ಲೇಖನಗಳು

ಕೂದಲುದುರುವಿಕೆ ತಪ್ಪಿಸುತ್ತದೆ ಈ ಐದು ವಿಧಾನಗಳು!

ಕೂದಲುದುರುವಿಕೆ ತಪ್ಪಿಸುತ್ತದೆ ಈ ಐದು ವಿಧಾನಗಳು!

ಸಾಮಾನ್ಯವಾಗಿ ಕೂದಲು ಉದುರಿವಿಕೆ ಎಲ್ಲರಲ್ಲೂ ಕಂಡು ಬರುತ್ತಿರುವ ಸಮಸ್ಯೆ. ಆದರೆ ಎಷ್ಟೊ ಶ್ಯಾಂಪೂ, ಎಣ್ಣೆಗಳನ್ನು ಟ್ರೈಮಾಡಿ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಬೇಸರಿಸಿಕೊಳ್ಳುವವರಿಗೆ ಮನೆಯಲ್ಲೇ ಇರುವ ಕೊಬ್ಬರಿ ಎಣ್ಣೆಯಲ್ಲೇ ಕೂದಲು ಉದುರುವಿಕೆ ಮದ್ದಿದೆ. ಹೌದು ಈ ೫ ಕೊಬ್ಬರಿ ಎಣ್ಣೆ ಟಿಪ್ಸ್ ನಿಮ್ಮಕೂದಲು ಉದುರುವಿಕೆಯನ್ನು ಕಡಿಮೆ ಮಾಡಿ ಕೂದಲು ಸೊಂಪಾಗಿ ಬೆಳೆಯಲು ಕಾರಣವಾಗುತ್ತದೆ.

ತೆಂಗಿನೆಣ್ಣೆ- ಮೊಟ್ಟೆಯ ಹಳದಿ ಭಾಗ:

ಒಂದು ಬಟ್ಟಲಿನಲ್ಲಿ ಒಂದು ಮೊಟ್ಟೆಯ ಹಳದಿ ಲೋಳೆಯನ್ನು ಸೇರಿಸಿ ಮತ್ತು ಅದಕ್ಕೆ 2 ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ, ಸರಿಯಾಗಿ ಮಿಶ್ರಣ ಮಾಡಿ, ಒದ್ದೆಯಾದ ಕೂದಲಿಗೆ ಹಚ್ಚಿ. ಇದನ್ನು 20 ನಿಮಿಷಗಳ ಕಾಲ ಬಿಡಿ ಮತ್ತು ತಣ್ಣನೆಯ ನೀರಿನಿಂದ ತೊಳೆಯಿರಿ.

ತೆಂಗಿನೆಣ್ಣೆ-ಜೇನುತುಪ್ಪ:

ಜೇನುತುಪ್ಪ ಕೂದಲಿಗೆ ಹಾಕಿದರೆ ಬಿಳಿ ಕುದಲು ಹೆಚ್ಚಾಗುತ್ತದೆ ಎಂಬ ಮಾತಿದೆ. ಆದರೆ ಜೇನುತುಪ್ಪವು ತೇವಾಂಶವನ್ನು ಉಳಿಸಿಕೊಳ್ಳಲು ಮತ್ತು ನಮ್ಮ ಕೂದಲಿಗೆ ಹೊಳಪನ್ನು ಹೆಚ್ಚಿಸಲು ಸಹಕಾರಿಯಾಗಿದೆ. 1 ಚಮಚ ಬಿಸಿ ತೆಂಗಿನ ಎಣ್ಣೆ ಮತ್ತು 1 ಚಮಚ ನೈಸರ್ಗಿಕ ಜೇನುತುಪ್ಪವನ್ನು ಚೆನ್ನಾಗಿ ಬೆರೆಸಿ. ಇದನ್ನು ನೆತ್ತಿ ಮತ್ತು ನಿಮ್ಮ ಕೂದಲಿನ ಉದ್ದಕ್ಕೆ ಹಚ್ಚಿ, ಸುಮಾರು 20 ನಿಮಿಷಗಳ ಕಾಲ ಬಿಡಿ. ತದನಂತರ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.

