ಮುಂದಗೋಡ

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಬಾಲ ಸಮ್ಮೇಳನ ಹಾಗೂ ಮಕ್ಕಳ ಗ್ರಾಮ ಸಭೆ

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಬಾಲ ಸಮ್ಮೇಳನ ಹಾಗೂ ಮಕ್ಕಳ ಗ್ರಾಮ ಸಭೆ

ಮುಂಡಗೋಡ 20: ಬಾಲ ಸಮ್ಮೇಳನ ಮತ್ತು ಮಕ್ಕಳ ಗ್ರಾಮ ಸಭೆ ಹಮ್ಮಿಕೊಳ್ಳುವುದರ ಮೂಲಕ ಸಮುದಾಯದಲ್ಲಿ ಮಕ್ಕಳಿಗೆ ರಕ್ಷಣೆ ಮಕ್ಕಳ ಬೆಳವಣಿಗೆ, ಮಕ್ಕಳಲ್ಲಿನ ಪ್ರತಿಭೆ ಗುರುತಿಸುವಿಕೆ ಮತ್ತು ಅಭಿವ್ಯಕ್ತತೆ, ಮಕ್ಕಳಿಗೆ ಇರುವ ಸಮಸ್ಯೆಗಳನ್ನು ಅರಿತು ಅವುಗಳಿಗೆ ಸ್ಪಂದನೆಯಾಗಿ ಅವುಗಳ ಅಹವಾಲುಗಳನ್ನು ಸ್ವೀಕರಿಸಿ, ಗ್ರಾಮದಲ್ಲಿ ಮಕ್ಕಳ ಸ್ನೇಹಿ ವಾತಾವರಣವನ್ನು ನಿರ್ಮಿಸಲು ಸರ್ಕಾರವು ಪ್ರತಿ ಪರ್ಷ ಮಕ್ಕಳ ಗ್ರಾಮ ಸಭೆ ನವೆಂಬರ್ ತಿಂಗಳ ಆರಂಭದಿಂದ ಅಂತ್ಯದವರೆಗೆ ಹಮ್ಮಿಕೊಳ್ಳಲಿದ್ದು ಮುಂಚಿತವಾಗಿ ನವೆಂಬರ್ ತಿಂಗಳ 14 ಮಕ್ಕಳ ದಿನಾಚರಣೆ ಭಾರತದ ಪೂರ್ವ ಪ್ರಧಾನಮಂತ್ರಿಗಳಾದ ಮಕ್ಕಳ ಚಾಚಾ ಎಂದೆ ಪ್ರಸಿದ್ಧರಾದ ಗುಲಾಬಿ ಹೂಗಳ ಪ್ರೀಯರಾದ ದಿಽಽ ಪಂಡಿತ್ ಜವಹರಲಾಲ್ ನೆಹರುರವರ ಜನ್ಮದಿನವನ್ನು ಸ್ಮರಿಸುತ್ತಾ ಮಕ್ಕಳಲ್ಲಿನ ಸೃಜನಾತ್ಮಕತೆಗೆ ಪ್ರೋತ್ಸಾಹಿಸಲು ಈ ದಿನ ನಾವು ಈ ಕಾರ್ಯಕ್ರಮವನ್ನು ಸಮುದಾಯದ ಸಂಪೂರ್ಣ ಸಹಕಾರದೊಂದಿಗೆ ಆಯೋಜಿಸಿದ್ದೇವೆ" ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ  ಎಲ್ ವಿ ಕೆ ಸಿಬ್ಬಂದಿಗಳಾದ ಲಕ್ಷಣ ಮುಳೆಯವರು ಮಾತನಾಡಿ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ನೇರವೇರಿಸಿದರು. 

