ಮತ ಎಣಿಕೆ ಪ್ರದೇಶಕ್ಕೆ ಬಿಗಿ ಭದ್ರತೆ
ಲೋಕದರ್ಶನ ವರದಿ
ಹುನಗುಂದ 28: ತಾಲೂಕಿನ 16 ಗ್ರಾಮ ಪಂಚಾಯತಗಳಿಗೆ ಚುನಾವಣೆ ನಡೆದಿದ್ದು 581 ಅಭ್ಯರ್ಥಿಗಳ ಭವಿಷ್ಯ ನಗರದ ವಿಜಯ ಮಹಾಂತೇಶ ಪ್ರೌಢ ಶಾಲೆಯ ಭದ್ರತಾ ಕೊಠಡಿಯಲ್ಲಿ ಇರಿಸಿರುವ ಮತಪೆಟ್ಟಿಗೆಯಲ್ಲಿ ಭಾರಿ ಭದ್ರತೆಯಲ್ಲಿ ಇರಿಸಲಾಗಿದೆ. ಮತಪೆಟ್ಟಿಗೆ ಇರಿಸಿರುವ ಭದ್ರತಾ ಕೊಠಡಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ ಡಿ.30ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು. ಅಲ್ಲಿಯವರೆಗೂ ಮತಪೆಟ್ಟಿಗೆಗಳು ಪೊಲೀಸ್ ಸರ್ಪಗಾವಲಿನಲ್ಲಿವೆ. ಭದ್ರತಾ ಸಿಬ್ಬಂದಿ ಸ್ಟ್ರಾಂಗ ರೂಮಗೆ 1 ಸಿಪಿಐ, 1 ಪಿಎಸ್‍ಐ. 1 ಎಎಸ್‍ಐ. 10 ಜನ ಪೊಲೀಸ್ ಸಿಬ್ಬಂದಿ, 10 ಜನರ ಡಿ.ಆರ್. ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಪಿಎಸ್‍ಐ ಶರಣಬಸಪ್ಪ ಸಂಗಳದ ಹೇಳಿದರು. ಪೊಲೀಸ್ ಸಿಬ್ಬಂದಿಗಳಾದ ವಾಯ.ಎಚ್.ವಾಲೀಕಾರ, ವಿ.ವಾಯ್. ಪಾಟೀಲ, ಎಂ.ಎಚ್.ಮುಲ್ಲಾ, ಎಸ್.ಎಸ್.ಸ್ವಾಮಿ, ಎಂ.ಎಂ.ಸೋಮನಕಟ್ಟಿ, ಮಲ್ಲಿಕಾರ್ಜುನ ಕುಲಕರ್ಣಿ ಉಪಸ್ಥಿತರಿದ್ದರು
28;ಎಚ್‍ಎನ್‍ಡಿ;2; ಹುನಗುಂದ-ನಗರದ ವಿಜಯ ಮಹಾಂತೇಶ ಪ್ರೌಡ ಶಾಲೆಯ ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಯಲ್ಲಿ ಭಾರಿ ಬದ್ರತೆಯಲ್ಲಿ ಇರಿಸಲಾಗಿದೆ. ಸ್ಥಳಕ್ಕೆ ಪಿ.ಎಸ್.ಐ.ಶರಣಬಸಪ್ಪ ಸಂಗಳದ ಭೆÉೀಟಿ ನೀಡಿದರು.