ಕಾಂಗ್ರೆಸ್ ಮುಖಂಡರಿಂದ ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಕರೆ: ಮತ್ತಣ್ಣ ಕಡಗದ ಆರೋಪ
ರೋಣ:ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪಕ್ಷದ ಪರವಾಗಿ ಪೊಸ್ಟ್ ಮಾಡುವವರನ್ನು, ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿದ ಬಿಜೆಪಿಯ ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ಸ್ ಪಕ್ಷದ ಕೆಲವು ಮುಖಂಡರು ಬಿಜೆಪಿ ಕಾರ್ಯಕರ್ತರಿಗೆಪೋನ್ ಕರೆ ಮಾಡಿ ಬೆದರಿಕೆ ಹಾಕುವುದು,ಹಿಂದಿನ ಯಾವುದೋ ಒಂದು ವಿಷಯವನ್ನು ಇಟ್ಟುಕೊಂಡು ಇವಾಗ ಪೋಲಿಸ್ ಕಂಪ್ಲೈಂಟ್ ಮಾಡುವುದು ಕ್ಷೇತ್ರದಲ್ಲಿ ನೆಡೆಯುತ್ತಿದೆ ಎಂದು ಬಿಜೆಪಿ ರೋಣ ಮಂಡಲದ ಅಧ್ಯಕ್ಷಮುತ್ತಣ್ಣ ಕಡಗದ ಕಿಡಿಕಾರಿದ್ದಾರೆ.
ಈ ರೀತಿ ಮಾಡಿ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಪಕ್ಷದಿಂದ ದೂರ ಮಾಡುವ ಪ್ರಯತ್ನ ನಡೆಯುತ್ತಿದೆ, ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ಈ ರೀತಿಯ ದ್ವೇಷದ ರಾಜಕಾರಣ ನಾವು ಮಾಡಿಲ್ಲ,ಅದು ಸರಿಯಲ್ಲ ಅಂದುಕೊಂಡವರು ನಾವು,ನಾವು ಒಂದು ತತ್ವ ಸಿದ್ಧಾಂತದ ಮೇಲೆ ರಾಜಕಾರಣ ಮಾಡುತ್ತಿರುತ್ತೇವೆ, ಅದೆ ರೀತಿ ನೀವು ಒಂದು ತತ್ವ ಸಿದ್ಧಾಂತದ ಮೇಲೆ ರಾಜಕಾರಣ ಮಾಡುತ್ತಿರಿ, ನಾವು ಜನರ ತೀರ್ಿಗೆ ತಲೆ ಬಾಗಿರುತ್ತವೆ, ಕ್ಷೇತ್ರದ ಜನ ತಮಗೆ ಆಶೀರ್ವಾದ ಮಾಡಿದ್ದಾರೆ, ತಮ್ಮ ಅಭಿವೃದ್ಧಿ ಕೆಲಸಗಳಿಗೆ ಪಕ್ಷದ ಬೆಂಬಲ ಸದಾ ಇರುತ್ತದೆ,ದ್ವೇಷದ ರಾಜಕಾರಣ ಮುಂದುವರಿದರೆ ಮುಂದಿನ ದಿನದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಆರೋಪಿಸಿದ್ದಾರೆ.ಪಕ್ಷದ ಕಾರ್ಯಕರ್ತರು ಯಾರು ಭಯ ಪಡುವ ಅಗತ್ಯವಿಲ್ಲ, ಪಕ್ಷವು ಯಾವಾಗಲು ತಮ್ಮ ಜೊತೆಗಿರುತ್ತದೆ,, ಸಾಮಾಜಿಕ ಜಾಲತಾಣದಲ್ಲಿ ನಮ್ಮ ಪೋಸ್ಟ್ ನ್ಯಾಯಯುತ ಮತ್ತು ಗೌರವ ಪೂರ್ವಕವಾಗಿರಲಿ, ಕಿಳು ಮಟ್ಟದ ಭಾಷೆ ಬಳಸುವುದು ಬೇಡ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.