ಚೈತನ್ಯ ಸಮುದಾಯ ಕಲಿಕಾ ಕೇಂದ್ರ, ಗ್ರಾಮ ಅಭಿವೃದ್ಧಿ ಸಮಿತಿ ಜೇನಮುರಿ, ಗ್ರಾಮ ಪಂಚಾಯತ್ ಬಾಚಣಕಿ, ಯುವಜನರ ಸಂಘಗಳು, ಪಾಲಕರ ಸಮಿತಿ, ಮಹಿಳಾ ಸ್ವ ಸಹಾಯ ಸಂಘಗಳು, ಶಾಲಾ ಅಭಿವೃದ್ಧಿ ಸಮಿತಿ, ಬಾಲ ವಿಕಾಸ ಸಮಿತಿ, ಜೇನುಮುರಿ ಸಮುದಾಯದ ಎಲ್ಲಾ ಗ್ರಾಮಸ್ಥರು ಮತ್ತು ಲೊಯೋಲ ವಿಕಾಸ ಕೇಂದ್ರ ಮುಂಡಗೋಡದ ಸಹಯೋಗದಲ್ಲಿ ಬಾಲ ಸಮ್ಮೇಳನ ಮತ್ತು ಮಕ್ಕಳ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಯಿತು."ಇಂದಿನ ಮಕ್ಕಳೆ ನಾಳಿನ ಪ್ರಜೆಗಳು ಎಂಬ ಹಳೆಯ ನಾಣ್ಣುಡಿ ಬದಲಾಯಿಸಿ ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಹೌದು ಆದರೆ ಇಂದಿನ ಮಕ್ಕಳು ಮುಂದಿನ ಭವ್ಯಭಾರತದ ನಿರ್ಮಾತೃಗಳು" ಜೇನುಮುರಿಯಲ್ಲಿ ಧನಗರ ಗೌಳಿ ಸಮುದಾಯದೊಂದಿಗೆ ವಾಲ್ಮೀಕಿ, ಅಂಬಿಗ, ಮುಸ್ಲಿಂ,  ಸಮುದಾಯಗಳು ವಾಸಿಸುತ್ತಿದ್ದು ಈ ಎಲ್ಲಾ ಸಮುದಾಯಗಳಲ್ಲಿ ಧನಗರ ಗೌಳಿ ಸಮುದಾಯದಲ್ಲಿ ಅತಿ ಹೆಚ್ಚು ಮಕ್ಕಳು ಶಾಲೆ ಬಿಡುವ ಪ್ರಕರಣಗಳಿದ್ದು ಚಿಕ್ಕ ವಯಸ್ಸಿನಲ್ಲಿ ಶಾಲೆ ಬಿಟ್ಟು ದುಡಿಮೆಗೆ ಒಳಗಾಗುವುದು ಪ್ರಮುಖವಾಗಿ ಕಂಡುಬರುತ್ತದೆ. ಅದನ್ನು ತಪ್ಪಿಸಲು ಈ ಬಾರಿ ಇಲ್ಲಿನ ಮಕ್ಕಳಿಗೆ ಪ್ರೋತ್ಸಾಹಿಸಲು ಶಿಕ್ಷಣಕ್ಕೆ ಉತ್ತೇಜಿಸಲು ಮಕ್ಕಳ ಗ್ರಾಮ ಸಭೆ ಮತ್ತು ಮಕ್ಕಳ ಬಾಲ ಸಮ್ಮೇಳನ ಹಮ್ಮಿಕೊಂಡಿದ್ದು ಅರ್ಥಪೂರ್ಣವಾಗಿದೆ. ಮಕ್ಕಳ ಹಕ್ಕುಗಳ ಒಡಂಬಡಿಕೆ ಭಾರತಿಯ ಪ್ರೌಢತೆ ಅಧಿನಿಯಮ 1875 ಇದು 18 ವರ್ಷ ಅಂತ ಹೇಳುವುದು, ಬಾಲ್ಯ ವಿವಾಹ ನಿಷೇಧ ಕಾಯಿದೆ 2006 ಮತ್ತು ತಿದ್ದುಪಡಿ ಕಾಯ್ದೆ 2016 ಮತ್ತು ಬಾಲ ಕಾರ್ಮಿಕ ಕಾಯ್ದೆ 1986 ತಿದ್ದುಪಡಿಕಾಯ್ದೆ 2016, ಬಾಲ ನ್ಯಾಯ ಕಾಯ್ದೆ 2015 ಪೊಕ್ಕೊ ಕಾಯ್ದೆ 2012 ಇವೆಲ್ಲವುಗಳು 18 ವರ್ಷ ಒಳಗಿನವರನ್ನು ಮಕ್ಕಳೆಂದು ಅಥವಾ ಮಗು ಎಂದು ವ್ಯಾಖ್ಯಾನಿಸುತ್ತವೆ. 