ಶಿಕ್ಷಕ ಜೀವನದ ರಕ್ಷಕ
ಇಂದಿನ ಸಮಾಜದಲ್ಲಿ ಶಿಕ್ಷಕನ ಪಾತ್ರ ಹಿರಿದು.ಶಿಕ್ಷಕ ರಾಷ್ಟ್ರದ ಭಾವೀ ಪ್ರಜೆಗಳನ್ನು ತಯಾರು ಮಾಡುವ ಗುರುತರ ಜವಾಬ್ದಾರಿ ಈತನದು.ಮಕ್ಕಳಿಗೆ ಚೆನ್ನಾಗಿ ಬೋಧಿಸಿ ಜ್ಞಾನದಾಹ ಹೆಚ್ಚಿಸಿ ಪ್ರಜ್ಞಾವಂತ ನಾಗರಿಕನ್ನಾಗಿ ರೂಪಿಸುವದು ಈತನ ಆದ್ಯ ಕರ್ತವ್ಯವಾಗಿದೆ. ಅಂತಲೇ ಶಿಕ್ಷಕ ರಾಷ್ಟ್ರ ನಿಮರ್ಾಪಕ.ದೇಶದ ಬೆನ್ನಲುಬ. ಶಿಕ್ಷಕ ಜೀವನದ ರಕ್ಷಕ.ಕೋಟಿಕೋಟಿ ಮಕ್ಕಳ ಭವಿಷ್ಯ ನಿಮರ್ಾಪಕ.ಸಮಾಜದ ಕೇಂದ್ರ ಬಿಂದು.ಸಮಾಜದ ಉತ್ಥಾನ ಅವನ ಕೈಯಲ್ಲಿದೆ.ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ ಸತ್ಪ್ರಜೆಗಳನ್ನು ತಯಾರಿಸುವ ರೂವಾರಿ ಎಂದರೆ ಅತಿಶೋಕ್ತಿಯಾಗದು.ಮಕ್ಕಳ ಮನಸ್ಸಿನಾಳವನ್ನು ಅರಿತು ಪ್ರತಿಭೆ ಗುರುತಿಸಿ ಸರಿಯಾದ ಮಾರ್ಗದರ್ಶನ ಮಾಡುವುದು ಶಿಕ್ಷಕನ ಆದ್ಯ ಕರ್ತವ್ಯವಾಗಿದೆ.ಮಕ್ಕಳು ಅನುಕರಣೆ ಸ್ವಭಾವದವರು.ಶಿಕ್ಷಕ ವೃತ್ತಿಗಿಂತ ಸಮಾಜಕ್ಕೆ ಉಪಯುಕ್ತವಾದ ವೃತ್ತಿ ಬೇರೊಂದು ಇಲ್ಲ.ಈ ವೃತ್ತಿ ಮಹತ್ವ ಅರಿತು ಸಮಾಜದಲ್ಲಿ ಇಂದು ವ್ಯವಹರಿಸಬೇಕು.ಅವನ ರೀತಿನೀತಿಗಳು ನಡೆನುಡಿಗಳು ಚೆನ್ನಾಗಿದ್ದರೆ ಮಕ್ಕಳು ಅನುಕರಣೆ ಮಾಡಿ ಕಲಿಯುವರು.ಶಿಕ್ಷಕ ವೃತ್ತಿ ಸರ್ವಶ್ರೇಷ್ಠ ವೃತ್ತಿಯಾಗಿದೆ.ಶಿಕ್ಷಕನು ತನ್ನ ಮಾತಿನ ಮೋಡಿಯಿಂದ ಮಕ್ಕಳ ಮನಸ್ಸನ್ನು ಅಯಸ್ಕಾಂತದಂತೆ ಆಕಷರ್ಿಸಿ ಬೋಧನಾ ಕೌಶಲ್ಯಗಳ ಮೂಲಕ ಅವರಲ್ಲಿ ಜ್ಞಾನದ ಪರಿಮಳವನ್ನು ಸೂಸಬೇಕು.
ಒಳ್ಳೆಯ ಚಾರಿತ್ರ್ಯವುಳ್ಳ ಶಿಕ್ಷಕ ಒಳ್ಳೆಯ ವಿದ್ಯಾಥರ್ಿಗಳನ್ನು ಸೃಷ್ಟಿಸಬಲ್ಲ.ಶಿಕ್ಷಕನ ಸ್ಥಾನ ಸರ್ವಶ್ರೇಷ್ಠ.ಬೇರೆ ಹುದ್ದೆಗಳ ಜೊತೆ ಹೊಲಿಸಲಾಗದ ಹಣ ಹಾಗೂ ವಿದ್ಯೆಯಿಂದ ಅಳೆಯಲಾರದಂತಹ ವೃತ್ತಿ.ಒಬ್ಬ ಶಿಕ್ಷಕ ರಾಷ್ಟ್ರಪತಿಯಾಗಬಲ್ಲ ಇಲ್ಲವೆ ರಾಷ್ಟ್ರಪತಿಯನ್ನು ಸೃಷ್ಟಿಸಬಲ್ಲ.ಶಿಕ್ಷಕನಿಲ್ಲದ ಊರಿಲ್ಲ,ಶಿಕ್ಷಕನನ್ನು ನೋಡದ ವ್ಯಕ್ತಿ ಇಲ್ಲ.ಎಲ್ಲರ ಕಣ್ಣಿಗೂ ಮೊದಲು ಕಾಣಿಸಿಕೊಳ್ಳುವವನು ಶಿಕ್ಷಕ ಎಂದರೆ ತಪ್ಪಾಗದು.
