ತೊಗಲುಗೊಂಬೆ ಕಲಾವಿದರ ಕಾರ್ಯ ಪ್ರಶಂಸನೀಯ: ನಂಜುಂಡೇಶ್ವರಶ್ರೀ
ಬಳ್ಳಾರಿ 11: ಇತ್ತೀಚಿನ ಯುಗದಲ್ಲಿ ಜಾನಪದ ಕಲೆಗಳ ಬಗ್ಗೆ ಯುವಕರಿಗೆ ಆಸಕ್ತಿ ಇರುವುದನ್ನು ಮನಗಂಡು, ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಕಲೆಯನ್ನು ಇನ್ನೂ ಜೀವಂತವಾಗಿಡುವ ಕಾರ್ಯ ಮಾಡುತ್ತಿರುವ ಕಲಾವಿದರನ್ನು ಪ್ರಶಂಶಿಸಬೇಕು ಎಂದು ದಾಸರ ನಾಗೇನಹಳ್ಳಿ ಗ್ರಾಮದ ನಂಜುಂಡೇಶ್ವರ ಕಲ್ಯಾಣ ಟ್ರಸ್ಟ್ನ ನಂಜುಂಡೇಶ್ವರ ಸ್ವಾಮಿಗಳು ನುಡಿದರು.
ಅವರು ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದವರು ಭಾನುವಾರ ಸಂಜೆ ದಾಸರ ನಾಗೇನಹಳ್ಳಿ ಗ್ರಾಮದಲ್ಲಿ ಏರಿ್ಡಸಿದ ಶ್ರಾವಣ ಬಂತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಲಾವಿದರ ನೈಪುಣ್ಯ ಒಬ್ಬ ವ್ಯಕ್ತಿ ಬಾಲ್ಯದಲ್ಲಿ ಎಂಥಹ ಸಂಸ್ಕಾರ ಹೊಂದಿರುತ್ತಾನೋ ಅಂತಹ ಬುದ್ಧಿಯನ್ನೇ ಹೊಂದಿರುತ್ತಾನೆ ಹಾಗೆಯೇ ಯಾರಲ್ಲಿ ಸತತ ಸಾಧನೆ ಇರುತ್ತದೆಯೋ ಅವರು ಬದುಕಿನಲ್ಲಿ ಖಂಡಿತ ಸಿದ್ಧಿಗಳಿಸುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಲೆಯನ್ನು ಉಳಿಸಿ ಬೆಳೆಸುತ್ತಿರುವುದು ಹರ್ಷದಾಯಕ ಎಂದರು. ಇಲ್ಲಿಯವರೆಗೆ ನನಗೆ ತೊಗಲುಗೊಂಬೆಯಾಟ ಕಲೆಯನ್ನು ಕಂಡಿರಲಿಲ್ಲ, ಆದರೆ ಇಂದು ತೊಗಲುಗೊಂಬೆ ಪ್ರದರ್ಶನ ನೋಡಲೇಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.
ಹುಲಿಕುಂಟೆರಾಯ ತೊಗಲುಗೊಂಬೆ ಕಲಾತಂಡದ ಅಧ್ಯಕ್ಷ ಹೊನ್ನೂರಸ್ವಾಮಿ ಇವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ನಾನು ತೊಗಲುಗೊಂಬೆ ಕಲೆ ಕಲಿತು ದೇಶ ವಿದೇಶಗಳಗನ್ನು ಸುತ್ತಿಬಂದೆ ಅವರಿಗೆ ರಂಗಭೂಮಿ ಸಂಪತ್ತು ಕೊಡಲಿಲ್ಲ ಆದರೆ ತೊಗಲುಗೊಂಬೆ ನನ್ನ ಆರ್ಥಿಕ ಸದೃಡತೆಯ ಜೊತೆಗೆ ಅಂತರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟಿತು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಊರಿನ ಮುಖಂಡ ಆರ್.ಬಿ.ಸೋಮನಗೌಡ, ಘನಮಲ್ಲನಗೌಡರು ವಹಿಸಿದ್ದರು. ಸಾನಿಧ್ಯವನ್ನು ರುದ್ರಸ್ವಾಮಿ ವಹಿಸಿದ್ದರು. ಊರಿನ ಮುಖಂಡರಾದ ಅಮರೇಗೌಡ, ಆರ್.ಬಿ.ಸೋಮನಗೌಡ, ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದ ಸದಸ್ಯರು ಉಪಸ್ಥಿತರಿದ್ದರು.
ನಂತರ ಬಳ್ಳಾರಿ ಲಕ್ಷ್ಮಿ ಕಲಾ ಕ್ಷೇತ್ರದ ಎಸ್.ಕೆ.ಆರ್. ಜಿಲಾನಿಭಾಷ ತಂಡದ ಎಸ್.ಸಾಹೇರ ತಂಡದವರಿಂದ ಜಾನಪದ ನೃತ್ಯ, ಪಂಡಿತ ರಾಘವೇಂದ್ರ ಗುಡದೂರು ಇವರಿಂದ ವಚನ ಸಂಗೀತ ಹಾಡಿದರು. ಇವರಿಗೆ ಹರ್ಷಾ ಉಪ್ಪಾರ ತಬಲಾ ಸಾಥ್ ನೀಡಿದರು. ನಂತರ ಉಮೇಶ ಮತ್ತು ತಂಡದವರಿಂದ ಬಸವ ಬೆಳೆ ತೊಗಲು ಪ್ರದರ್ಶನ ನಡೆಸಲಾಯಿತು.