ಪ್ರೀತಿ ವಾತ್ಸಲ್ಯದ ಕರುಣಾಮಯಿಗಳು
ಮೇ 12 ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆಯನ್ನಾಗಿ ವಿಶ್ವಾದ್ಯಂತ ಫ್ಲೋರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನವನ್ನು ಅವರ ಅನನ್ಯ ಸೇವೆಗೆ ಗೌರವ ನೀಡುವ ದೃಷ್ಟಿಕೋನದಿಂದ ಅವರ ಸೇವೆಯ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವ ದೃಷ್ಟಿಯಿಂದ ಆಚರಿಸಲಾಗುತ್ತಿದೆ
ಹದಿನೇಳನೇ ಶತಮಾನದಿಂದ ಹತ್ತೊಂಬತ್ತನೆಯ ಶತಮಾನಗಳಲ್ಲಿ ನಡೆಯುತ್ತಿದ್ದ ದೇಶದೇಶಗಳ ನಡುವಿನ ಯುದ್ಧಗಳು ಸೈನಿಕರನ್ನು ಮಾತ್ರವಲ್ಲದೆ ಜನಸಾಮಾನ್ಯರನ್ನು ಸಹ ನರಳುವಂತೆ ಮಾಡುತ್ತಿದ್ದವು ಈ ಶತಮಾನಗಳು ಭಯ ಭೀಕರವಾಗಿದ್ದು ಸಾವಿರಾರು ಪ್ರಾಣಹಾನಿಗಳು ಸಂಭವಿಸುತ್ತಿದ್ದು ನೋವಿನಿಂದ ಬಳಲಿ ಬೆಂಡಾಗಿ ಸರಿಯಾದ ಚಿಕಿತ್ಸೆ ಹಾಗೂ ಶುಶ್ರೂಷೆ ಇಲ್ಲದೆ ಅನೇಕರು ಸಾವನ್ನಪ್ಪುತ್ತಿದ್ದರುಅಂತಹ ರಣ ಭೀಕರ ಪರಿಸ್ಥಿತಿಯಲ್ಲಿ ನೋವಿನಲ್ಲಿ ಇರುವವರಿಗೆ ಹಾಗೂ ಚಿಕಿತ್ಸೆಯ ಅವಶ್ಯಕತೆ ಇರುವವರಿಗೆ ಸರಿಯಾದ ರೀತಿಯ ಚಿಕಿತ್ಸೆ ಮತ್ತು ಶುಶ್ರೂಷೆ ಸಿಗುತ್ತಿರಲಿಲ್ಲ ಇದನ್ನ ಬಹು ಗಂಭೀರವಾಗಿ ಪರಿಗಣಿಸಿದ್ದ ಫ್ಲೋರೆನ್ಸ್ ನೈಟಿಂಗೇಲ್ ಅವರು ತನ್ನ ಸಿರಿವಂತಿಕೆ ಜೀವನವನ್ನು ತ್ಯಜಿಸಿ ಶುಶ್ರೂಷೆ ನೀಡುವುದು 1 ದೇವರ ಕೆಲಸವೆಂದು ಭಾವಿಸಿ ಒಪ್ಪಿಕೊಂಡು ಪ್ರಮಾಣಿಕತೆಯಿಂದ ಸೇವೆಯಲ್ಲಿ ನಿರತರಾಗಿದ್ದರು
