ಮುಂದಗೋಡ

ಅಂಗಡಿಗಳ ಮೇಲೆ ತಂಬಾಕು ದಾಳಿ, ದಂಡ ವಿಧಿಸಿ ಎಚ್ಚರಿಕೆ

ಅಂಗಡಿಗಳ ಮೇಲೆ ತಂಬಾಕು ದಾಳಿ, ದಂಡ ವಿಧಿಸಿ ಎಚ್ಚರಿಕೆ

ಮುಂಡಗೋಡ 25: ಅಪರ ಜಿಲ್ಲಾಧಿಕಾರಿಗಳು ಹಾಗೂ ತಂಬಾಕು ನಿಯಂತ್ರಣ ಕೋಶದ ನೋಡಲ್ ಅಧಿಕಾರಿಗಳ ಸೂಚನೆ ಮೇರೆಗೆ ತಹಶೀಲ್ದಾರ ಶಂಕರ ಗೌಡಿ ಅವರ ನೇತೃತ್ವದಲ್ಲಿ ತಾಲೂಕು ಮಟ್ಟದ ತನಿಖಾದಳದ ಸದಸ್ಯರು ತಾಲೂಕಿನ ಪಾಳಾ ಮತ್ತು ಮಳಗಿ ಗ್ರಾಮಗಳ ಅಂಗಡಿಗಳ ಮೇಲೆ ಗುರುವಾರ ತಂಬಾಕು ದಾಳಿ ನಡೆಸಿ, ದಂಡ ವಿಧಿಸಿ, ಕೋಟ್ಪಾ-2003 ಆಕ್ಟ್‌ ಕುರಿತು ಜಾಗೃತಿ ಮೂಡಿಸಿದರು.  

ಒಟ್ಟು 40ಪ್ರಕರಣಗಳನ್ನು ದಾಖಲಿಸಿಕೊಂಡು 5500ರೂ. ದಂಡ ವಿಧಿಸಿ ಅಂಗಡಿಕಾರರಿಗೆ ಎಚ್ಚರಿಕೆ ನೀಡಿ ಕಡ್ಡಾಯವಾಗಿ ನಾಮಫಲಕಗಳನ್ನು ಅಳವಡಿಸುವಂತೆ ಸೂಚಿಸಲಾಯಿತು ಹಾಗೂ ಕರಪತ್ರಗಳನ್ನು ಹಂಚಲಾಯಿತು. ದಂಡದ ಹಣವನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಜಂಟಿ ಖಾತೆಗೆ ಸಂದಾಯ ಮಾಡಲಾಗುವುದು ಎಂದು ದಾಳಿಯಲ್ಲಿ ಭಾಗವಹಿಸಿದ್ದ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಶೈಲ ಪಟ್ಟಣಶೆಟ್ಟಿ ತಿಳಿಸಿದರು.  

ವೈದ್ಯಾಧಿಕಾರಿ ಭರತ ಡಿ.ಟಿ., ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ಪೇಮಕುಮಾರ ನಾಯ್ಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಾಮಾಜಿಕ ಕಾರ್ಯಕರ್ತ ಗೌರೆಸಾಬ ನದಾಫ್, ಪಾಳಾ ಗ್ರಾ.ಪಂ. ಪಿಡಿಒ ತಾರಾಮಣಿ ಜಿ., ಸುರೇಶ ಹುಡೇದ, ದೇವರಾಜ, ಪೊಲೀಸ್ ಇಲಾಖೆಯ ನಾಗರಾಜ ಎಚ್‌., ತಾಲೂಕು ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಎನ್‌.ಎಚ್‌.ಹಿರೇಮಠ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಶಬಾನಾ ಬೇಗಮ್, ಜಯಲಕ್ಷ್ಮೀ ಪವಾರ ಭಾಗವಹಿಸಿ ತಂಬಾಕು ದಾಳಿ ಯಶಸ್ವಿಗೊಳಿಸಿದರು. 


ಸುದ್ದಿ ಓದಿ