ರಾಷ್ಟ್ರೀಯ

ತಿರುಪತಿ ಬಳಿ ರಸ್ತೆ ಅಪಘಾತ : ಮೂವರ ದಾರುಣ ಸಾವು

ತಿರುಪತಿ ಬಳಿ ರಸ್ತೆ ಅಪಘಾತ : ಮೂವರ ದಾರುಣ ಸಾವು

ತಿರುಪತಿ, ಡಿಸೆಂಬರ್ 26: ತಿರುಮಲದಿಂದ ಬೆಂಗಳೂರಿಗೆ ಬರುತ್ತಿದ್ದ ಕಾರಿಗೆ ಲಾರಿ ಢಿಕ್ಕಿಹೊಡೆದ ಪರಿಣಾಮ  ಕರ್ನಾಟಕದ ಇಬ್ಬರು ಸೇರಿ ಮೂವರು ಮಹಿಳೆಯರು ಮೃತಪಟ್ಟ ದಾರುಣ ಘಟನೆ ಆಂಧ್ರ ಪ್ರದೇಶದ ತಿರುಪತಿ ಬಳಿ ಸಂಭವಿಸಿದೆ.  

ಬೆಂಗಳೂರಿನ ಕಾರು ಇದಾಗಿದ್ದು, ತಿರುಮಲ ವೆಂಕಟೇಶ್ವರ ದೇವರ ದರ್ಶನ ಪಡೆದು ಬೆಂಗಳೂರಿಗೆ  ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ಇವರಿದ್ದ ಕಾರಿಗೆ ಲಾರಿ ಢಿಕ್ಕಿಹೊಡಿದಿದೆ.  ಘಟನೆಯಲ್ಲಿ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.

ಅಪಘಾತದ ಪರಿಣಾಮ ಕಾರು ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ವರದಿಯಾಗಿದೆ.

 

ಸುದ್ದಿ ಓದಿ