ಅಂದಿನ ಕ್ರಿಮಿಯನ್ನ ವಾರ್ ಸಂದರ್ಭದಲ್ಲಿ ಸಾವಿರಾರು ಸೈನಿಕರು ಸಾವನ್ನಪ್ಪಿದ್ದರು ಹಾಗೂ ಸಾವನ್ನಪ್ಪಿದ್ದ 3 ಪಟ್ಟು ಸೈನಿಕರು ಗಾಯಾಳುಗಳಾಗಿದ್ದರು ಇದನ್ನ ತಿಳಿದ ಫ್ಲೋರೆನ್ಸ್ ನೈಟಿಂಗಲ್ ತನ್ನ ಮೂವತ್ತೆಂಟು ಉಪಚಾರ ಕರೊಂದಿಗೆ ಯುದ್ಧ ಭೂಮಿಗೆ ತೆರಳಿ ಅಲ್ಲಿನ ನೈಜ ವಾತಾವರಣ ಪರಿಸ್ಥಿತಿಗಳನ್ನು ನೋಡಿ ಗಾಬರಿಯಾಗಿದ್ದರು ಮೊದಲೇ ಕಾಲರಾ ಟೈಫಾಯ್ಡ್ ಎಂಬ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದ ಕಾಲವದು ಅಂತಹ ಭೀಕರ ಪರಿಸ್ಥಿತಿಯಲ್ಲಿ ಗಾಯಾಳುಗಳಾದ ಸೈನಿಕರನ್ನು ಇಟ್ಟಂತಹ ಸ್ಥಳ ನಿಜಕ್ಕೂ ಎಂಥವರಿಗೂ ಅಸಹ್ಯ ಹೇಸಿಗೆ ಹುಟ್ಟಿಸುತ್ತಿತ್ತು ಅದಕ್ಕೆ ಮುಖ್ಯವಾದ ಕಾರಣ ಶುಚಿತ್ವ ಕಾಪಾಡಿಕೊಳ್ಳದ ಕ್ರಿಮಿಕೀಟಗಳ ಆಧಾರವಾಗಿತ್ತು ಸರಿಯಾದ ವ್ಯವಸ್ಥೆ ಇರದೆ ಸತ್ತವರೆ ಅಧಿಕ ಇಂತಹ ಪರಿಸ್ಥಿತಿಯನ್ನು ಗಮನಿಸಿದ ಫ್ಲೋರೆನ್ಸ್ ನೈಟಿಂಗೇಲ್ ಮೊದಲು ಶುಚಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಅವರ ಜೊತೆ ಉತ್ತಮ ಗಾಳಿ ಬೆಳಕು ನೀರು ಹೀಗೆ ನೈಸರ್ಗಿಕ ವಾತಾವರಣದ ಜೊತೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಅವರನ್ನು ಸರಿಯಾದ ಆರೈಕೆ ನೀಡಿ ರೋಗಿಗಳನ್ನು ರೋಗದಿಂದ ಮುಕ್ತರನ್ನಾಗಿ ಮಾಡಿ ಉಪಚರಿಸುತ್ತಿದ್ದರು
ರಾತ್ರಿಯೂ ಸಹ ನಿದ್ದೆಯನ್ನೇ ಮಾಡದೆ ದೀಪವನ್ನು ಹಿಡಿದುಕೊಂಡು ಸೈನಿಕರ ಸೇವೆ ಮಾಡುತ್ತಿದ್ದರು ಆದ್ದರಿಂದಲೇ ಇವರನ್ನ ಲೇಡಿ ವಿತ್ ದ ಲ್ಯಾಂಪ್ ಎಂದು ಕರೆಯಲಾರಂಭಿಸಿದ್ದರು
ಕೇವಲ ಬಡವರು ಹಾಗೂ ಕೆಳ ವರ್ಗದವರೆ ಮಾತ್ರ ಉಪಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಫ್ಲೋರೆನ್ಸ್ ನೈಟಿಂಗೇಲ್ ಇತರರನ್ನು ಈ ವೃತ್ತಿಗೆ ಕರೆತಂದು ಸಮಾಜಸೇವೆಗೆ ಧುಮುಕಿಸಿರುವ ಪರಿಣಾಮವಾಗಿಯೇ ಇಂದಿಗೆ ವೃತ್ತಿ ವಿಶ್ವಾದ್ಯಂತ ಹೆಮ್ಮರವಾಗಿ ಬೆಳೆದು ನಿಂತಿದೆ ಮೂಗು ಮುರಿಯುತ್ತಿದ್ದವರ ಮೂಗು ಮೊಂಡಾಗಿ ಹೋಗಿದೆ
