ಗಮನ ಬೆರೆಡೆ ಸೆಳೆದು ಕಳ್ಳತನ: ಆರೋಪಿಗಳ ಬಂಧನ, 3.50 ಲಕ್ಷ ವಶ
ಮುದ್ದೇಬಿಹಾಳ 11: ಪಟ್ಟಣದ ಹುಡ್ಕೋ ಬಡಾವಣೆಯ ಕರ್ನಾಟಕ ಬ್ಯಾಂಕ ಹತ್ತಿರ 3.60 ಲಕ್ಷರೂಗಳನ್ನು ಕಳುವು ಮಾಡಿ ಪರಾರಿಯಾಗಿದ್ದ ಕಳ್ಳನನ್ನು ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ ಹಣ ಸಮೇತ ಹಿಡಿದು ಬಂಧಿಸಿ ಯಶಸ್ವಿಯಾದ ಪಟ್ಟಣದ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಬಂಧಿತರಾದ ಶಂಕರ ಲಕ್ಷ್ಮಣ(32) ಹೊಸಮನ ಕುವೆಂಪು ನಗರ ಭದ್ರಾವತಿ ಜಿಲ್ಲಾ ಶಿವಮೊಗ್ಗ, ಸಂಜು ವೆಂಕಟೇಶ (19) ಹೊಸಮನಿ ತಮಿಳು ಸ್ಕೂಲ ಹತ್ತಿರ, ಭದ್ರಾವತಿ ಜಿಲ್ಲಾ ಶಿವಮೊಗ್ಗ ಇವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿತರು ಕಳೆದ ಮೇ 22ರಂದು ಮದ್ಯಾನ 3.30 ಗಂಟೆಯಿಂದ 3.45 ಗಂಟೆಯ ನಡುವಿನ ಅವಧಿಯಲ್ಲಿ ಸುಮಾರಿಗೆ ಹುಗ್ಗೋ ಕಾಲನಿಯಲ್ಲಿ ಇರುವ ಕರ್ನಾಟಕ ಬ್ಯಾಂಕ ದಿಂದ 360000=00 ರೂ ತೆಗೆದುಕೊಂಡು ಮೋಟ ಸೈಕಲ್ ಸೈಡ್ ಬ್ಯಾಗದಲ್ಲಿ ಇಟ್ಟುಕೊಂಡು ಹೂಗುತ್ತಿರುವಾಗ ಹುಡೋ ಗೇಟ ಹತ್ತಿರ ಎಳನೀರ ಅಂಗಡಿಯ ಹತ್ತಿರ ತಮ್ಮ ಮೋಟರ್ ಸೈಕಲ್ ನಿಲ್ಲಿಸಿ ಎಳೆನೀರು ತೆಗೆದುಕೊಂಡು ಮರಳಿ ಬಂದು ನೋಡುವಷ್ಟರಲ್ಲಿ ಸಿದ್ದಣ್ಣ ತುಕಾರಮ ಜೀರಗಾಳ ಅವರ ಗಮನ ಬೇರೆ ಕಡೆಗೆ ಸೆಳದು ಬ್ಯಾಗದಲ್ಲಿ ಇಟ್ಟಿದ್ದ 3,60,000 ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಒಪ್ಪಿಕೊಂಡಿದ್ದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಪಟ್ಟಣದ ಮಾರುತಿ ನಗರ ಬಡಾವಣೆಯ ಸಿದ್ದಣ್ಣ ತುಕಾರಮ ಜೀರಗಾಳ ಅವರು ದಿನಾಂಕ-22-05-2024 ರಂದು ಮದ್ಯಾನ 3-30 ಮದ್ಯಾನ 3-30 ಗಂಟೆ ಹಡ್ಕೋ ಬಡಾವಣೆಯಲ್ಲಿರುವ ಕರ್ನಾಟಕ ಬ್ಯಾಂಕ ದಿಂದ 360000ರೂ. ತೆಗೆದುಕೊಂಡು ತಮ್ಮ ಮೋಟರ್ ಸೈಕಲ್ ಸೈಡ್ ಬ್ಯಾಗದಲ್ಲಿ ಇಟ್ಟುಕೊಂಡು ಹೂಗುತ್ತಿರುವಾಗ ಹುಕ್ಕೋ ಗೇಟ ಬಳಿ ಎಳನೀರ ಅಂಗಡಿಯಲ್ಲಿ ಮೋಟರ್ ಸೈಕಲ್ ನಿಲ್ಲಿಸಿ ಎಳೆನೀರು ತೆಗೆದುಕೊಡು ಮರಳಿ ಬಂದು ನೋಡುವಷ್ಟರಲ್ಲಿ ಬ್ಯಾಗದಲ್ಲಿ ಇಟ್ಟಿದ್ದ 3,60,000 ಹಣವನ್ನು ತನ್ನ ಗಮನವನ್ನು ಬೇರೆ ಕಡೆಗೆ ಸೆಳದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದನ್ನು ಗಂಭಿರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿ ಪೊಲೀಸ್ ಅಧೀಕ್ಷಕರು ವಿಜಯಪುರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ವಿಜಯಪುರ ರವರ ಮಾರ್ಗದರ್ಶನದಲ್ಲಿ ಬಲ್ಲಪ್ಪ, ನಂದಗಾಂವಿ ಪೊಲೀಸ್ ಉಪಾಧೀಕ್ಷಕರು ಬ. ಬಾಗೇವಾಡಿ, ಮಲ್ಲಕಾರ್ಜುನ ತುಳಸಿಗೇರಿ, ಸಿಪಿಐ ಮುದ್ದೇಬಿಹಾಳ, ಸಂಜಯ ತಿಪರಡ್ಡಿ ಪಿ.ಎಸ್.ಐ, ಆರ್ಲ್.ಮನ್ನಾಭಾಯಿ ಪಿಎಸ್ಐ, ಪೊಲೀಸ್ ಠಾಣೆ, ಸಿಬ್ಬಂದಿಜನರಾದ ಬಿ.ಕೆ.ಗುಡಿಮನಿ, ತಾಳಕೊಟ ಆರ್.ಎಸ್.ಪಾಟೀಲ, ವಿ.ಎನ್. ಹಾಲಗಂಗಾಧರಮಠ, ಆರ್.ಎಸ್.ಮದರಿ, ಎಸ್.ಎಲ್.ಹತ್ತರಕಿಹಾಳ, ಸೇರಿದಂತೆ ಅನೇಕ ಪೋಲಿಸರ ತಂಡ ರಚಿಸಿ ತನಿಖೆ ನಡೆಸಿ ಕಂಡು ಹಿಡಿದು 1,50,000, 75000, 75000, 50,000ರೂ ಒಟ್ಟು 3,50,000ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.