ತನಿಖಾದಳದಿಂದ ಅಂಗಡಿಗಳ ಮೇಲೆ ತಂಬಾಕು ದಾಳಿ, ದಂಡ
ಮುಂಡಗೋಡ:ತಹಶೀಲ್ದಾರ ಶಂಕರ ಗೌಡಿ ಅವರ ನೇತೃತ್ವದಲ್ಲಿ ತಾಲೂಕು ಮಟ್ಟದ ತನಿಖಾದಳದ ಸದಸ್ಯರು ತಾಲೂಕಿನ ಕೆಲವು ಗ್ರಾಮೀಣ ಭಾಗಗಳ ಅಂಗಡಿಗಳ ಮೇಲೆ ತಂಬಾಕು ದಾಳಿ ನಡೆಸಿ, ದಂಡ ವಿಧಿಸಿ, ಕೋಟ್ಪಾ-2003 ಆಕ್ಟ್ ಕುರಿತು ಶುಕ್ರವಾರ ಜಾಗೃತಿ ಮೂಡಿಸಿದರು. ತಾಲೂಕಿನ ಕಾತೂರ, ಹಿರೇಹಳ್ಳಿ ಮತ್ತು ಕಾವಲಕೊಪ್ಪ ಗ್ರಾಮಗಳಲ್ಲಿ ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ ಒಟ್ಟು 1650ರೂ. ದಂಡ ವಿಧಿಸಿ 12 ಪ್ರಕರಣಗಳನ್ನು ದಾಖಲು ಮಾಡಿಕೊಂಡು ಎಚ್ಚರಿಕೆ ನೀಡಿದರು. ಕಡ್ಡಾಯವಾಗಿ ನಾಮಫಲಕಗಳನ್ನು ಅಳವಡಿಸುವಂತೆ ಸೂಚಿಸಿದರು. ದಂಡದ ಹಣವನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಜಂಟಿ ಖಾತೆ ನಂ.31581678198ಕ್ಕೆ ಸಂದಾಯ ಮಾಡಲಾಗುವುದು ಎಂದು ತಹಶೀಲ್ದಾರ ಶಂಕರ ಗೌಡಿ ತಿಳಿಸಿದರು.
ವೈದ್ಯಾಧಿಕಾರಿ ಪ್ರತುಶ್, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಶೈಲ ಪಟ್ಟಣಶೆಟ್ಟಿ, ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಚ್.ಹಿರೇಮಠ, ಆರೋಗ್ಯ ಶಿಕ್ಷಣಾಧಿಕಾರಿಗಳಾದ ಅಶೋಕ, ಪ್ರಸಾದ ಎ., ಕಾತೂರ ಪಿಡಿಒ ತಾರಾಮತಿ, ಮೇಲ್ವಿಚಾರಕಿ ಮಂಜುಳಾ ಮರಡಿಯವರ, ಕಾರ್ಮಿಕ ಇಲಾಖೆಯ ಗೋಪಾಲ ಕರ್ಜಗಿ, ಸಿಆರ್ ಪಿ ಮಲ್ಲಿಕಾರ್ಜುನ ಬಡಿಗೇರ, ಬಸವರಾಜ ವಡ್ಡರ, ಗ್ರಾಮ ಲೆಕ್ಕಾಧಿಕಾರಿ ಶಿವರಾಜ ಸೂರಿನ್, ಪಿಎಸ್ ಐ ಎನ್.ಡಿ.ಜಕ್ಕಣ್ಣವರ, ಸಂಜು ರಾಠೋಡ, ಪ್ರಕಾಶ ಶೃಂಗೇರಿ ಮುಂತಾದವರು ತಂಬಾಕು ದಾಳಿಯಲ್ಲಿ ಭಾಗವಹಿಸಿದ್ದರು.