ಸ್ವಯಂಸೇವಕರಾದ ಶಿವಪ್ಪ ತಿಪ್ಪಣ್ಣ ಬಳ್ಳಾರಿ, ವಾಸಿಂ ಖಾಜಿ, ಸಾಗರ ಬಳ್ಳಾರಿ, ಉಸ್ಮಾನ್ ಮಾಳೇಕೊಪ್ಪ, ರಾಘವೇಂದ್ರ ಪಾಲನಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.