ಪ್ರತಿಯೊಂದು ನೋವಿನ ವ್ಯಕ್ತಿಯ ಕಣ್ಣೀರು ಒರೆಸಲು ಹಾಗೂ ಚಿಕಿತ್ಸೆ ನೀಡಲು ಸದಾ ಸಿದ್ಧರಾಗಿ ಆರೋಗ್ಯ ಕ್ಷೇತ್ರದ ಸೈನಿಕರಂತೆ ಕೆಲಸ ಮಾಡುತ್ತಿರುವವರು ಇದೇ ದಾದಿಯರು
ಇಂದಿನ ಪ್ರಸ್ತುತ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ ಭಾರತವು ಜಗತ್ತಿನ ಅತಿ ಹೆಚ್ಚು ರಾಷ್ಟ್ರಗಳಿಗೆ ದಾದಿಯರನ್ನು ನೀಡಿದ ಹಿರಿಮೆ ಇದೆ ಆದ್ದರಿಂದ ಅನೇಕ ದೇಶಗಳು ಭಾರತದ ದಾದಿಯರು ಮೇಲೆಯೇ ಅವಲಂಬಿತವಾಗಿದೆ ಅಲ್ಲಿನ ಆರೋಗ್ಯ ಕ್ಷೇತ್ರವು ಸಂಪೂರ್ಣವಾಗಿ ಭಾರತೀಯರಿಂದಲೇ ತುಂಬಿಹೋಗಿವೆ ಆ ದೇಶಗಳಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣವಾದರೂ ಸಹ ದಾದಿಯರು ಮೊದಲು ಹೋಗಿ ಚಿಕಿತ್ಸೆ ನೀಡುವ ವಾತಾವರಣ ನಿರ್ಮಾಣವಾಗಿದೆ
ಕೊರೋನಾ ದಂತಹ ಉಸಿರುಗಟ್ಟಿಸುವ ಕಷ್ಟಕರ ಪರಿಸ್ಥಿತಿಯಲ್ಲಿ ಬದುಕುವುದು ದುಸ್ತರವಾಗಿದೆ ಜೀವ ಉಳಿಸಿಕೊಂಡರೆ ಅದೇ ದೊಡ್ಡ ಪುಣ್ಯ ಎಂದು ಭಾವಿಸುವ ವಾತಾವರಣದಲ್ಲೂ ಸಹ ಜೀವದ ಹಂಗನ್ನು ತೊರೆದು ರೋಗಿಯ ಆರೈಕೆ ಮಾಡಿ ಜಗತ್ತಿಗೆ ಹೀರೋ ಆಗಿ ನಿಂತವರೇ ದಾದಿಯರು ಮನೆಯವರೇ ಕೊರೋನಾ ಪೀಡಿತ ವ್ಯಕ್ತಿಯನ್ನು ಮುಟ್ಟದೇ ಇರುವ ಸಂದರ್ಭದಲ್ಲಿ ಅವರನ್ನು ಮುಟ್ಟಿ ಸನಿಹದಿಂದ ಉಪಚರಿಸಿದ ಕೀರ್ತಿ ಸಲ್ಲುವುದು ಶುಶ್ರೂಷಕರಿಗೆ ಆದ್ದರಿಂದಲೇ ಇವರನ್ನು ದೇವರೆ ದರೆಗೆ ಕಳುಹಿಸಿದ ಸಾಕ್ಷಾತ್ ದೇವದೂತರು ಎಂದು ಕರೆಯುತ್ತಾರೆ
