ಶಿಶುವಿಗೆ ಕಚಗುಳಿ ಇಡೋದೆಷ್ಟು ಸರಿ?
ಬೆಂಗಳೂರು,ಅ.22: ಬಹುತೇಕ ತಂದೆತಾಯಿಗಳದ್ದು ತಮ್ಮ ಮಗು ಸದಾ ನಗ್ತಿರ್ಬೇಕು ಅನ್ನೋ ಆಸೆ.ಇನ್ನೂ ಹೆತ್ತತಾಯಿಯಂತೂ ಮಗುನ್ನ ನಗ್ಸೋಕೆ ಮಗು ನಗುವಂತೆ ಮಾಡೋಕೆ ಏನೆಲ್ಲಾ ಮಾಡ್ತಾಳೆ.ತಾನೂ ನಗ್ತಾಳೆ ಅದನ್ನು ನಗಿಸ್ತಾಳೆ.ಇನ್ನೂ ಕೆಲವು ತಂದೆತಾಯಿಗಳಂತೂ ಮಗುವನ್ನ ಸದಾ ನಗ್ಸೋಕೆ ಅವುಗಳಿಗೆ ಕಚಗುಳಿ ಇಡೋದು ಸಾಮಾನ್ಯ.ಆದರೆ ಮಗುವಿನ ಮುಖದ ಮೇಲೆ ಹೀಗೆ ನಗುತರಿಸೋ ಮಗುವಿಗೆ ಬಲವಂತದ ನಗು ಬರಿಸೋ ಈಕಚಗುಳಿ ಇಡೋದೆಷ್ಟು ಸರಿ ಅನ್ನೋದು ಬಹುತೇಕರಿಗೆ ತಿಳಿದಿರಲ್ಲ. ಮಗು ನಗಲೆಂದು ಪಾದ ಕತ್ತು ಹೊಕ್ಕಳಿಗೆ ಕಚಗುಳಿ ಇಡೋದು ಸಹಜ.ಆದರೆ ಈ ಕಚಗುಳಿ ಆ ಮಗುವಿಗೆ ಖುಷಿ ಕೊಡ್ತಿದಿಯಾ ಇಲ್ವಾ ಅನ್ನೋದನ್ನ ಮಾತ್ರ ಯೋಚಿಸೋಕೆ ಹೋಗಲ್ಲ.ಅ ಮಗು ಖುಷಿಯಿಂದಾನೆ ನಗ್ತಾನೆ ಅಂತಾನೆ ಭಾವಿಸಿಬಿಡ್ತೀವಿ.ಆದರೆ ಆ ಮಗುವಿಗೆ ಈ ಕಚಗುಳಿ ತುಂಬಾ ಹಾನಿಕಾರಕ ಅನ್ನೋದರ ಪರಿವೇ ನಮಗಿರಲ್ಲ.
ಶಿಶುವಿಗೆ ಕಚಗುಳಿ ಇಟ್ಟಾಗ, ಅದು ತುಂಬಾ ವೇಗವಾಗಿ ನಗಲು ಪ್ರಾರಂಭಿಸುತ್ತೆ. ಅದರ ಉಸಿರಾಟವೂ ಜೋರಾಗಿತ್ತೆ. ಇದು ಶಿಶುವಿಗೆ ಕಚಗುಳಿ ಇಷ್ಟವಾಗುತ್ತೋ ಇಲ್ಲವೋ ಎಂದು ಹೇಳಲು ಸಾಧ್ಯವಾಗೋದಿಲ್ಲ.ಈ ಕಚಗುಳಿ ನಿಮ್ಮ ಮಗು ಸಂತೋಷದಿಂದ ನಗುತ್ತಿದೆ ಎಂದು ನಿಮಗೆ ಅನಿಸುತ್ತದೆ, ಆದರೆ ಅದು ಹಾಗಲ್ಲ.
ಕಚಗುಳಿ ಎನ್ನುವುದು ದೇಹದಲ್ಲಿ ಅನುಭವಿಸುವ ಸಂವೇದನೆ. ಇದು ದೇಹದ ಯಾವುದೇ ನಿರ್ದಿಷ್ಟ ಭಾಗವನ್ನು ಸ್ಪರ್ಶಿಸುವುದರಿಂದ ಉಂಟಾಗಬಹುದು.ಕಚಗುಳಿ ಮಾನಸಿಕ ಯಾತನೆಯಾಗಬಹುದು.
ಕಚಗುಳಿಯಿಂದ ತನಗೆ ಖುಷಿಯಾಗುವುದೋ ಇಲ್ಲವೋ ಎಂದು ಹೇಳಲಾಗದ ವಯಸ್ಸಿನ ಮಗು ಇಷ್ಟವಾಗಲಿಲ್ಲವೆಂದರೂ ನಿಮಗೆ ಹೇಳಲು ಬರದೆ ಯಾತನೆ ಅನುಭವಿಸಬಹುದು. ಅಲ್ಲದೆ, ಕಚಗುಳಿಯಿಂದಾಗಿ ನಗುವಾಗ ಮಕ್ಕಳು ಉಸಿರು ತೆಗೆದುಕೊಳ್ಳಲು ಕಷ್ಟವಾಗಬಹುದು. ಮಗುವಿನ ನಗುವಿನಲ್ಲಿ ಮೈ ಮರೆತ ನಿಮಗೆ ಅವುಗಳು ಉಸಿರಾಡಲು ಒದ್ದಾಡುತ್ತಿರುವುದು ಅನುಭವಕ್ಕೆ ಬಾರದೇ ಹೋಗಬಹುದು. ಹಾಗಾಗಿ ಮಕ್ಕಳು ತಮಗೆ ಕಚಗುಳಿಯಿಂದ ಖುಷಿಯಾಗುತ್ತದೆಯೇ ಇಲ್ಲವೇ ಎಂದು ಹೇಳುವಷ್ಟು ದೊಡ್ಡವರಾಗುವವರೆಗೆ ಕಚಗುಳಿ ಮಾಡಲು ಹೋಗಲೇ ಬಾರದು,ನಗು ತರಿಸೋ ಕಚಗುಳಿ ನೋವಾಗಬಹುದು,ಉಸಿರು ಹಿಡಿಯಬಹುದು,ಗಾಯವಾಗಬಹುದು.ಮಗುವನ್ನ ಅಸ್ವಸ್ಥತೆಗೆ ಗುರಿಯಾಗಿಸಬಹುದು.ಅಷ್ಟಕ್ಕೂ ಈ ಕಚಗುಳಿ ಅನ್ನೋದು ಹಿತವಲ್ಲ,ಶಿಕ್ಷೆ.ಹಿಂದೆ ಚೀನಾದಲ್ಲಿ ಹ್ಯಾನ್ ರಾಜನ ಆಡಳಿತದಲ್ಲಿ ಅಪರಾಧಿಗಳನ್ನು ಶಿಕ್ಷಿಸಲು ಕಚಗುಳಿಯಿಡಲಾಗುತ್ತಿತ್ತು.ದೇಹದ ಮೇಲೆ ಯಾವುದೇ ಗಾಯವಿಲ್ಲದೇ ಕಲೆಯಿಲ್ಲದೇ ನೋವಿಲ್ಲದೇ ನಗಿಸಿನಗಿಸಿ ಉಸಿರುಕಟ್ಟಿಸಿ ಸಾಯಿಸುವ ಪ್ರಕ್ರಿಯೆಯೂ ಅಗಿತ್ತು ಅನ್ನೋದನ ಇತಿಹಾಸ ಹೇಳುತ್ತೆ.