2011 ರ ಜನಗಣತಿಯ ಪ್ರಕಾರ 120 ಕೋಟಿ ಜನಸಂಖ್ಯೆ ಆದರೊಳಗೆ 18 ವರ್ಷಕ್ಕೆ ಒಳಪಟ್ಟವರು 46 ಕೋಟಿ ಮಕ್ಕಳು ಇರುವರು. ಮಕ್ಕಳ ಹಕ್ಕುಗಳ ಒಂದು ಹಿನ್ನಲೆ ಭಾರತದ ಸಂವಿಧಾನದಲ್ಲಿ ಇರುವ ಪರಿಚ್ಛೇದಗಳಾದ 15 (3) ತಾರತಮ್ಯ ನಿಷೇಧ, ಪರಿಚ್ಛೇದ 21 ಎಲ್ಲರಿಗೂ ಜೀವಿಸುವ ಹಕ್ಕು, ಪರಿಚ್ಛೇದ 21ಎ 6 ರಿಂದ 14 ವರ್ಷದ ಒಳಗಿನ ಮಕ್ಕಳಿಗೆ ಶಿಕ್ಷಣ ಮೂಲಭೂತ ಹಕ್ಕಾಗಿರುವುದು. ಪರಿಚ್ಛೇದ 23 ಯಾವುದೇ ವ್ಯಕ್ತಿ ಮಾರಾಟದ ವಸ್ತುವಲ್ಲಾ, ಪರಿಚ್ಛೇದ 24 14 ವರ್ಷದ ಒಳಗಿನ ಮಕ್ಕಳನ್ನು ದುಡಿಮೆಗೆ ಹಚ್ಚುವಂತಿಲ್ಲ. ಪರಿಚ್ಛೇದ 45 ಆರಂಭಿಕ ಬಾಲ್ಯದ ಶಿಕ್ಷಣದ ವ್ಯವಸ್ಥೆ ಮಾಡುವುದು ಸರ್ಕಾರದ ಜವಾಬ್ದಾರಿ ಕಡ್ಡಾಯವಾಗಿದೆ. ಪರಿಚ್ಛೇದ 47 ಮಕ್ಕಳ ಅವಶ್ಯಕತೆಗಳನ್ನು ಪೂರೈಸುವುದು ಅದರಡಿ ಮಾನವ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಆದ್ಯ ಕರ್ತವ್ಯ. ಈ ಹಿನ್ನಲೆಯಲ್ಲಿ ವಿಶ್ವ ಸಂಸ್ಥೆಯು ನವೆಂಬರ್ 20, 1989 ರಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ಜಾರಿಮಾಡಿತು. ಭಾರತ ಸರ್ಕಾರ ಈ ಒಡಂಬಡಿಕೆಗೆ ಡಿಸೆಂಬರ್ 11, 1992 ರಲ್ಲಿ ಸಹಿ ಮಾಡಿತು. ಇದರಲ್ಲಿ ಒಟ್ಟು 54 ಪರಿಚ್ಛೇದಗಳಿವೆ. ಅವುಗಳಲ್ಲಿ ಬದುಕುವ ಹಕ್ಕು, ರಕ್ಷಣೆ ಹೊಂದುವ ಹಕ್ಕು, ಅಭಿವೃದ್ಧಿ ಹೊಂದುವ ಹಕ್ಕು ಮತ್ತು ಭಾಗವಹಿಸುವ ಹಕ್ಕು ಇವು ಮಕ್ಕಳಿಗಿರುವ ಪ್ರಮುಖ ಹಕ್ಕುಗಳು ಇವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ರಾಜ್ಯ ಸರ್ಕಾರಗಳ ಮೂಲಕ ರಾಜ್ಯ ನಿರ್ದೇಶಕ ತತ್ವಗಳಡಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತ್ ಮೂಲಕ ಮಕ್ಕಳ ಗ್ರಾಮ ಸಭೆ ಆಯೋಜಿಸಿ ಅಹವಾಲುಗಳನ್ನು ಆಲಿಸುವುದು ಮತ್ತು ಬಗೆಹರಿಸುವುದು. ಮಗುವಿನ ಹಿತ ದೃಷ್ಠಿಯಿಂದ ತಾರತಮ್ಯರಹಿತ ಸಾಮಾಜಿಕ ನ್ಯಾಯ ಒದಗಿಸಲು ಗ್ರಾಮ ಮಟ್ಟದಲ್ಲಿ ಮಕ್ಕಳ ಕಲ್ಯಾಣ ಸಮಿತಿಗಳನ್ನು ರಚಿಸಿ ಮಕ್ಕಳಿಗೊಸ್ಕರ ಸೌಲಭ್ಯಗಳನ್ನು ಒದಗಿಸುವುದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಮಕ್ಕಳ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಕಾರ್ಯ ನಿರ್ವಹಿಸುತ್ತವೆ. ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯ ಉದ್ದೇಶ ಗ್ರಾಮ ಪಂಚಾಯತಿ ಮಿತಿಯಲ್ಲಿ ಬರುವ ಎಲ್ಲಾ ಸೇವಾ ನಿರ್ವಾಹಕರು ಒಗ್ಗೂಡಿ ತಮ್ಮ ಇಲಾಖೆಗೆ ಸಂಭಂದಿಸಿದಂತೆ ಮಕ್ಕಳ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಹಂಚಿಕೊಳ್ಳುವುದು ಈ ಮಾಹಿತಿ ಮತ್ತು ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯಲ್ಲಿ ಕಂಡುಬಂದ ವಿಷಯಗಳ ಆಧಾರದ ಮೇಲೆ ಗ್ರಾಮ ಪಂಚಾಯತಿಯ ಎಲ್ಲಾ ಹಳ್ಳಿಗಳು ಮತ್ತು ವಾರ್ಡಗಳಿಗೆ ನಿರ್ದಿಷ್ಟ ಮಕ್ಕಳ ಅಭಿವೃದ್ಧಿ ಯೋಜನೆ ನಿರ್ಮಾಣ ಮಾಡುವುದು. ಆಯಾ ವಾರ್ಡಿನ ಸಭೆಯಲ್ಲಿ ಮಕ್ಕಳ ಮಾಹಿತಿ ಆಧರಿಸಿ ಚರ್ಚೆ ನಡೆಸುವುದು ಮತ್ತು ಕ್ರಮಗಳನ್ನು ಕೈಗೊಳ್ಳುವುದು. ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆಯಲ್ಲಿ ಭೌತಿಕ ಅಭಿವೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿಗೆ ಗಮನ ನೀಡುವುದರ ಜೊತೆಗೆ ಮಕ್ಕಳ ಆರೋಗ್ಯ, ಶಿಕ್ಷಣ, ರಕ್ಷಣೆ, ಅಭಿವೃದ್ಧಿ ಮತ್ತು ಭಾಗವಹಿಸುವಿಕೆಗೆ ಆಧ್ಯತೆ ನೀಡುವುದು, ಮಕ್ಕಳ ಹಕ್ಕುಗಳ ರಕ್ಷಣೆಗೆ ವ್ಯಾಪಕ ಚರ್ಚೆ ಮತ್ತು ಪ್ರಚಾರ ಮಾಡುವುದು ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಗುರುಪ್ರಸನ್ನರವರು ನುಡಿದರು. ಮತ್ತು ಮುಂದುವರೆದು ಮಕ್ಕಳಿಗೆ ನಿಮ್ಮ ಅಹವಾಲುಗಳನ್ನು ತಿಳಿಸಲು ಹೇಳಿದರು ಕೆಲವು ಹೊತ್ತು ಮಕ್ಕಳೆಲ್ಲ ಚರ್ಚಿಸಿ ಮಕ್ಕಳ ಮುಂದಾಳತ್ವದಲ್ಲಿ ಜೇನುಮುರಿ ಶಾಲೆಯಲ್ಲಿ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಲು ಮನವಿಯನ್ನು ಪಿಡಿಓ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಸಲ್ಲಿಸಿದರು. ಆ ಮನವಿಯಲ್ಲಿ ಮಕ್ಕಳು ಪ್ರಮುಖವಾಗಿ 12 ಬೇಡಿಕೆಗಳನ್ನು ಸಲ್ಲಿಸಿದರು. ಶಾಲೆಗೆ ಮೂಲಭೂತ ಸೌಕರ್ಯಗಳಾದ ಶಿಥಿಲಾವಸ್ಥೆಯಲ್ಲಿರುವ ಊಟದ ನಂತರ ಕೈತೊಳೆಯುವ ಸ್ಥಳವನ್ನು ಪುನರ್ ನಿರ್ಮಿಸುವುದು, ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಆಧುನಿಕ ಶೌಚಾಲಯಗಳ ನಿರ್ಮಾಣಶಾಲೆಯ ಮೈದಾನಕ್ಕೆ ಸಿಮೆಂಟ್ ಪೆವರ್ಸ ಅಳವಡಿಸುವುದು, ಶಾಲೆ ಮತ್ತು ಅಂಗನವಾಡಿಗೆ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸುವುದು, ಗ್ರಾಮಕ್ಕೆ ಬಸ್ ನಿಲ್ದಾಣ ನಿರ್ಮಾಣ ಮಾಡುವುದು, ಜೇನುಮುರಿ ಗ್ರಾಮದಲ್ಲೆಲ್ಲಾ ಸಿಸಿ ಪಕ್ಕಾ ಗಟಾರ ನಿರ್ಮಾಣ, ಹೊಲಕ್ಕೆ ಹೋಗಲು ರಸ್ತೆ ನಿರ್ಮಾಣ, ಸಭಾಭವನ ಕಾಮಗಾರಿ ಪೂರ್ಣಗೊಳಿಸುವುದು, ಗ್ರಾಮಕ್ಕೆ ಸ್ಮಶಾನ ಜಾಗ ನೀಡುವಂತೆ ಮಕ್ಕಳು ಆಗ್ರಹಿಸಿದರು.    ಗ್ರಾಮಾಭಿವೃದ್ಧಿ ಸಮಿತಿ ಮತ್ತು ಬಾಲ ವಿಕಾಸ ಸಮಿತಿ ಮೂಲಕ 2 ಮನವಿ ಪತ್ರಗಳನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಸಲ್ಲಿಸಲಾಯಿತು.     

ಮಕ್ಕಳಿಗೆ ಅಭಿನಂದನಾ ಪ್ರಮಾಣ ಪತ್ರಗಳನ್ನು ಮತ್ತು ವೀರ ಸೈನಿಕ ಭಾರತದ ಸಿಯಾಚಿನ್ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ವಿತ್ತಲ್ ಬಾಬು ಪಿಂಗಳೆರವರನ್ನು ಸನ್ಮಾನಿಸಿ ಮಕ್ಕಳಿಗೆ ಸ್ಥಳೀಯವಾಗಿ ಇರುವ ಸಾಧಕರನ್ನು ಗುರುತಿಸುವುದು ಮತ್ತು ಮುಂದಿನ ಪೀಳಿಗೆಯನ್ನು ಪ್ರೋತ್ಸಾಹಿಸಲು ಕರೆ ನೀಡಲಾಯಿತು. ಮಕ್ಕಳಿಗೆ ಲೊಯೋಲ ವಿಕಾಸ ಕೇಂದ್ರದಿಂದ ಕಲಿಕಾ ಸಾಮಗ್ರಿಗಳನ್ನು ಕಿರು ಕಾಣಿಕೆಯಾಗಿ ನೀಡಲಾಯಿತು.   