ದೇಶದಲ್ಲಿ ನಸಿಂರ್ಗ್ ಕ್ಷೇತ್ರದಲ್ಲಿ ಕೆಲವೊಂದು ಮಹತ್ತರ ಬದಲಾವಣೆಗಳು ಆಗುವುದು ಇಂದಿನ ಪ್ರಸ್ತುತ ಅನಿವಾರ್ಯತೆ ಯಾಗಿದೆ ಈ ಕ್ಷೇತ್ರವನ್ನು ಇತರ ದೇಶಗಳಲ್ಲಿ ಯಾವ ರೀತಿ ನಸಿಂರ್ಗ್ ವೃತ್ತಿಯನ್ನು ಜನರು ಗೌರವಿಸಿ ಆರಾಧಿಸುತ್ತಾರೆ ಆ ರೀತಿಯ ವಾತಾವರಣ ಮತ್ತು ಪರಿಸ್ಥಿತಿ ನಮ್ಮ ದೇಶದಲ್ಲಿ ನಿರ್ಮಾಣ ಮಾಡಿ ಈ ವೃತ್ತಿಗೆ ಒಂದು ಘನತೆಯನ್ನು ತಂದುಕೊಡುವ ನಿಟ್ಟಿನಲ್ಲಿ ಸರಕಾರಗಳು ಪ್ರಯತ್ನ ಮಾಡಬೇಕಾಗಿದೆ
ಪ್ರತಿಯೊಂದು ಆಸ್ಪತ್ರೆಯಲ್ಲೂ ರಿಜಿಸ್ಟರ್ಡ್ ನರ್ಸ್ ಗಳನ್ನು ಮಾತ್ರ ಸೇವೆಗೆ ಇಟ್ಟುಕೊಳ್ಳಬೇಕು ಇಂತಹ ಕಾನೂನು ಇಂದಿನ ದಿನಮಾನಗಳಲ್ಲಿ ಅವಶ್ಯಕತೆಯಾಗಿದೆ ಯಾಕೆಂದರೆ ಆರೋಗ್ಯ ಕ್ಷೇತ್ರದಲ್ಲಿ ವಿಶ್ವಾಸವನ್ನು ಇಟ್ಟು ಬರುವ ಜನರಿಗೆ ತರಬೇತಿ ಪಡೆಯದ ವ್ಯಕ್ತಿಗಳು ಚಿಕಿತ್ಸೆ ನೀಡುವುದರಿಂದ ಆರೋಗ್ಯ ಏರುಪೇರಾಗುವಂತ ಸಂಭವಗಳೇ ಹೆಚ್ಚು ಆದ್ದರಿಂದ ಸರ್ಕಾರ ಮುತುವರ್ಜಿ ವಹಿಸಿ ಈ ಆಸ್ಪತ್ರೆಗಳಲ್ಲಿ ಹೆಚ್ಚಿನ ರೀತಿಯಾಗಿ ತರಬೇತಿ ಪಡೆದ ನರ್ಸ್ ಗಳೇ ಕೆಲಸ ಮಾಡುವ ರೀತಿಯಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಜಾರಿಗೆ ತರಬೇಕಾಗಿದೆ
ಗೊಡ್ಡು ದಾಖಲೆಗಳನ್ನು ನಿರ್ಮಾಣ ಮಾಡಿ ಸರ್ಕಾರದ ಕಣ್ಣಿಗೆ ಮಣ್ಣೆರೆಚುವ ಕಾನೂನುಬಾಹಿರ ಚಟುವಟಿಕೆಯನ್ನು ಮಾಡುವಂಥ ಸಂಸ್ಥೆಗಳ ಮೇಲೆ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ವಾದಂತಹ ಕ್ರಮಗಳನ್ನು ಕೈಗೊಂಡು ಅಂತಹ ಸಂಸ್ಥೆಗಳಿಗೆ ಬಿಸಿ ಮುಟ್ಟಿಸುವಂತಹ ಕೆಲ್ಸಗಳನ್ನ ಸರಕಾರ ಮಾಡಬೇಕಾಗಿದೆ