ಭಾರತದೇಶ ಜಾತ್ಯಾತೀತ ರಾಷ್ಟ್ರವಾಗಿದೆ ಪ್ರಜಾಪ್ರಭುತ್ವವು ಸ್ಥಿರವಾಗಿ ನಿಲ್ಲುವಂತೆ ಮಾಡಬೇಕಾದರೆ ಶಿಕ್ಷಕನು ವಿದ್ಯಾಥರ್ಿಗಳಿಗೆ ಮಮತೆಯಿಂದ ಬೋಧಿಸಿ ಎಲ್ಲಾ ವರ್ಗದ ಮಕ್ಕಳಿಗೆ ಭಾವೈಕ್ಯತೆೆ ಮೂಡಿಸುವದು ಮೂಲಭೂತ ಕರ್ತವ್ಯವಾಗಿದೆ.
ಶಿಕ್ಷಕನು ಹಸುನ್ಮುಖಿಯಾಗಿ ಆದರ್ಶಗುಣಗಳನ್ನು (ಮಮತೆ) ಸ್ನೇಹಗುಣ ಪರೋಪಕಾರ ಸಹಕಾರ ಪ್ರಮಾಣಿ ಕತೆಯ ಗುಣಗಳನ್ನು ಬೆಳೆಸಲು ಅವರ ವ್ಯಕ್ತಿತ್ವವನ್ನು ರೂಪಿಸಲು ಶಿಕ್ಷಣ ರಂಗದಲ್ಲಿ ಪ್ರಗತಿಯನ್ನು ಸಾಧಿಸಲು ಶಿಕ್ಷಕನ ಪಾತ್ರ ಅವಶ್ಯಕವಾದುದು ಶಿಕ್ಷಣ ರಂಗದ ಸೂತ್ರಧಾರನೇ ಶಿಕ್ಷಕ! ಶಿಕ್ಷಣ ಎಂದರೆ ಕೇವಲ ಬರೀ ಓದಲ್ಲ ಬರೀ ಪುಸ್ತಕದ ಜ್ಞಾನವು ಅಲ್ಲಾ ಅದು ಮಾನವತೆಯ ವಿಕಾಸ ಶಿಕ್ಷಣವೆಂದರೆ ದುರ್ವತನೆಯನ್ನು ಸದ್ದ್ವರ್ತನೆಯನ್ನಾಗಿ ಮಾರ್ಪಡಿಸುವದೇ ಶಿಕ್ಷಣದ ಮೂಲ ಗುರಿಯಾಗಿದೆ ಮಕ್ಕಳು ಮೊದಲು ತಪ್ಪು ಮಾಡಿದಾಗ ಹೊಡೆಯಬಾರದು ಈ ತಪ್ಪೇ ಮುಂದೆ ಮಕ್ಕಳ ಬುದ್ಧಿಯ ವಿಕಾಸಕ್ಕೆ ಕಾರಣವಾತ್ತದೆ ತಪ್ಪಿನ ಅರಿವು ವಿದ್ಯಾಥರ್ಿಗಳು ಮನಗಾಣಬೇಕು ಮಕ್ಕಳಿಗೆ ಕಲಿಯಲು ಶಿಕ್ಷಕ ಪ್ರೋತ್ಸಾಹಿಸಬೇಕು ಅವರಲ್ಲಿ ಸ್ಪೂತರ್ಿಯನ್ನು ತುಂಬಬೇಕು. ಮಕ್ಕಳಲ್ಲಿರುವ ಸೂಕ್ತಪ್ರತಿಭೆಗಳನ್ನು ಗುರುತಿಸಲು ಭಾಷಣ ಆಶುಭಾಷಣ ಚಚರ್ಾಕೂಟ ಕಾವ್ಯಗಾಯನ ಏಕಪಾತ್ರಾಭಿನಯ ನಾಟಕಾಭಿನಯ ಸ್ಪಧರ್ೆಗಳನ್ನು ಏರ್ಪಡಿಸಿ ಅವರ ಕಲೆಗೆ ಪ್ರೋತ್ಸಾಹಿಸಬೇಕು ಮಕ್ಕಳ ಪ್ರತಿಭೆ ಗುರುತಿಸಲು ನಿಷ್ಯಕ್ಷ ಪಾತ್ರದಿಂದ ಕಾರ್ಯನಿರ್ವಹಿಸಬೇಕು ಸ್ವಪ್ರತಿಷ್ಠೆ ಇರದೇ ಸೇವಾಮನೋಭಾವನೆಯಿಂದ ಕಾಯರ್ೊನ್ಮುಖರಾಗಬೇಕು ನಿಜವಾದ ಪ್ರತಿಭೆ ಅರಳಲು ಸಹಕರಿಸಬೇಕು ಶಿಕ್ಷಕನು ಮಕ್ಕಳಲ್ಲಿ ಮಾತುಗಾರಿಕೆಯ ಕಲೆಯನ್ನು ಬೆಳೆಸುವದು ಹೆಚ್ಚು ಮಹತ್ವಪುರ್ಣವಾಗಿದೆ ಮಕ್ಕಳಲ್ಲಿರುವ ಉಚ್ಚಾರ ಸ್ಪಷ್ಟೆತೆ ಮತ್ತು ವಿಷಯ ಮಂಡನೆಯ ಶೈಲಿಯನ್ನು ಉತ್ತಮ ರೀತಿಯಲ್ಲಿ ಅಭಿವ್ಯಕ್ತ ಪಡಿಸಲು ಭಾಷಾ ಶಿಕ್ಷಕರು ಶ್ರಮವಹಿಸಬೇಕು.
