ತಾಳಿಕೋಟಿ

ಡೋಣಿ ನದಿಯಿಂದ ಸಾವಿರಾರು ಹೆಕ್ಟರ್ ಬೆಳೆ ನಾಶ: ಸ್ಪಂದಿಸದ ಜಿಲ್ಲಾಡಳಿತ

ಡೋಣಿ ನದಿಯಿಂದ ಸಾವಿರಾರು ಹೆಕ್ಟರ್ ಬೆಳೆ ನಾಶ: ಸ್ಪಂದಿಸದ ಜಿಲ್ಲಾಡಳಿತ

ರೈತರಿಗೆ 50 ಸಾವಿರ ಪರಿಹಾರ ನೀಡಿ : ಸಮಾಜ ಸೇವಕ ಸಿ.ಬಿ.ಅಸ್ಕಿ ಆಗ್ರಹ

ತಾಳಿಕೋಟೆ09: ಡೋಣಿ ನದಿ ಪ್ರವಾಹದಿಂದ ಸಾವಿರಾರು ಹೆಕ್ಟ್ರ ಪ್ರದೇಶದಲ್ಲಿ ಬೆಳೆ ನಾಶವಾಗಿದ್ದರೂ ಯಾವುದೇ ಜನಪ್ರತಿನಿಧಿಗಳು, ಅಧಿಕಾರಿಗಳು ಬೇಟಿ ನೀಡಿ ರೈತರಿಗೆ ಧೈರ್ಯ ತುಂಬಿಲ್ಲ. ಡೋಣಿ ನದಿ ಪ್ರವಾಹ ಸ್ಥಳಗಳಿಗೆ ಹಿರಿಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿ ರೈತರಿಗೆ ಕನಿಷ್ಠ 50 ಸಾವಿರ ಪರಿಹಾರ ನಿಡುವ ಕಾರ್ಯವನ್ನು ಮಾಡಬೇಕು ಎಂದು ಕೊಣ್ಣೂರದ ಅಸ್ಕಿ ಪೌಂಡೇಶನ್ ಅಧ್ಯಕ್ಷ, ಸಮಾಜ ಸೇವಕ ಸಿ.ಬಿ.ಅಸ್ಕಿ ಹೇಳಿದರು.

ಅವರು ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಾಧ್ಯಂತ ಸುರಿದ ಭಾರಿ ಮಳೆಯಿಂದಾಗಿ ಡೋಣಿ ನದಿಯಲ್ಲಿ ಭಾರಿ ಪ್ರಮಾಣದ ಪ್ರವಾಹ ಬಂದಿದೆ. ಇದರಿಂದ ತಾಳಿಕೋಟೆ, ಹರನಾಳ, ಮಿಣಜಗಿ, ಹಡಗಿನಾಳ, ನಾಗೂರ ಗ್ರಾಮಗಳ ಜಮೀನುಗಳ ಸಾವಿರಾರು ಹೆಕ್ಟ್ರ್ ಪ್ರದೇಶ ಪ್ರವಾಹ ನೀರು ಹರಿದು ಹೋಗಿದೆ. ರೈತರು ಬಿತ್ತನೆ ಮಾಡಿದ್ದ ತೊಗರಿ, ಹೆಸರು, ಸೂರ್ಯಕಾಂತಿ, ಹತ್ತಿ ಸೇರಿದಂತೆ ಇತರ ಬೆಳೆಗಳು ಹಾಳಾಗಿವೆ. ರೈತರು ಬಿತ್ತನೆಗೆ ಸಾವಿರಾರು ರೂಗಳು ಖಚರ್ು ಮಾಡಿ ಬಿತ್ತನೆ ಮಾಡಿದ್ದಾರೆ. ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಡೋಣಿ ನದಿ ಪ್ರವಾಹದಿಂದ ಬೆಳೆ ನಾಶವಾಗಿದ್ದರು ಸಹಿತ ಜನಪ್ರತಿನಿಧಿಗಳಾಲಿ, ಜಿಲ್ಲಾಧಿಕಾರಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿಲ್ಲ. ರೈತ ದೇಶದ ಬೆನ್ನೆಲುಬು ಎನ್ನುವದು ಕೇವಲ ಘೋಷಣೆಯಾಗಿ ಉಳಿದಿದೆ. ಜಿಲ್ಲೆಯಲ್ಲಿ ಭಾರಿ ಮಳೆಯಾಗಿ ಅಪಾರ ಪ್ರಮಾಣದ ನಷ್ಟವಾಗಿದ್ದರೂ ಸಹಿತ ಜಿಲ್ಲೆಗೆ ರಾಜ್ಯ ಸರಕಾರ ಯಾವುದೇ ಅನುದಾನ ನೀಡಿಲ್ಲ. ಸರಕಾರದ ನಿರ್ಲಕ್ಷ ಮಾಡಿದ ಬಗ್ಗೆ ಜನಪ್ರತಿನಿಧಿಗಲು ಚಕಾರವೆತ್ತಿಲ್ಲ. ಕೂಡಲೇ ಡೋಣಿ ಪ್ರವಾಹದಿಂದಾಗಿ ಹಾಳಾದ ಪ್ರದೇಶಗಳಿಗೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ರೈತರಿಗೆ 50 ಸಾವಿರ ಪರಿಹಾರ ನೀಡಬೇಕು. ಒಂದು ವಾರದಲ್ಲಿ ತುತರ್ು ಪರಿಹಾರ ನೀಡುವ ಕಾರ್ಯ ಮಾಡದಿದ್ದರೆ ಬಾಧಿತ ರೈತರೊಂದಿಗೆ ಕೂಡಿಕೊಂಡು ತಾಳಿಕೋಟೆ ಪಟ್ಟಣದ ತಹಶೀಲ್ದಾರ ಕಚೇರಿ ಎದರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಪುರಸಭೆ ಸದಸ್ಯ ಇಬ್ರಾಹಿಮ್ ಮನ್ಸೂರ, ರಾಮನಗೌಡ ನೀರಲಗಿ, ಅಪ್ಪುಗೌಡ ಯಾಳವಾರ, ವಿರೇಶ ಅಸ್ಕಿ, ಯಲ್ಲಪ್ಪ ಮಾದರ, ರಾಮನಗೌಡ ಬೂದಿಹಾಳ, ಮಡಿವಾಳಪ್ಪ ಅಂಬಳನೂರ, ಶರಣಗೌಡ ಹಡಲಗೇರಿ, ತಿಪ್ಪಣ್ಣ ಜ್ಯೋತಿ ಸೇರಿದಂತೆ ಇತರರು ಇದ್ದರು.


ಸುದ್ದಿ ಓದಿ