ಈ ಸಭೆಯಲ್ಲಿ 2 ವ್ಯಕ್ತಿಗಳನ್ನು ಸ್ಮರಿಸಬೇಕು ಅದರಲ್ಲಿ ಅನ್ನ ನೀಡುವ ದೇಶದ ಬೆನ್ನೆಲುಬು ರೈತ, ದೇಶವನ್ನು ಕಾಯುವ ವೀರ ಸೈನಿಕ ಏಕೆಂದರೆ ಇವರಿಬ್ಬರು ಇವತ್ತು ಇಲ್ಲಾ ಅಂದರೆ ನಾವು ಯಾರು ಬದುಕುವುದಿಲ್ಲ, ಯಾವುದೆ ಒಬ್ಬ ವ್ಯಕ್ತಿ ಎಷ್ಟೆ ಹಣ ಹೊಂದಿದ್ದರು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಪ್ರಸಕ್ತ ದಿನಮಾನಗಳಲ್ಲಿ ಟಿವಿ ಮತ್ತು ಮೊಬೈಲ್‌ನಿಂದ ಬಾಂಧವ್ಯಗಳನ್ನು ಕಳೆದುಕೊಳ್ಳುತ್ತಿದ್ದೆವೆ. ಮೊಬೈಲ್ ಜಗತ್ತಿನಲ್ಲಿ ಮುಳುಗಿದ ಈಗಿನ ಮಕ್ಕಳು ಹೊರಗಿನ ಪ್ರಪಂಚ ಮತ್ತು ಸಂಭಂದಗಳಾದ ಅಜ್ಜ, ಅಜ್ಜಿ, ಅಕ್ಕ, ಮಾವ, ಚಿಕಪ್ಪಾ, ಅಣ್ಣ, ತಮ್ಮ, ತಂಗಿ, ತಾಯಿ, ತಂದೆ ಇವುಗಳನ್ನೆಲ್ಲಾ ಮರಿತಾ ಇದ್ದೇವೆ. ಬಾಂಧವ್ಯ ಇಲ್ಲದೆ ಬದುಕುತ್ತಿದ್ದೇವೆ ಇಂತಹ ಜೀವನ ನಮ್ಮ ಮಕ್ಕಳಿಗೆ ನಾವು ನೀಡಬಾರದು ಮಕ್ಕಳ ಸ್ನೇಹಿ ವಾತಾವರಣ ಮೊದಲು ಮನೆಯಲ್ಲಿ ನಂತರ ಸಮೂದಾಯದವರೆಲ್ಲರೂ ಸಮೂದಾಯದಲ್ಲಿ ಶಾಲೆಯಲ್ಲಿ ನಿರ್ಮಿಸಬೇಕು ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ಭಯರಹಿತ, ತಾರತಮ್ಯರಹಿತ, ಹಿಂಸೆ ರಹಿತ, ಒತ್ತಡ ರಹಿತ, ನೈತಿಕ ವ್ಯವಸ್ಥೆಗಳನ್ನು ಮಕ್ಕಳಿಗೆ ಒದಗಿಸಬೇಕು" ಎಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರು ಆದ ರಾಜ್ಯ ಮಟ್ಟದಲ್ಲಿ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರಾದ ಶ್ರೀ ವಸಂತ ರಾಠೋಡ್ ಅವರು ಮಾತನಾಡಿದರು.     

