ಮಹರ್ಷಿ ವಾಲ್ಮೀಕಿ ಜಯಂತಿ ಯ ಪ್ರಯುಕ್ತ ಈ ಲೇಖನ.....
ಪರಿವರ್ತನೆಯ ಹರಿಕಾರ ರಾಮಾಯಣ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿ ದಾರ್ಶನಿಕರ ಪರಿವರ್ತನೆ ಇತಿಹಾಸ ಹೀಗಿದೆ.
ಒಮ್ಮೆ ಪ್ರಜೇತ ಮಹರ್ಷಿಗಳಿಗೆ ಅಗ್ನಿ ಶರ್ಮಾ ಎಂಬ ಪುತ್ರಜನನವಾಗಿ ಬಾಲ್ಯದಲ್ಲಿ ಆಟವಾಡುವಾಗ ತಪ್ಪಿಸಿಕೊಂಡು ದಾರಿತಪ್ಪಿ ಕಾಡಿನೊಳಗೆ ಹೋಗಿ ಬಿಡುತ್ತಾನೆ ಈತನನ್ನು ಪ್ರಜೇತ ಮಹರ್ಷಿಗಳು ಎಷ್ಟೇ ಹುಡುಕಿದರೂ ಸಿಗುವುದಿಲ್ಲ ಒಬ್ಬ ಬೇಟೆಗಾರ ಈ ಬಾಲಕನನ್ನು ನೋಡುತ್ತಾನೆ ಈತನನ್ನು ತನ್ನಲ್ಲಿಯೇ ಇರಿಸಿಕೊಂಡು ರತ್ನಾಕರ ಎಂದು ಮರುನಾಮಕರಣ ಮಾಡುತ್ತಾನೆ. ಬೇಟೆಆಡುವುದನ್ನು ಕಲಿಸುತ್ತಾನೆ ಬೇಟೆ ಆಡುತ್ತಾ ಆಡುತ್ತಾ ದೊಡ್ಡವನಾಗುತ್ತಾನೆ ಈತನಿಗೆ ಅಲ್ಲಿಯೇ ಮದುವೆ ಕೂಡಾ ಆಗುತ್ತೆ ಮಕ್ಕಳು ಕೂಡಆಗುತ್ತವೆ ಹೆಂಡಿರು ಮಕ್ಕಳನ್ನು ಜೋಪಾನ ಮಾಡಲು ಬದುಕಿಸಲು ಆತ ಅರಣ್ಯದಲ್ಲಿ ತಿರುಗಾಡುತ್ತಾ ದಾರಿ ಕೋರರನ್ನುತಡೆದು ಭಯಪಡಿಸಿ ದರೋಡೆ ಮಾಡಿಅದರಿಂದ ಬಂದಿರತಕ್ಕಂತಹ ಹಣವನ್ನ ವಸ್ತುಗಳನ್ನ ಮಾರಿ ಹೆಂಡರು ಮಕ್ಕಳನ್ನು ಸಲುವುತ್ತಿದ್ದನು ಇದೇ ರೀತಿಯಾಗಿ ಹತ್ತಾರು ವರ್ಷ ನಡೆದಾಗಅದೇಅರಣ್ಯದಲ್ಲಿ ನಾರದ ಋಷಿಮುನಿಗಳನ್ನು ತಡೆದು ನಿಲ್ಲಿಸಿ ನಿಮ್ಮಲ್ಲಿರುವ ವಸ್ತುಗಳನ್ನ ಹಣವನ್ನು ನನಗೆ ಕೊಡಬೇಕೆಂದು ಭಯಪಡಿಸುತ್ತಾನೆ.
