ಚಿಕ್ಕೋಡಿ

ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ: ಮಾನವೀಯತೆ ಮೆರೆದ ಗ್ರಾಮಸ್ಥರು

ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ: ಮಾನವೀಯತೆ ಮೆರೆದ ಗ್ರಾಮಸ್ಥರು

ಚಿಕ್ಕೋಡಿ 12: ತಾಲೂಕಿನ ಕೇರೂರ ಗ್ರಾಮದಲ್ಲಿ ಜೆಸಿಬಿಗೆ ಸಿಕ್ಕು ಗಾಯಗೊಂಡಿದ್ದ ನಾಗರಹಾವಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಘಟನೆ ಸೋಮವಾರ ನಡೆದಿದೆ. ಕೇರೂರ ಗ್ರಾಮದಲ್ಲಿ ಜೆಸಿಬಿ ಕೆಲಸದಲ್ಲಿ ನಿರತರಾದಾಗ ಮಾರುದ್ದ ನಾಗರಹಾವು ಸಿಲುಕಿಹಾಕಿಕೊಂಡು ಎರಡು ಕಡೆಗಳಲ್ಲಿ ಗಂಭೀರ ಗಾಯವಾಗಿತ್ತು. ತಕ್ಷಣಾ ರೈತ ಸಂಘದ ಮುಖಂಡ ಮಂಜುನಾಥ ಪರಗೌಡ ಹಾಗೂ ಸರ್ಪ ರಕ್ಷಕ ಈರಣ್ಣಾ ಹಿರೇಮಠ ಅವರು ತಕ್ಷಣಾ ಚಿಕ್ಕೋಡಿ ಪಶು ಆಸ್ಪತ್ರೆಗೆ ಹಾವು ತಂದು ಚಿಕಿತ್ಸೆ ಕೊಡಿಸಿದ್ದಾರೆ. ನಾಗರಹಾವಿಗೆ ಎರಡು ಕಡೆಗಳಲ್ಲಿ ಗಾಯವಾದ ಸ್ಥಳಕ್ಕೆ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ, ಸದಾಶಿವ ಉಪ್ಪಾರ ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ್ದಾರೆ.  ಎರಡು ದಿನಗಳವರೆಗೆ ರಕ್ಷಣೆ ಮಾಡಿ ನಂತರ ಜನರು ಓಡಾಡದ ಪ್ರದೇಶದಲ್ಲಿ ಬಿಟ್ಟು ಬಿಡಬೇಕೆಂದು ಹೇಳಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಮಂಜುನಾಥ ಪರಗೌಡ ತಿಳಿಸಿದರು.

ಸುದ್ದಿ ಓದಿ