ತೆಂಗಿನೆಣ್ಣೆ-ಬಾಳೆಹಣ್ಣು:

ಕೂದಲಿನ ಮಾಸ್ಕ್ ತಯಾರಿಸಲು ಮತ್ತೊಂದು ಸುಲಭವಾದ ವಿಧಾನವೆಂದರೆ ತೆಂಗಿನಕಾಯಿ ಮತ್ತು ಬಾಳೆಹಣ್ಣು. ಬಾಳೆಹಣ್ಣುಗಳು ನಮ್ಮ ಕೂದಲನ್ನು ಮೃದುವಾಗಿಸಿ, ನೈಸರ್ಗಿಕ ಸ್ಥಿತಿಸ್ಥಾಪಕತ್ವವನ್ನು ಉಳಿಸಿಕೊಳ್ಳುತ್ತದೆ. ಅರ್ಧ ಬಾಳೆಹಣ್ಣು ಮತ್ತು 1 ಚಮಚ ತೆಂಗಿನ ಎಣ್ಣೆಯನ್ನು ಪೇಸ್ಟ್ ಮಾಡಿದ ನಂತರ ಅದನ್ನು ನೆತ್ತಿಗೆ ಹಚ್ಚಿ ಮಸಾಜ್ ಮಾಡಿ. 20 ನಿಮಿಷಗಳ ಕಾಲ ನಂತರ ಸ್ನಾನ ಮಾಡಿ.

ತೆಂಗಿನೆಣ್ಣೆ-ನಿಂಬೆ:

ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದರಲ್ಲಿರುವ ಕಾಲಜನ್ ಎಂಬ ಅಂಶ ಕೂದಲಿನ ಬೆಳವಣಿಗೆಗೆ ಕಾರಣವಾಗುತ್ತದೆ. ಒಂದು ಬೌಲ್‌ಗೆ ಒಂದು ಚಮಚ ತೆಂಗಿನ ಎಣ್ಣೆ ಮತ್ತು ಒಂದು ಚಮಚ ನಿಂಬೆ ರಸವನ್ನು ಸೇರಿಸಿ, ಮಿಶ್ರಣ ಮಾಡಿ. ಒಣ ಕೂದಲಿಗೆ ಈ ಮಿಶ್ರಣವನ್ನು ಹಚ್ಚಿ, 15 ನಿಮಿಷಗಳ ಕಾಲ ಬಿಡಿ. ನಂತರ ನಿಮ್ಮ ದಿನನಿತ್ಯದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.

ನೆಲ್ಲಿ, ಶೀಗೆಕಾಯಿ, ತೆಂಗಿನೆಣ್ಣೆ:

ಒಂದು ಚಮಚ ನೆಲ್ಲಿಕಾಯಿ ಜ್ಯೂಸ್ ಮತ್ತು ಪುಡಿಯನ್ನು 2 ಚಮಚ ತೆಂಗಿನ ಎಣ್ಣೆಗೆ ಮಿಶ್ರಣ ಮಾಡಿ ಕುದಿಸಿ. ಜರಡಿ ಹಿಡಿದು, ತಣ್ಣಗಾಗಲು ಬಿಡಿ. ತದನಂತರ ಇದನ್ನು ಕೂದಲಿಗೆ ಮಸಾಜ್ ಮಾಡಿ ಮತ್ತು ರಾತ್ರಿಯಿಡೀ ಬಿಡಿ. ಮರುದಿನ ಬೆಳಿಗ್ಗೆ ನಿಮ್ಮ ಸಾಮಾನ್ಯ ಶಾಂಪೂ ಬಳಸಿ ತೊಳೆಯಿರಿ.

ಸುದ್ದಿ ಓದಿ