ನಾವು ಮಾಡಿದಂತಹ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ: ತಾಯಣ್ಣ
ಬಳ್ಳಾರಿ 31: ಯಾರಿಗೇ ಆಗಲಿ ಅಧ್ಯಕ್ಷ ಸ್ಥಾನದಂತಹ ಪದವಿ ಮತ್ತು ಖುರ್ಚಿ ಶಾಶ್ವತವಲ್ಲ. ನಾವು ಮಾಡಿದಂತಹ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ ಎಂದು ಜನತಾದಳ (ಜಾತ್ಯತೀತ) ಪಕ್ಷದ ನೂತನ ಜಿಲ್ಲಾಧ್ಯಕ್ಷ ಮೀನಹಳ್ಳಿ ತಾಯಣ್ಣ ಅವರು ಹೇಳಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಯಾವುದೇ, ಅಧಿಕಾರ ಇರಲಿ ಆ ಅಧಿಕಾರ ಶಾಶ್ವತ ಅಲ್ಲ. ಅಧಿಕಾರದ ಅವಧಿಯಲ್ಲಿ ನಾವು ಏನು ಕೆಲಸ ಮಾಡಿದ್ದೇವೆ ಎಂಬುವುದು ಮುಖ್ಯ. ನಾವು ಅಧಿಕಾರದಲ್ಲಿ ಇರುವಷ್ಟು ದಿನ ನಾವು ಮಾಡಿರುವ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ ಎಂದರು.
ಜ. 1 ರಿಂದ ಬಳ್ಳಾರಿ ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳಲ್ಲಿ ಪಕ್ಷದ ಹಿರಿಯ ಮುಖಂಡರಾದ ನಾರಾ ಪ್ರತಾಪರೆಡ್ಡಿ, ಎನ್.ಟಿ.ಬೊಮ್ಮಣ್ಣ ಸೇರಿದಂತೆ ಇತರೆ ಹಿರಿಯ ಮುಖಂಡರ ಸಲಹೆ ಸೂಚನೆ ಪಡೆದುಕೊಂಡು ತಾಲೂಕು ಘಟಕಗಳ ಪದಾಧಿಕಾರಿಗಳನ್ನು ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ಹಾಗು ಯುವ ಘಟಕ, ಮಹಿಳಾ ಘಟಕ ಸೇರಿದಂತೆ ವಿವಿಧ ವಿಭಾಗಗಳ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗುವುದು. ಪದಾಧಿಕಾರಿಗಳ ನೇಮಕ ಮಾಡುವ ಮೂಲಕ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ಬಳ್ಳಾರಿ ಜಿಲ್ಲೆಯ ಬಳ್ಳಾರಿನಗರ, ಸಿರುಗುಪ್ಪ, ಸಂಡೂರು, ಕುರೇಕುಪ್ಪ ಪಟ್ಟಣಗಳಿಗೆ ಭೇಟಿ ನೀಡಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಲಾಗಿದೆ. ಸಂಡೂರು ಮತ್ತು ಸಿರುಗುಪ್ಪ ತಾಲೂಕುಗಳಲ್ಲಿ ಪಾದಯಾತ್ರೆ ಮಾಡುವ ಮೂಲಕ ಪ್ರತಿ ಮನೆಮನೆಗೆ ಭೇಟಿ ನೀಡಿ ಪಕ್ಷ ಸಂಘಟನೆ ಮಾಡುವುದಾಗಿ ತಿಳಿಸಿದ್ದೆ. ಆ ಮಾತಿಗೆ ನಾವು ಬದ್ಧನಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಐದು ತಾಲೂಕುಗಳಲ್ಲಿ ಪಾದಯಾತ್ರೆ ಕೈಗೊಳ್ಳುವುದಾಗಿ ಹೇಳಿದರು.
ನನಗೆ ಅಧ್ಯಕ್ಷ ಸ್ಥಾನ ನೀಡಿದ ನಂತರ ಕುರೇಕುಪ್ಪ ಮತ್ತು ಕುರುಗೋಡು ಪುರಸಭೆ ಚುನಾವಣೆ ಎದುರಿಸಿದ್ದು, ಕುರೇಕುಪ್ಪ ಪುರಸಭೆಗೆ 7 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಸಲಾಗುತ್ತು. ಆದರೆ, ಆದರಲ್ಲಿ ಇಬ್ಬರು ಪಕ್ಷದ ಅಭ್ಯರ್ಥಿಗಳು ಜಯಗಳಿಸಿರುವುದು ನಮಗೆ ಶುಭ ಸಂಕೇತ. ಈ ಹಿನ್ನೆಲೆಯಲ್ಲಿ ಮುಂದಿನ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲೂ ಸಹ ಪಕ್ಷದ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅಭ್ಯರ್ಥಿಗಳ ಗೆಲವಿಗೆ ಶಕ್ತಿ ಮೀರಿ ಶ್ರಮಿಸಲಾಗುವುದು ಎಂದು ತಿಳಿಸಿದರು.
ಸಮಾರಂಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಎನ್. ಪ್ರತಾಪರೆಡ್ಡಿ, ಎನ್. ಟಿ. ಬೊಮ್ಮಣ್ಣ ಅವರ ಮೀನಹಳ್ಳಿ ತಾಯಣ್ಣ ಅವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಶುಭ ಕೋರಿದರು.
ಪಕ್ಷದ ಮುಖಂಡರಾದ ಮುನ್ನಾಬಾಯಿ, ಪಿ. ಬಂಡೇಗೌಡ, ಲಕ್ಷ್ಮೀಕಾಂತರೆಡ್ಡಿ, ಕಿರಣ್ಕುಮಾರ್, ವಾದಿರಾಜಶೆಟ್ಟಿ, ಮದಿರೆ ವಿಜಯಕುಮಾರಗೌಡ, ಸಿರುಗುಪ್ಪ ಪರಶುರಾಮ ನಾಯಕ, ರೆ.ಡಾ. ಕಿಸ್ಟೋಫರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಡಿ. ವಿಜಯಕುಮಾರ, ಯಲ್ಲನಗೌಡ, ಮಹಿಳಾ ಮುಖಂಡರಾದ ರಾಮೇಶ್ವರಿ, ಪುಷ್ಪಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.