ಯಾವುದೇ ತರಗತಿಗಳನ್ನು ನಡೆಸದೆ ಪ್ರಾಯೋಗಿಕ ಶಿಕ್ಷಣ ನೀಡದೆ ನೇರವಾಗಿ ಪರೀಕ್ಷೆ ಬರಿಸುವಂತಹ ಕಾಲೇಜುಗಳನ್ನು ಆದಷ್ಟು ಬೇಗನೆ ವಿಚಾರಣೆ ನಡೆಸಿ ಶಿಸ್ತು ಬದ್ಧ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಹಾಗೂ ಅಂತಹ ಕಾಲೇಜುಗಳ ಪರವಾನಿಗೆಗಳನ್ನು ರದ್ದು ಗೊಳಿಸಬೇಕಾಗಿದೆ ಸರಿಯಾದ ಮೂಲಭೂತ ಸೌಕರ್ಯಗಳು ಇರದಂತಹ ಕಾಲೇಜುಗಳಿಗೆ ಪರವಾನಿಗೆಗಳನ್ನು ನೀಡುವಂಥ ದುಷ್ಟರನ್ನು ಶಿಕ್ಷಿಸುವಂಥ ಕಾನೂನು ರೂಪಿಸಬೇಕಾಗಿದೆ ಹಾಗೂ ಆರೋಗ್ಯ ವಿಶ್ವವಿದ್ಯಾನಿಲಯಗಳಿಗೆ ಕಟ್ಟುನಿಟ್ಟಿನ ಕ್ರಮ ಪಾಲಿಸುವಂತೆ ಸರ್ಕಾರ ಆದೇಶಿಸಬೇಕಾಗಿದೆ ಒಂದು ವೇಳೆ ಕಟ್ಟುನಿಟ್ಟಿನ ಶಿಸ್ತುಕ್ರಮಗಳನ್ನು ಪಾಲಿಸದೇ ಇದ್ದರೆ ಅಂಥವರಿಗೆ ಸೂಕ್ತವಾದಂತಹ ಶಿಕ್ಷೆ ನೀಡಲೇ ಬೇಕಾಗಿರುವುದು ಇಂದಿನ ಅನಿವಾರ್ಯತೆಯಾಗಿದೆ ಹದಗೆಟ್ಟಿರುವ ನಸಿಂರ್ಗ್ ಶಿಕ್ಷಣವನ್ನು ಸರಿಯಾದ ರೀತಿಯಾಗಿ ನಡೆಯುವ ಹಾಗೆ ಮಾಡಿ ರೆಗ್ಯುಲರ್ ಕಾಲೇಜುಗಳನ್ನು ಮಾತ್ರ ವಿಶ್ವವಿದ್ಯಾಲಯ ಅದರ ಪಟ್ಟಿಯಲ್ಲಿ ತಗೆದುಕೊಳ್ಳಬೇಕಾಗಿದೆ
ಇಂತಹ ಇನ್ನೂ ಅನೇಕ ಬದಲಾವಣೆಗಳು ಈ ಕ್ಷೇತ್ರದಲ್ಲಿ ತಂದು ಈ ವೃತ್ತಿಯ ಗೌರವವನ್ನು ಹೆಚ್ಚಿಸುವುದು ಇಂದಿನ ಪ್ರಸ್ತುತ ಬಹುದೊಡ್ಡ ಅನಿವಾರ್ಯತೆಯಾಗಿದೆ
ಶುಶ್ರೂಷಕರಿಗೆ ಸಮಾಜದಲ್ಲಿ ಸೂಕ್ತವಾದಂತಹ ಗೌರವ ಮರ್ಯಾದೆ ಆರ್ಥಿಕವಾಗಿ ಸಮಾಜಿಕವಾಗಿ ಎಲ್ಲ ರೀತಿಯಿಂದಲೂ ಪ್ರಾತಿನಿಧ್ಯ ಸಿಗಬೇಕಿದೆ ಅಂದಾಗ ಮಾತ್ರ ಈ ವೃತ್ತಿಯ ಗೌರವ ಉಳಿಯಲು ಸಾಧ್ಯ ವಾಗುವುದು ಮತ್ತೊಂದು ಬಾರಿ ಎಲ್ಲರಿಗೂ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆಯ ಶುಭಾಶಯಗಳು ...
- ಅಮಿತಕುಮಾರ ಬಿರಾದಾರ
ಉಪನ್ಯಾಸಕರು ವಿಜಯಪುರ
- * * * -