ಇಂದಿನ ಮಕ್ಕಳೇ ನಾಳಿನ ಪ್ರಜೆಗಳು: ಗೌರಿ ಮಡಿವಾಳರ
ಶಿಗ್ಗಾವಿ 28: ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಆದ್ದರಿಂದ ಎಲ್ಲ ಮಕ್ಕಳು ತಂದೆ ತಾಯಿಂದಿರ ಅನೇಕ ಶ್ರಮದಿಂದ ನಾವು ವಿದ್ಯಾಬ್ಯಾಸಕ್ಕೆ ಬಂದಿದ್ದೇವೆ ಅವರ ಶ್ರಮ ವ್ಯರ್ಥವಾಗದಂತೆ ನಾವು ಪಾಠದಲ್ಲಿ ಮಗ್ನರಾಗಬೇಕು ಎಂದು ಕುಮಾರಿ ಗೌರಿ ಮಡಿವಾಳರ ಕಿವಿ ಮಾತು ಹೇಳಿದರು.
ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ 1 ರಲ್ಲಿ ನಡೆದ ಮಕ್ಕಳ ದಿನಾಚರಣೆ ಅಧ್ಯಕ್ಷತೆವಹಿಸಿ ಮಾತನಾಡಿದ ಕುಮಾರಿ ಎಲ್ಲರೂ ಸರಕಾರಿ ಕನ್ನಡ ಶಾಲೆ ಎಂದರೇ ಕಿಳು ಮಟ್ಟದಲ್ಲಿ ಮಾತನಾಡುತ್ತಾರೆ ಅದಕ್ಕೆ ಶಾಲೆಯಲ್ಲಿ ಕಲಿಯುವ ಎಲ್ಲ ಮಕ್ಕಳು ನಾವೇಲ್ಲರೂ ಉನ್ನತ ಹುದ್ದೆಯನ್ನು ಅಲಂಕರಿಸಿ ನಮ್ಮ ಪ್ರತಿಬೆಯನ್ನು ಇತರರಿಗೆ ತೋರಿಸಬೇಕಾಗಿದೆ ಎಂದರು.
ಪ್ರಧಾನ ಶಿಕ್ಷಕಿ ಎಂ.ಎಂ.ದೇವಕಿಗೌಡ್ರ ಮಾತನಾಡಿ ನಮ್ಮ ಶಾಲೆಯಲ್ಲಿ ಕಲಿಯುವ ಮಕ್ಕಳು ಎಲ್ಲ ರಂಗಗಳಲ್ಲಿ ಯಶಸ್ಸು ಸಾಧಿಸಬಲ್ಲ ಮಕ್ಕಳಾಗಿದ್ದಾರೆ ಅವರಿಗೆ ಸ್ವಲ್ಪ ಮಟ್ಟಿಗೆ ಮಾರ್ಗದರ್ಶನ ಸಿಕ್ಕರೆ ಯಾರಿಗೂ ನಮ್ಮ ಮಕ್ಕಳು ಕಮ್ಮಿಯಿಲ್ಲ ಎಂದರು.
ಶಾಲಾ ಸುಧಾರಣಾ ಸಮಿತಿ ಉಪಾಧ್ಯಕ್ಷೆ ಮಮತಾ ಜಾಧವ ಮಾತನಾಡಿ ನಮ್ಮ ಶಾಲೆಯ ಮಕ್ಕಳು ಯಾವ ರಂಗದಲ್ಲಿ ಹಿಂದೆ ಬಿಳಬಾರದು ಎಂದು ಶಾಲಾ ಸುಧಾರಣಾ ಸಮಿತಿ ವತಿಯಿಂದ ಅನೇಕ ಮಕ್ಕಳ ಸಮಗ್ರ ಅಭಿವೃದ್ದಿ ಹಾಗಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ರವಿ ಮಡಿವಾಳರ, ಸದಸ್ಯರಾದ ಸುರೇಶ ಹರಿಗೊಂಡ, ಸತೀಶ ಕಲಾಲ, ಸಂಜೀವ ಮಣ್ಣಣ್ಣವರ, ಚಂದ್ರಕಲಾ ಬೋರಣ್ಣವರ, ತ್ರಿವೇಣಿ ಗುರುಮಠ, ಬೀಬಿ ಪಾತಿಮಾ ಜಪೇದಾರ, ಮಂಜಮ್ಮ ವಾಲ್ಮೀಕಿ ಸೇರಿದಂತೆ ನಾಗರಾಜ ಬಡಿಗೇರ, ಎಸ್.ಡಿ.ಮೆಳ್ಳಳ್ಳಿ, ಕೆ.ಬಿ.ದೊಡ್ಡಮನಿ ಉಪಸ್ಥಿತರಿದ್ದರು. ಶಿಕ್ಷಕ ಲಿಂಗೇಶ ಕೆ.ಹೆಚ್ ಇವರನ್ನು ಶಾಲಾ ಸುಧಾರಣಾ ಸಮಿತಿ ಹಾಗೂ ಪ್ರಧಾನ ಗುರುಗಳು ಹಾಗೂ ಶಿಕ್ಷಕರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಈ ಶಾಲೆಯಿಂದ ರಾಜ್ಯಮಟ್ಟದ ಗೀತಗಾಯನ ಸ್ಪರ್ದೇಗೆ ಆಯ್ಕೆಯಾದ ಕಬ್ಸ್ ಮತ್ತು ಬುಲ್ ವಿದ್ಯಾರ್ಥಿಗಳನ್ನು ಬನ್ನೂರ ಭಾರತ ಸೇವಾ ಸಂಸ್ಥೆವತಿಯಿಂದ ಸನ್ಮಾನಿಸಲಾಯಿತು. ಕು ಶಿವಾನಂದ ಸ್ವಾಗತಿಸಿದರು, ಕು ಕೀರ್ತಿ ವಂದಿಸಿದರು, ಕು ತೇಜು ಮೆಳ್ಳಳ್ಳಿ, ಕು ಲಾವಣ್ಯ ಹಾರೋಗೇರಿ ನಿರೂಪಿಸಿದರು. ಪಾಲಕರು ಮತ್ತು ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.