ಹೆದರಿಸುತ್ತಾನೆ ಕೇಳುತ್ತಾನೆ ನಾರದಮುನಿಗಳು ನಗುತ್ತಾ ನನ್ನ ಹತ್ತಿರ ಏನೂ ಇಲ್ಲ ವೀಣೆ ಮತ್ತು ಕರತಾಳವನ್ನು ಬಿಟ್ಟರೆ ನಿನಗೇನು ಸಿಗುವುದಿಲ್ಲ ಎನ್ನುತ್ತಾರೆ ನಿಮಗೆ ನನ್ನನ್ನು ನೋಡಿದರೆ ಭಯವಾಗುವುದಿಲ್ಲವೇಎಲ್ಲರೂ ನನ್ನನ್ನು ನೋಡಿ ಭಯಪಟ್ಟು ಓಡಿ ಹೋಗುತ್ತಾರೆ ನನ್ನಎದುರಿಗೆ ಭಯಪಡದೆ ನೀವು ನಿಂತಿರುವುದನ್ನು ನೋಡಿದರೆ ನನಗೆ ವಿಚಿತ್ರವಾಗುತ್ತದೆ ಎನ್ನುತ್ತಾನೆ ಅವಾಗ ನೀನು ಏಕೆ ಈ ದರೋಡೆ ಮಾಡುತ್ತೆ ಏತಕ್ಕಾಗಿ ಎಂದು ಕೇಳಿದಾಗ ಆತರತ್ನಾಕರ ಹೇಳುತ್ತಾನೆ ನನ್ನ ಹೆಂಡರ ಮಕ್ಕಳನ್ನು ಬದುಕಿಸಬೇಕು ಸಲುವಬೇಕು ಅದಕ್ಕಾಗಿ ನಾನು ಇದನ್ನು ಮಾಡುತ್ತೇನೆಎಂದನು ಇದು ಪಾಪದ ಕೆಲಸ ಇದನ್ನು ಮಾಡಬಾರದು ಈ ಪಾಪದ ಕಾರ್ಯದಿಂದ ಬಂದ ಹಣ ವಸ್ತುವನ್ನು ಸ್ವೀಕರಿಸುವ ನಿನ್ನ ಹೆಂಡರು ಮಕ್ಕಳು ಈ ಕಾರ್ಯದಿಂದ ಬರುವ ಪಾಪದಲ್ಲಿ ಪಾಲುದಾರು ಆಗುತ್ತಾರೆಯೇ ಇದರಿಂದ ಆಗುವ ಶಿಕ್ಷೆಯಲ್ಲಿ ಅವರು ಪಾಲುದಾರ ಆಗುತ್ತಾರೆಯೇ ಎಂದು ಕೇಳಿದಾಗ ರತ್ನಾಕರ ಹೇಳುತ್ತಾನೆ ನನಗೆ ನನ್ನ ಹೆಂಡರ ಮಕ್ಕಳ ಮೇಲೆ ವಿಶ್ವಾಸಇದೆ ಪಾಲುದಾರರಾಗುತ್ತಾರೆ ಎನ್ನುತ್ತಾನೆಎಂದುರತ್ನಾಕರ ಋಷಿ ಮುನಿಗೆ ಹೇಳುತ್ತಾನೆ ಹಾಗಾದರೆ ಇದೊಂದು ಪರೀಕ್ಷೆಯಾಗಲಿ ನಾವು ಇಲ್ಲೇ ಇರುತ್ತೇವೆ ನೀನು ಮನೆಗೆ ಹೋಗಿ ನಿನ್ನ ಹೆಂಡರು ಮಕ್ಕಳಿಗೆ ನಾನು ಪ್ರತಿನಿತ್ಯ ಮಾಡುವ ದರೋಡೆಯಿಂದ ನಿಮ್ಮನ್ನು ಸಲುವುತ್ತೇನೆ.
ಅದರಿಂದ ನನಗೆ ಪಾಪ ಸುತ್ತಿ ಕೊಳ್ಳುತ್ತದೆ ಅದರಿಂದ ಶಿಕ್ಷೆ ಆದರೆಅದರಲ್ಲಿ ತಾವು ಕೂಡ ಪಾಲುದಾರು ಆಗಬೇಕು ಎಂದಾಗಅದಕ್ಕೆ ಹೆಂಡರು ಮಕ್ಕಳು ಒಪ್ಪುವುದಿಲ್ಲ ಅವಾಗ ಆ ರತ್ನಾಕರನಿಗೆಅರಿವಾಗಿ ನಾನು ಮಾಡಿದ ಪಾಪ ನನಗೆ ಹೊರತು ಬೆರಾರಿಗಲ್ಲ ಬೇರಾರು ಅದನ್ನು ತೆಗೆದುಕೊಳ್ಳುವುದಿಲ್ಲ ಎಂದು ಋಷಿಮುನಿಗಳ ಮಾತು ಸತ್ಯವಾಯಿತು ಎಂದು ಮತ್ತೆ ಋಷಿಮುನಿಗಳ ಹತ್ತಿರ ಬಂದು ಪಾದಕ್ಕೆ ನಮಸ್ಕರಿಸಿ ನೀವು ಹೇಳುವುದು ಸತ್ಯವಾಯಿತುಗುರುಗಳೇ, ನಾವು ಮಾಡಿದ ಪಾಪ ನಾವೇ ಅನುಭವಿಸಬೇಕು ನಾನು ಮಾಡುವ ಈ ಪಾಪದಕಾರ್ಯ ಮಹಾ ತಪ್ಪುಎಂದು ನಿಮ್ಮಿಂದಅರಿವಾಯಿತು ನನ್ನ ಹೆಂಡರು ಮಕ್ಕಳು ಪಾಪದಕಾರ್ಯದಿಂದ ಆಗುವ ಶಿಕ್ಷೆಗೆ ಪಾಲದಾರರು ಆಗುವುದಿಲ್ಲವಂತೆಎಂದಾಗ ನಾರದಮುನಿಗಳು ಆಯಿತು ನೀನು ಶ್ರೀರಾಮ ನಾಮ ಜಪವನ್ನ ಜಪಿಸು ಎಂದು ಆಶೀರ್ವದಿಸಿ ಒಂದುಗಿಡದ ಕೆಳಗೆ ಕೂಡಿಸಿ ರಾಮ ನಾಮವನ್ನುರತ್ನಾಕರನಿಗೆಉಚ್ಛರಿಸಲು ಹೇಳಿದಾಗ ರತ್ನಾಕರನಿಗೆರಾಮರಾಮಉಚ್ಚರಿಸಲು ಬಾರದಿದ್ದಾಗ ಮರಾ ಮರಾಎಂದುಉಚ್ಚರಿಸುತ್ತಾನೆ ಹಾಗೇ ನೀನು ಉಚ್ಚರಿಸುಎಂದು ಮರಾ ಮರಾಎನ್ನುತ್ತಲೆಉಚ್ಚರಿಸುಎಂದು ಬೋಧಿಸಿ ಮುಂದೆ ಸಾಗುತ್ತಾರೆ ಹತ್ತಾರು ವರ್ಷದ ನಂತರ ಮತ್ತೆಅದೇದಾರಿಯಲ್ಲಿ ಋಷಿಮುನಿಗಳು ಬಂದಾಗರಾಮರಾಮ ಎಂಬ ನಾಮ ಸ್ತುತಿ ಇವರ ಕರ್ಣ ಪಟಲಿಗೆ ಕೇಳಿ ಬಂತುಅದುದೊಡ್ಡಹುತ್ತ ವಾಗಿ ಬೆಳೆದು ನಿಂತ ಹುತ್ತಿನಿಂದ ಸುಮಧುರರಾಮರಾಮ ಎಂಬ ನುಡಿ ಕೇಳಿ ಬಂತು ಹತ್ತಿರ ಹೋಗಿ ಹುತ್ತವನ್ನು ಬಿಡಿಸಿದಾಗ ಅಚ್ಚರಿಯ ಶಕ್ತಿ ಮೂಡಿಬಂತುಎಷ್ಟೋ ವರ್ಷಗಳ ಹಿಂದೆರಾಮ ನಾಮ ಜಪ ಮಾಡಲು ಕೂಡ್ರಿಸಿದ ಆ ವ್ಯಕ್ತಿಯರತ್ನಾಕರನ ಅದ್ಭುತ ಶಕ್ತಿ ರೂಪ ಮೂಡಿ ಬಂತುತಲೆ ಸವರಿದಾಗರತ್ನಾಕರಕಾಣುತ್ತಿರುವ ಆ ಪ್ರಕಾಶಮಾನವಾಗಿರ್ತಕ್ಕಂತ ತೇಜಿಸುಕಣ್ಣಿನಲ್ಲಿ ಕಾಣುತ್ತಿತ್ತು ಮುಖದಲ್ಲಿ ಭಾಗ್ಯ ಭಾವತುಂಬಿದಚೈತನ್ಯಎದ್ದು ಕಾಣುತ್ತಿತ್ತುತಕ್ಷಣ ನಾರದ ಮುನಿಗಳಿಗೆ ಪ್ರಣಾಮಿಸುತ್ತಾನೆ ನಾರದ ಮುನಿಗಳು ವಾಲ್ಮೀ ಎಂಬ ಇರುವೆಯ ಹುತ್ತದಲ್ಲಿ ನೀನು ಮರುಜನ್ಮ ಪಡೆದಿರುವೆ ನೀನು ಮೂರು ಲೋಕಕ್ಕೆ ಮಹರ್ಷಿ ವಾಲ್ಮೀಕಿಯಾಗಿ ಪ್ರಸಿದ್ಧಿ ಪಡೆಯುವೆಎಂದು ಆಶೀವರ್ಾದ ಮಾಡುತ್ತಾರೆ. ಮುಂದೆ ರತ್ನಾಕರ ಮಹರ್ಷಿಯಾಗುತ್ತಾನೆ ಗಂಗಾ ತೀರದದಡದಲ್ಲಿ ದೊಡ್ಡ ಆಶ್ರಮವನ್ನು ಕಟ್ಟಿ ಆಶ್ರಮದಲ್ಲಿರಾಮನ ಪತ್ನಿ ಸೀತಾದೇವಿಗೆ ಆಶ್ರಯ ನೀಡುತ್ತಾನೆ ಲವ ಕುಶರಿಗೆ ವಿದ್ಯಾದಾನ ಮಾಡುತ್ತಾನೆ ಅಲ್ಲಿಯೇ ಶ್ರೀ ರಾಮಾಯಣ ಎಂಬ ಮಹಾ ಕಾವ್ಯ ರಚಿಸಿ ವಿಶ್ವಕ್ಕೆ ಪರಿವರ್ತನೆಯ ಪರಿಮಳದ ಸಂದೇಶ ನೀಡಿದವರೇ ಮಹಾಋಷಿ ಮಹರ್ಷಿ ವಾಲ್ಮೀಕಿಯವರು.
-ಶಿವಾನಂದ ಮ್ಯಾಗೇರಿ.
ಬೆಂಡಿಗೇರಿ.ಜಿಲ್ಲೆ ಹಾವೇರಿ