75ನೇ ಅಮೃತ ಮಹೋತ್ಸವನ್ನಗಿ ಆಚರಿಸುವುದರ ಪ್ರಯುಕ್ತ ತಿರಂಗ ಯಾತ್ರೆ
ಮುಂಡರಗಿ 14: ಪಟ್ಟಣದ ಕನ್ನಡ ಕ್ರಾಂತಿ ಸೇನೆಯ ಸಂಸ್ಥಾಪಕ ಮಂಜುನಾಥ ಇಟಗಿ ಇವರ ನೇತೃತ್ವದಲ್ಲಿ ದೇಶದ ಸ್ವಾತಂತ್ರಕ್ಕಾಗಿ ತ್ಯಾಗ, ಬಲಿದಾನಗೈದು ಸ್ವಾತಂತ್ರ್ಯ ಪಡೆದು ಇಂದಿಗೆ 75 ವರ್ಷಗಳು ಗತಿಸಿದ್ದರಿಂದ ಆ.15ರಂದು ನಡೆಯುವ ಸ್ವಾತಂತ್ರ್ಯವನ್ನು ದಿನಾಚರಣೆಯನ್ನು 75ನೇ ಅಮೃತ ಮಹೋತ್ಸವನ್ನಗಿ ಆಚರಿಸುವುದರ ಪ್ರಯುಕ್ತ ಶನಿವಾರ ಸಂಜೆ ತಿರಂಗ ಯಾತ್ರೆಯನ್ನು ಮಾಡಲಾಯಿತು.
ಈ ತಿರಂಗ ಯಾತ್ರೆಯು ಮುಂಡರಗಿಯ ಕೋಟೆಭಾಗದ ಶ್ರೀ ಮಾರುತಿ ದೇವಸ್ಥಾನದಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೋಟೆ ಮಾರುತಿ ದೇವಸ್ಥಾನಕ್ಕೆ ತಲುಪಿತು.
ಈ ವೇಳೆ ಮುಂಡರಗಿ ಮಂಡಲದ ಬಿಜೆಪಿ ಅಧ್ಯಕ್ಷ ಹೇಮಗೀರೀಶ ಹಾವಿನಾಳ, ಪುರಸಭೆ ಅದ್ಯಕ್ಷೆ ಕವಿತಾ ಉಳ್ಳಾಗಡ್ಡಿ, ಭೀಮಸಿಂಗ್ ರಾಠೋಡ್, ಕನ್ನಡ ಕ್ರಾಂತಿ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ ಮುಧೋಳ, ಸಂಜಯ ಚೌಡಾಳ, ಮುಖಂಡರಾದ ದೇವಪ್ಪ ಇಟಗಿ, ಯಲ್ಲಪ್ಪ ಗಣಾಚಾರಿ, ಶ್ರೀನಿವಾಸ ಕಟ್ಟಿಮನಿ, ಅಂದಪ್ಪ ಉಳ್ಳಾಗಡ್ಡಿ, ಪವಿತ್ರಾ ಕಲ್ಲಕುಟಿಗೇರ, ದೇವು ಹಡಪದ, ಅಡಿವೆಪ್ಪ ಚಲವಾದಿ, ನಾಗರಾಜ ಮುರಡಿ, ಕಿರಣ ಹುಲ್ಯಾಳ, ಹುಚ್ಚಪ್ಪ ಇಟಗಿ, ಚಂದ್ರಶೇಖರ್ ಪೂಜಾರ, ಶಿವಾನಂದ ಬಳ್ಳಾರಿ, ನಿಂಗರಾಜ ಮೇಗಳಮನಿ, ಪ್ರವಿಣ ಚಿಕ್ಕಣ್ಣವರ, ಮರಿಯಪ್ಪ ಮಾದಣ್ಣವರ, ಶಾಲಾ ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.