ಮಲ್ಲಿಗೆ ನೆಲದ ಬಂಡಾಯದ ಧ್ವನಿ ಶೇಷಗಿರಿರಾವ್ ಏನಿದು ಬದುಕು ಇದೆಂಥಾ ತಿರುವು ಕೃತಿ ಬಿಡುಗಡೆ
ಲೋಕದರ್ಶನ ವರದಿ
ಹೂವಿನ ಹಡಗಲಿ 14: ಮಲ್ಲಿಗೆ ನೆಲದ ಬಂಡಾಯದ ಧ್ವನಿ ಶೇಷಗಿರಿರಾವ್ ಎಂದು ಲೋಹಿಯಾ ಪ್ರಕಾಶನದ ಸಿ ಚೆನ್ನಬಸವಣ್ಣ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರಸಮಭಾವ ಪ್ರಕಾಶನದ ವತಿಯಿಂದ ವಿಶ್ವ ಕಿಡ್ನಿ ದಿನದ ಅಂಗವಾಗಿ ಎಚ್ ಶೇಷಗಿರಿರಾವ್ ಅವರ "ಏನಿದು ಬದುಕು ಇದೆಂಥಾ ತಿರುವು" ಕಿಡ್ನಿ ಕಸಿ ಕಥಾನಕ (ಪರಿಷ್ಕೃತ ಆವೃತ್ತಿ) ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.ಕಾಮ್ರೇಡ್ ಎಸ್ ಎಸ್ ಹಿರೇಮಠರ ಒಡನಾಡಿಯಾಗಿ ನರಗುಂದ ಬಂಡಾಯ,ರೈತ ಕಾರ್ಮಿಕರ ಜನಪರ ಚಳವಳಿಗಳು ಸೇರಿದಂತೆ ವಿವಿಧ ಹೋರಾಟಗಾಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದನ್ನು ಸ್ಮರಿಸಿದರು. ಗ್ರಂಥ ಕೊಡುವ ಸುಖ ಅನನ್ಯ.ವ್ಯಾಟ್ಸಪ್ ಫೇಸ್ಬುಕ್ ಜಾಲತಾಣಗಳ ಭರಾಟೆ ನಡುವೆ ಓದು ಸಂಸ್ಕೃತಿ ಬೆಳೆಸಬೇಕಾಗಿದೆ ಎಂದು ತಿಳಿಸಿದರು.
ಡಾ ಸಂದೀಪ್ ಕೃತಿ ಪರಿಚಯ ಮಾಡಿ ಇದೊಂದು ಕನ್ನಡದಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಮಹತ್ವದ ಕೃತಿ.ಅನುಭವ ಕಥನ, ಬದುಕಿನ ಅರಿವಿನ ಪಯಣ, ತ್ಯಾಗದ ಗುಣ, ತಾಯ್ತನ, ಜೀವಪರ ನಿಲುವು, ಸಾಮಾಜಿಕ ಪ್ರಜ್ಞೆ ಚಿಂತನೆ ಹೊಣೆಗಾರಿಕೆ ಕೃತಿಯಿಂದ ವ್ಯಕ್ತವಾಗಿದೆ ಎಂದರು.ಲೇಖಕ ಹುರಕಡ್ಲಿ ಶಿವಕುಮಾರ , ಸಾಹಿತಿ ಬಿ.ಪೀರಭಾಷಾ ಮತ್ತು ಹಿರಿಯ ರೈತ ಸಂಘದ ಹೋರಾಟಗಾರ ಜಿ. ಎಂ ವೀರಸಂಗಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಕಾಶಕಿ ಕಲಾವತಿ ಹವಾಲ್ದಾರ್ ಇದ್ದರು.ಗಣೇಶ್ ಹವಾಲ್ದಾರ್, ರಂಗನಾಥ ಹವಾಲ್ದಾರ್, ಎಲ್ ಖಾದರ್ ಬಾಷಾ ಸಮತಾ,ಮಮತಾ ಹವಾಲ್ದಾರ್ ನಿರ್ವಹಿಸಿದರು.