ಬಳ್ಳಾರಿ

ಜ್ಞಾನಕ್ಕಿಂತ ಮಿಗಿಲಾದ ಸಂಪತ್ತು ಬೇರಿಲ್ಲ: ಧನಲಕ್ಷ್ಮಿ

ಜ್ಞಾನಕ್ಕಿಂತ ಮಿಗಿಲಾದ ಸಂಪತ್ತು ಬೇರಿಲ್ಲ: ಧನಲಕ್ಷ್ಮಿ

ಬಳ್ಳಾರಿ 18: ಮನುಷ್ಯನ ಬದುಕಿಗೆ ಸಂಪತ್ತು ಬಹುಮುಖ್ಯ. ಸಂಪತ್ತಿನ ಸಂಗ್ರಹಕ್ಕಾಗಿ ಮಾನವನ, ಸತತ ಪ್ರಯತ್ನ ಸಾಗಿರುತ್ತದೆ. ಆದರೆ, ಸಂಪತ್ತು ಸದಾ ಚಲನಶೀಲವಾಗಿದೆ. 'ಹಣ ಗಳಿಸುವವ ಹೆಣನಾಗುವ'. ತಿಂದು ಕಂಡು ಸುಖಿಸುದನ್ನು ಮರೆತು, ಗಳಿಕೆಯಲ್ಲಿಯೇ ಮಾನವ ಕಾಲ ಕಳೆಯುತ್ತಾ, ಕಾಲಗರ್ಭದಲ್ಲಿ ಲೀನವಾಗುತ್ತಾನೆ. ತಾನಿದ್ದೆನೆಂಬ ಕುರುಹೂ ಕೂಡ ಇಲ್ಲಿ ಉಳಿಯುವುದಿಲ್ಲವೆಂದು ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿ ಕುಮಾರಿ ಪಿ.ಧನಲಕ್ಷ್ಮಿ ನುಡಿದರು. 

ನಗರದ ವೈ.ನಾಗೇಶಶಾಸ್ತ್ರಿ ಬಡಾವಣೆಯ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ, ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ 265ನೇ ಮಹಾಮನೆ, ಲಿಂಽಽ ಫಕೀರ​‍್ಪ ತೋಟಪ್ಪ ಗಡ್ಡಿ ದತ್ತಿ ಕಾರ್ಯಕ್ರಮದಲ್ಲಿ  "ಅಲ್ಲಮನ ಭೂಮಿ ನಿನ್ನದಲ್ಲ.." ಎಂಬ ವಚನ ಕುರಿತು ಮಾತನಾಡುತ್ತ ಮಾನವನು ಗಳಿಸಿದ ಭೂಮಿ, ಬಂಗಾರ, ಒಡವೆಗಳು ಶಾಶ್ವತವಲ್ಲ. ಬಂದು,ಬಾಂಧವ ಸತಿಸುತರು ಸ್ಥಿರ ವಲ್ಲ.ತಾನು ಗಳಿಸಿದ ಜ್ಞಾನಮಾತ್ರ ಸ್ಥಿರ. ಇದನ್ನು ಯಾರೂ ಕದಿಯಲಾರರು ಎಂದೂ ಹಾಳಾಗ ಲಾರದು. ವಿದ್ಯೆ ಅಥವಾ ಜ್ಞಾನದಿಂದ ವ್ಯಕ್ತಿ ಎಲ್ಲೇ ಇರಲಿ, ಗೌರವಕ್ಕೆ ಪಾತ್ರನಾಗುವನು. ದಿವ್ಯ ರತ್ನಕ್ಕಿಂತಲೂ ಹೆಚ್ಚು ಬೆಲೆ ಬಾಳುವ ಜ್ಞಾನಸಂಪತ್ತನ್ನ ಗಳಿಸಲು ವಿದ್ಯಾರ್ಥಿನಿಯರು ಸದಾ ಕ್ರಿಯಾಶೀಲರಾಗಿರಬೇಕೆಂದು ತಿಳಿಸಿದರು. 

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿದ್ಧರಾಮ ಕಲ್ಮಠ ರವರು, ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಜ್ಞಾನ ಸಂಪಾದನೆಯ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ವರ್ತಮಾನನನ್ನು ವ್ಯರ್ಥವಾಗಿ ಕಳೆಯದೇ ಸಾರ್ಥಕವಾಗಿ ಬೆಳೆಸಿಕೊಳ್ಳಬೇಕು ಎಂದರು. ಶಾಲೆಯ ಮುಖ್ಯೋಪಾಧ್ಯಾಯಿನಿಯರಾದ ಎ.ಕುಮುದಿನಿಯವರು ಮಾತನಾಡುತ್ತಾ ಸೋಲೇ ಗೆಲುವಿನ ಮೆಟ್ಟಿಲು, ಸಾಧಿಸುವೆ ನೆಂಬ ಛಲವೊಂದಿದ್ದರೆ, ವ್ಯಕ್ತಿ ಎಂತಹ ಸಾಧನೆಯನ್ನಾದರು ಮಾಡಬಹುದೆಂದರು. ವೇದಿಕೆಯಲ್ಲಿ ದತ್ತಿ ದಾಸೋಹಿಗಳಾದ ನಗರದ ಖ್ಯಾತ ಮೆದುಳು ಮತ್ತು ನರರೋಗ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಸೋಮೇಶ್ವರ ಗಡ್ಡಿ ಮತ್ತು ಡಾ. ಈಶ್ವರ ನಾಸಿಯವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಚಂದ್ರಕಲಾ ಹಾಗೂ ತಂಡದವರ ವಚನ ಪ್ರಾರ್ಥನೆ ಮಾಡಿದರು. ಪರಿಷತ್ತಿನ ಅಧ್ಯಕ್ಷರಾದ ಕೆ.ಬಿ.ಸಿದ್ಧಲಿಂಗಪ್ಪ ದತ್ತಿಧಾತೃಗಳ ಮಾಡಿ, ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶಿಕ್ಷಕಿ ಎಂ.ಗಿರಿಜ ಸ್ವಾಗತ ಕೋರಿದರು. ವೇದಿಕೆಯ ಗಣ್ಯರನ್ನು ಸನ್ಮಾನಿಸಿ, ವಿದ್ಯಾರ್ಥಿನಿಯರಿಗೆ ಸಿಹಿ ಹಂಚುವ ಮೂಲಕ ಕಾರ್ಯಕ್ರಮ ಮಂಗಲವಾಯಿತು. 


ಸುದ್ದಿ ಓದಿ