ಮನರಂಜನೆ

‘ಪೆದ್ದು ನಾರಾಯಣ’ ಶೀರ್ಷಿಕೆ ಅನಾವರಣ

‘ಪೆದ್ದು ನಾರಾಯಣ’ ಶೀರ್ಷಿಕೆ ಅನಾವರಣ

ಬೆಂಗಳೂರು:  ಗಂಗಾ ಗುರು ಕಂಬೈನ್ಸ್ ಕೆ.ವಾಸುದೇವ್ ಅರ್ಪಿಸುವ ಭೀಮರೆಡ್ಡಿ ನಿರ್ಮಾಣದ ಬ್ಯಾನರ್    ‘ಪೆದ್ದು ನಾರಾಯಣ’ ಕನ್ನಡ ಚಲನಚಿತ್ರದ ಶೀರ್ಷಿಕೆ ಅನಾವರಣವನ್ನು ಬೆಂಗಳೂರಿನಲ್ಲಿ ಖ್ಯಾತ ಚಲನಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ ಮಾಡಿದರು.   

ಚಿತ್ರೀಕರಣ ಚಿಕ್ಕಮಗಳೂರು, ಹಾಸನ್, ಗೋಕಾಕ್, ಇಲಕಲ್, ಧಾರವಾಡ, ದಾಂಡೇಲಿ, ರಾಜಸ್ಥಾನ ಸುತ್ತಮುತ್ತ ಒಟ್ಟು 55 ದಿನಗಳ ಕಾಲ ನಡೆಯಲಿದ್ದು ಮುಂದಿನ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಲಾಗುತ್ತದೆ ಎಂದು ನಿರ್ಮಾಪಕ ಭೀಮರೆಡ್ಡಿ ತಿಳಿಸಿದ್ದಾರೆ. 

ಚಿತ್ರದಲ್ಲಿ ನಾಯಕ ನಟ ರತ್ನಾಕರ, ನಾಯಕಿ ನಟಿ ಸೋನು, ಆರ್.ಅಶೋಕ, ಜೈ ಜಗದೀಶ, ಶೋಭರಾಜ್, ಸುನಂದ ಶರಣಪ್ಪ, ವೀಣಾ ಸುಂದರ್, ಸಂತೋಷ, ಮೊದಲಾದವರಿದ್ದಾರೆ.     

ಛಾಯಾಗ್ರಹಣದ ಜೊತೆ ಚಿತ್ರದ ನಿರ್ದೇಶನವನ್ನು ರಘು ರೂಗಿ, ಸಾಹಿತ್ಯ ಡಾ.ವಿ.ನಾಗೇಂದ್ರ ಪ್ರಸಾದ, ಕಿನ್ನಾಳರಾಜ್, ಕೆ.ಜಿ.ಸ್ವಾಮಿ ಭರತ್, ಶ್ರೀಶಸ್ತೃ(ಚೆನೈ) ಸಂಗೀತ, ಡಿಟಿಎಸ್ ಬಸವರಾಜ್ ನಂದಗಡ(ಮುಂಬೈ),  ಸಂಕಲನ ಎನ್.ಎಮ್.ವಿಶ್ವ, ನೃತ್ಯ ರಾಘವ್ ಬೇವಿನಾಳ, ಕಲಾನಿರ್ದೇಶನ ವೀರೇಶ ಪುರವಂತರ,  ಪೋಸ್ಟರ್ ಡಿಸೈನ್ ಗುರು ಯಲ್ಲಾಪೂರ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ  ,ಸಾಹಸ ಜಾಗ್ವಾರ ಸಣ್ಣಪ್ಪ, ನಿಮಾಣ ನಿರ್ವಹಣೆ ಶಿವಕುಮಾರ, ಕಥೆ, ಚಿತ್ರಕಥೆ, ಸಹ ನಿರ್ದೇಶನವನ್ನು ಪ್ರದೀಪ ಕುಮಾರ್, ಯುವಶ್ರೀ ಆರ್ ಮಾಡಿದ್ದಾರೆ. ಭೀಮರೆಡ್ಡಿ ನಿರ್ಮಾಪಕರಾಗಿದ್ದಾರೆ.

ಸುದ್ದಿ ಓದಿ