ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳಿಗೆ ನಾಳೆ ಅಖಂಡ ಕರ್ನಾಟಕದ ನುಡಿನಮನ
ಲೋಕದರ್ಶನ ವರದಿ,
ಜಮಖಂಡಿ 30: ಕರುನಾಡಿನ ಖ್ಯಾತ ಸಾಹಿತಿ ಸತ್ಯಕಾಮ ಅವರ ಜನ್ಮಾರಾಧನಾ ಮಹೋತ್ದವದ ಅಂಗವಾಗಿ ವಿಜಯಪೂರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳಿಗೆ ಅಖಂಡ ಕರ್ನಾಟಕದ ನುಡಿನಮನವನ್ನು ಜು.2ರಂದು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆವರೆಗೆ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸುಮ್ಮನೆ ಸಭಾಭವನದಲ್ಲಿ ಸತ್ಯಕಾಮ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯಲಿದೆಂದು ಪ್ರತಿಷ್ಠಾನದ ಸಂಚಾಲಕಿ ವೀಣಾ ಬನ್ನಂಜೆ ತಿಳಿಸಿದರು.
ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನುಡಿನಮನ ಸಮಾರಂಭದ ಸಾನಿಧ್ಯವನ್ನು ಸುತ್ತೂರು ಸಂಸ್ಥಾನಮಠದ ವೀರ ಸಿಂಹಾಸನ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿ, ಕೋಲ್ಲಾಪೂರ ಕನೇರಿ ಸಿದ್ದಗಿರಿ ಸಂಸ್ಥಾನಮಠದ ಜಗದ್ಗುರು ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಜಿ, ಗದಗ ಶಿವಾನಂದ ಬೃಹನ್ಮಠದ ಸದಾಶಿವಾನಂದ ಮಹಾಸ್ವಾಮಿಜಿ, ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯಾ ಮಹಾಸ್ವಾಮಿಜಿ, ವಿಜಯಪೂರದ ಜ್ಞಾನಯೋಗಾಶ್ರಮದ ಬಸವಲಿಂಗ ಶ್ರೀಗಳು, ಹುಲ್ಯಾಳದ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು ಸಾನಿಧ್ಯವನ್ನು ವಹಿಸಿಲಿದ್ದಾರೆ ಎಂದರು.
ನುಡಿಮಂತ್ರವನ್ನು ಕಲಬುರ್ಗಿಯ ಬಸವರಾಜ ಪಾಟೀಲ ಸೇಡಂ, ಗುರುರಾಜ ಕರ್ಜಗಿ, ಶಂಕರ ದೇವನೂರು, ಸವಿತಾ ಶ್ರೀಕಾಂತ, ಚಕ್ರವರ್ತಿ ಸೂಲಿಬೆಲೆ, ವಿ.ಬಿ.ಆರತಿ, ಬಸವರಾಜ ಹಾದಿಮನಿ, ರಾಮಶೇಷು,ಸೌಮ್ಯಾ ಸುಂಕದ, ಎಂ.ಎನ್.ಶಿವಕುಮಾರ, ಪ್ರಕಾಶ ಹಜೇರಿ, ಲೀಲಾ ಕರಟಗಿ ಅನೇಕರು ಅತಿಥಿಗಳಾಗಿ ಆಗಮಿಲಿದ್ದು, ಗಾನ ನಮನವನ್ನು ಬೆಂಗಳೂರು ಮನೋಜವಂ ಅತ್ರೇಯ ಹಾಗೂ ತಂಡ, ಚಿತ್ರ ನಮನವನ್ನು ಸಿರಸಿಯ ನೀರ್ನಳ್ಳಿ ಗಣಪತಿ ಕಲಾವಿದರು ನೇರವೇರಿಸಲಿದ್ದಾರೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಜಯ, ಪವನ ಶಹಾಪುರ, ಅಣ್ಣಪ್ಪ ನಂದಗಾಂವ, ಅನೇಕರಿದ್ದರು.