ಹಗರಿಬೊಮ್ಮನಹಳ್ಳಿ

ಬಿಡಾಡಿ ದನಗಳ ಹಸಿವು ನೀಗಿಸಿದ ಯುವಕರು

ಬಿಡಾಡಿ ದನಗಳ ಹಸಿವು ನೀಗಿಸಿದ ಯುವಕರು
ಪಟ್ಟಣದ ಮಹೇಶ ಹಾಗೂ ಗೆಳೆಯರು ಬಿಡಾಡಿ ದನಗಳಿಗೆ ಹುಲ್ಲು ಮತ್ತು ಬೆಲ್ಲ , ನಾಯಿಗಳಿಗೆ ಬ್ರೆಡ್ ನಿಡಿ ಹಸಿವು ತೀರಿಸುವ ಕಾರ

ಹಗರಿಬೊಮ್ಮನಹಳ್ಳಿ.ಮೇ.15 : ಕರೋನ ಅಬ್ಬರದ ನಡುವೆ ಪಟ್ಟಣದ ಕೆಲ ಯುವ ಮಿತ್ರರು ಮೂಕ ಜೀವಿಗಳಾದ ಬೀದಿ ನಾಯಿ ಸೇರಿದಂತೆ ಬಿಡಾಡಿ ದನಗಳ ಹಸಿವು ನೀಗಿಸುವ ಕಾರ್ಯಕ್ಕೆ ಪಟ್ಟಣದ ಮಹೇಶ,ಸಮರ್ಥ,ಹಿತೇಶ್,ನಾಗರಜ್ ಹಾಗೂ ಸಂಕಲ್ಪ್ ಮುಂದಾಗಿದ್ದಾರೆ.

ರಾಜ್ಯದೆಲ್ಲೆಡೆ ಲಾಕ್ಡೌನ್ ಹೇರಿ ಜನ ಜೀವ ಅಸ್ತವ್ಯೆಸ್ತವಾಗಿಗಿರುವುದು ಒಂದೆಡೆಯಾದರೆ ಮೂಕ ಜೀವಿಗಳು ಆಹಾರ ಅರಸಿ ಗಲ್ಲಿಗಲ್ಲಿಗಳಲ್ಲಿ ತಿರುಗಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು ಆದರೆ ನಗರದಲ್ಲಿ ಹತ್ತಾರು ಕಡೆ ಕೇಸ್ ಉಲ್ಬಣವಾಗಿದ್ದರಿಂದ ಸೀಲ್ಡೌನ್ ಅಗಿ ಆಹಾರ ಸಿಗದಿರುವುದು ಕಾಣಬಹುದು ಮತ್ತು ಪ್ರತಿದಿನ ನಡೆಯುವ ತರಕಾರಿ ಸಂತೆಯಲ್ಲಿ ಅಳಿದುಳಿದ ತರಕಾರಿಗಳನ್ನು ತಿನ್ನುತ್ತಿದ್ದವು ಆದರೆ ಈ ಮಹಾಮಾರಿ ಕರೋನ ಎಫೆಕ್ಟ್ನಿಂದ ಸಂತೆಗಳು ತೆರವುಗೊಂಡಿವೆ ಮೂಕ ಬಿಡಾಡಿ ದನಗಳಿಗೆ ಆಹಾರವಿಲ್ಲದಂತಾಗಿದೆ ಹಾಗಾಗಿ ಗೆಳೆಯರ ಬಳಗ ಈ ಸಣ್ಣ ಪ್ರಯತ್ನ ಮಾಡಿದ್ದೇವೆ ಎಂದು ಪತ್ರಿಕೆಯೊಂದಿಗೆ ವಿಷಯ ಹಂಚಿಕೊಂಡರು.

ಬೆಂಗಳೂರಿನ ನಿಡೆಕ್ ಇಂಡೆಸ್ಟ್ರೀಯಲ್ ಆಟೋಮೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವ ಮಹೇಶ್ ಪತ್ರಿಕೆಯೊಂದಿಗೆ ಮಾತನಾಡಿ ಕರೋನಾ ವೈರಸ್ ಎರಡನೆಯ ಅಲೆಯಿಂದ ಕಂಪನಿಯು ವಕರ್್ ಫ್ರಂ ಹೋಮ್ ನೀಡಿದ ಕಾರಣ ಹಗರಿಬೊಮ್ಮನಹಳ್ಳಿಗೆ ಮರಳಿದ್ದೇನೆ ಕೆಲ ಗೆಳೆಯರು ಕೂಡಿ ಬಿಡಾಡಿ ದನಗಳಿಗೆ ಹುಲ್ಲು ಸೆರಿದಂತೆ ಬೆಲ್ಲ, ನಾಯಿಗಳಿಗೆ ಬ್ರೆಡ್ ನೀಡುವ ಕಾರ್ಯ ಮಾಡೋಣ ಎಂದು ಮುಂದಾಗಿದ್ದೆವೆ,ಇದಕ್ಕೆ ಗೆಳೆಯರು ನಮ್ಮ ಕೈಲಾದಷ್ಟು ಹಣ ವ್ಯಯಿಸಿ ಮಾಡೋಣ ದೇಣಿಗೆ ಪಡೆಯೋದು ಬೇಡ ಎಂಬ ನಿಧರ್ಾರ ಮಾಡಿ ಈ ಕಾರ್ಯ ಮಾಡಿದ್ದೆವೆ, ಸುತ್ತಮುತ್ತಲಿನ ರೈತರಿಂದ ಹುಲ್ಲನ್ನು ಖರೀದಿಸಿದ್ದೆವೆ, ಬಿಡಾಡಿ ದನಗಳಿಗೆ ಇದನ್ನು ನೀಡುತ್ತಿದ್ದೆವೆ ಎಂದು ತಿಳಿದು ಕೆಲ ರೈತರು ಅಲ್ಪ ಮೊತ್ತಕ್ಕೆ ಹುಲ್ಲು ನೀಡಿ, ಒಳ್ಳೆ ಕೆಲಸ ಮಾಡುತ್ತಿದ್ದಿರಿ ಎಂದು ಶ್ಲಾಘಿಸಿರುವುದು,ಮತ್ತು ನೆಟ್ಟಿಗರು ಇದಕ್ಕೆ ಹರ್ಷ ವ್ಯೆಕ್ತಪಡಿಸಿ ಸಾವಿರಾರು ವಿವ್ಡ್ ಅಗಿರುವುದು ಸಂತಸ ತಂದಿದೆ ಎಂದು ತಿಳಿಸಿದರು.ಗೆಳೆಯರಾದ ಕೋರಿ ಸಮರ್ಥ,ಹತೇಶ್,ಜಿ.ಸಿದ್ದೇಶ್,ಕೋರಿ ಸಂಕಲ್ಪ್,ಸಿ.ಸನತ್ ಇದರಲ್ಲಿ ಭಾಗಹಿಸಿದ್ದಾರೆ ಎಂದರು.

ಮೇ.15 ಹೆಚ್ಬಿಹೆಚ್ 01 : 

 

ಸುದ್ದಿ ಓದಿ