ರಾಣೆಬೆನ್ನೂರ

ಸರ್ಕಾರಿ ಶಾಲೆಗೆ ಟೈ, ಬೆಲ್ಟ್‌ ಗುರುತಿನ ಚೀಟಿ ದೇಣಿಗೆ ವಿತರಣಾ ಕಾರ್ಯಕ್ರಮ

ಸರ್ಕಾರಿ ಶಾಲೆಗೆ  ಟೈ, ಬೆಲ್ಟ್‌ ಗುರುತಿನ ಚೀಟಿ ದೇಣಿಗೆ ವಿತರಣಾ ಕಾರ್ಯಕ್ರಮ

ರಾಣೆಬೆನ್ನೂರು 20:  ಗ್ರಾಮೀಣ ಪ್ರದೇಶದಲ್ಲಿರುವ ಬಹುತೇಕ ಮಕ್ಕಳು ಅನೇಕ ಸಮಸ್ಯೆಗಳಿಂದ ಬಳಲುವುದು ಸಾಮಾನ್ಯ ಅಂತಹ ಮಕ್ಕಳಿಗೆ ಅವರ ಶೈಕ್ಷಣಿಕ ಪ್ರಗತಿಗಾಗಿ ಆರ್ಥಿಕವಾಗಿ ಸಮರ್ಥರಾಗಿದ್ದವರು, ಕಲಿತ ಶಾಲೆಗೆ ದೇಣಿಗೆ ನೀಡುವುದರ ಮೂಲಕ ತಮ್ಮ ಮಾನವೀಯತೆ ಮೆರೆಯಬೇಕಾದ ಅಗತ್ಯವಿದೆ  ಗೋವಿಂದರಾಜ್ ಕೊಟ್ಟೂರು ಹೇಳಿದರು.  

ಅವರು ರವಿವಾರ ತಾಲೂಕಿನ ಹುಲ್ಲತ್ತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಭವನದಲ್ಲಿ ನಡೆದ ಮಕ್ಕಳ ಶೈಕ್ಷಣಿಕ ಪೂರಕಟೈ. ಬೆಲ್ಟ್‌  ಮತ್ತು ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಂದೆ ತಾಯಿ ಮೊದಲನೇ ಗುರುವಾದರೆ, ನಮ್ಮನ್ನು ಕಲಿಸಿದ  ಗುರುಗಳು ಎರಡನೇ ಗುರು. ಕಲಿತ ಶಾಲೆಗೆ ನಮ್ಮದೇ ಆದ ಕೊಡುಗೆಯನ್ನು ನೀಡುವುದರ ಮೂಲಕ, ಶಾಲೆಯ ಋಣವನ್ನು ತೀರಿಸಲು ಮುಂದಾಗಬೇಕು ಎಂದ ಅವರು, ತಮಗೆ ಕಲಿಸಿದ ಗುರುಗಳಿಗೆ ನಾವು ಏನೇ ಕೊಟ್ಟರು ಋಣ ತೀರಿಸಲು ಸಾಧ್ಯವಾಗಲಾರದು ಎಂದರು. ಮತ್ತೋರ್ವ ಅತಿಥಿ, ಪೊಲೀಸ್ ಇಲಾಖೆಯ ಮಂಜುನಾಥ ಕೆರೋಡಿ  ಅವರು, ತಾವು ಸಹ ಇದೆ ಶಾಲೆಯಲ್ಲಿ ಕಲಿತಿದ್ದು, ಮುಂದಿನ ದಿನಮಾನಗಳಲ್ಲಿ ತಾವು ಸಹ ಶಾಲೆಗೆ ಬೇಕಾಗುವ ಮೂಲಭೂತ ಸೌಲತ್ತುಗಳನ್ನು ದೇಣಿಗೆಯಾಗಿ ನೀಡುವುದಾಗಿ ಅವರು ಭರವಸೆ ನೀಡಿದರು. ಎಸ್ ಡಿ ಎಂ ಸಿ ಅಧ್ಯಕ್ಷ ರವಿ ಕೆರೋಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಗೀತಾ ಓಲೆಕಾರ್, ಪ್ರಧಾನ ಗುರುಮಾತೆ ಎನ್ ಹೆಚ್ ತ್ರಿವೇಣಿ, ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಜಗದೀಶ ಕೆರೋಡಿ, ವಿಜಯಕುಮಾರ್ ಕೆರೋಡಿ, ಮಂಜುನಾಥ್ ವಡ್ಡರ, ರವಿ ಬ್ಯಾಡಗಿ, ರಾಜು ಓಲೆಕಾರ್, ಭರತ್ ಹಾಸಲ್, ರೂಪಾ ಪೂಜಾರ್, ಬಸವ್ವ ಕಳ್ಳಿ, ಸೇರಿದಂತೆ ಮತ್ತಿತರ ಗಣ್ಯರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮಸ್ಥರು  ಉಪಸ್ಥಿತರಿದ್ದರು. ಸಂಗೀತ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಚಂದ್ರ​‍್ಪ ತಾವರಗುಂದಿ ಸ್ವಾಗತಿಸಿ ನಿರೂಪಿಸಿದರು. 


ಸುದ್ದಿ ಓದಿ