ಈ ಕಾರ್ಯಕ್ರಮದ ನಂತರ ಅಂಗನವಾಡಿ ಮಕ್ಕಳಿಂದ ಬಾನಿನಲ್ಲಿ ಮೂಡಿಬಂದ ಚಂದಮಾಮಾ ಹಾಡಿಗೆ ಹೆಜ್ಜೆಯನ್ನು ಹಾಕುತ್ತಾ ಸಾಂಸ್ಕೃತಿಯ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಪವಿತ್ರ ಸಂಗಡಿಗರಿಂದ ಈಗ ಕೇಳೊ ಮಹದೇವ ಎಂಬ ಹಾಡು ಮತ್ತು ನೃತ್ಯ, ಬಾಲಕ ಗುರು ತೋರವತ್ ನಿಂದ ಪ್ರಾಣಿ ಪಕ್ಷಿಗಳ ಮಿಮಿಕ್ರಿ, ಪ್ರತಿಕಾ ಮತ್ತು ಸಂಗಡಿಗರಿಂದ ಗುಲಾಬಿ ಹಾಡಿಗೆ ರಿಮಿಕ್ಸ್‌ ನೃತ್ಯ, ಕೃಷ್ಣಾ ಎಡಿಗೆ ಸಂಗಡಿಗರಿಂದ ಧನಗರಗೌಳಿ ಸಮೂದಾಯದ ಪ್ರತಿಷ್ಠೆಯ ನೃತ್ಯ ಗಜ ಪ್ರದರ್ಶನದೊಂದಿಗೆ ಮಕ್ಕಳ ಬಾಲ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆಯನ್ನು ಎಳೆಯಲಾಯಿತು.     

ಈ ಕಾರ್ಯಕ್ರಮದಲ್ಲಿ ಶ್ರೀಮತಿ ಪಕ್ಕಿರಾ​‍್ಪ ಪಾಟೀಲ್ ಅಧ್ಯಕ್ಷರು, ಶ್ರೀ ಇಸ್ಮಾಯಿಲ್ ಶಿಕಂದೆ ಉಪಾಧ್ಯಕ್ಷರು, ವಿಜಯ್ ಲಮಾಣಿ ವಾರ್ಡ ಸದಸ್ಯರು ಶ್ರೀ ಗುರುಪ್ರಸನ್ನ ಪಿಡಿಓ ಗ್ರಾಮ ಪಂಚಾಯತ್ ಬಾಚಣಕಿ ಶ್ರೀ ವಸಂತ ರಾಠೋಡ್ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜೇನಮುರಿ, ಶ್ರೀಮತಿ ಜನ್ನು ಬಾಯಿ ಜಾನು ಗಾವಡೆ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಬಾಚಣಕಿ, ಶ್ರೀ ಮಹೇಶ ಚಿಕ್ಕವೀರಮಠ ಶಿಕ್ಷಣ ಪ್ರೇಮಿ, ಊರ ಹಿರಿಯರಾದ ಶ್ರೀ ದೊಂಡು ಜಾನು ಜೋರೆ, ತುಕಾರಾಮ ತೋರವತ್, ಸೈನಾಜಬಿ ಕಮಡೊಳ್ಳಿ, ಎಲ್ ವಿಕೆ ಸಿಬ್ಬಂದಿ ವರ್ಗದವರಾದ ಲಕ್ಷ್ಮಣ ಮುಳೆ ಮತ್ತು ಪ್ರವೀಣ ಶೇದಿಯಣ್ಣನವರ್ ಕಾರ್ಯಕ್ರಮದ ನಿರೂಪಣೆ ಸವಿತಾ ಜಾನು ಗಾವಡೆ, ಸಂವಿಧಾನ ಪ್ರಸ್ತಾವನೆ ಲಕ್ಷ್ಮೀ ರಾಮು ಕೊಕರೆ, ಸ್ವಾಗತ ಸಂಗೀತಾ ಬಾಬು ಗಾವಡೆ ವಂದನಾರೆ​‍್ಣ ಸಂಗೀತಾ ಚಿಚ್ಚು ಎಡಗೆ ನೆರವೇರಿಸಿದರು.  ಈ ಸಂದರ್ಭದಲ್ಲಿ ಜೇನಮುರಿ ಗ್ರಾಮದ ಗ್ರಾಮಾಭಿವೃದ್ಧಿ ಸಮಿತಿ ಸದಸ್ಯರು, ಮಕ್ಕಳು, ಯುವಜನರು, ಮಹಿಳೆಯರು, ಪುರುಷರು ಸೇರಿದಂತೆ 250 ಜನರು ಹಾಜರಿದ್ದರು. 


ಸುದ್ದಿ ಓದಿ