ಬರಹಕ್ಕಿಂತ ಓದು ಮೊದಲು ಓದಿಗಿಂತ ಮಾತು ಮೊದಲು ಎಂಬುದನ್ನು ಅರಿತು ಮಕ್ಕಳ ಉಚ್ಛಾರ ಶಬ್ದಭಂಡಾರ ಭಾಷಾಜ್ಷಾನ ವಿಷಯ ಸಂಪತ್ತು ಹೆಚ್ಚಿಸುವಲ್ಲಿ ಹಿರಿಯ ಪಾತ್ರವಹಿಸಬೇಕು.
ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕ್ತಿ ಎಂಬ ಭಾವನೆ ಹಿಂದಿನ ಕಾಲದಲ್ಲಿ ಇತ್ತು.ಆದರೆ ಇಂದು ಶಿಕ್ಷಕನ ಪಾತ್ರ ದಿನದಿನಕ್ಕೂ ಕಾಲಕಾಲಕ್ಕೂ ಬದಲಾವಣೆ ಹೊಂದುತ್ತಾ ಬಂದು ಶಾಲಾಜೀವನದಲ್ಲಿ ಶಿಕ್ಷಕನೇ ಮಕ್ಕಳಿಗೆ ತಂದೆ ಸ್ನೇಹಿತ ಹಿತಚಿಂತಕ ಎಂಬ ಪಾತ್ರವನ್ನು ನಿರ್ವಹಿಸುವನು.ಶಿಕ್ಷಕ ಹೆಜ್ಜೆ ಹೆಜ್ಜೆಗೂ ಮಕ್ಕಳ ನಡೆನುಡಿಗಳನ್ನು ನಿರೀಕ್ಷಿಸಿ ಸೂಕ್ತ ಸಲಹೆ ಸೂಚನೆಗಳನ್ನು ಕೊಡಬೇಕು.ಶಿಕ್ಷೆ ಕೊಡುವುದು ಅಕ್ಷಮ್ಯ ಅಪರಾಧ.ಮಕ್ಕಳ ಮನಸ್ಸನ್ನು ಮಾತಿನಿಂದ ಗೆದ್ದು ಅವರ ನಡೆನುಡಿಯಲ್ಲಿ ಪರಿರ್ವತನೆಯನ್ನು ತರಬೇಕು.ಮಕ್ಕಳನ್ನು ಸಂತೋಷಗೊಳಿಸಿದ ಶಿಕ್ಷಕ ಬೋಧಿಸಿದ ಹಿತೋಪದೇಶಗಳನ್ನು ಅಚ್ಚಳಿಯದೇ ಅವರ ಮನಸ್ಸಿನ ಮೇಲೆ ಉಳಿಯುವವು.ಆದ್ದರಿಂದ ಈತನು ಸದಾ ಜ್ಷಾನಾರ್ಜನೆಯಲ್ಲಿ ಆಳವಾದ ಅಧ್ಯಯನದಲ್ಲಿ ತೊಡಗಬೇಕು. ಒಳ್ಳೆಯ ಸಂಕಲ್ಪಗಳಿಂದ ಮಕ್ಕಳಲ್ಲಿ ಜ್ಷಾನದ ದಾಹವನ್ನು ಹುಟ್ಟಿಸಬೇಕು.
ಶಿಕ್ಷಕನಿಗೆ ಕೇವಲ ಶಿಕ್ಷಣಶಾಸ್ತ್ರ ಮತ್ತು ಕಲೆಗಳ ಅಭ್ಯಾಸವಿದ್ದರೆ ಸಾಲದು.ಶಿಕ್ಷಕನು ಮನಶಾಸ್ತ್ರವನ್ನು ಅಧ್ಯಯನ ಮಾಡಿರಬೇಕು.ಬೋಧನೆಯಲ್ಲಿ ಸಾಧನೆ ಇರದಿದ್ದರೆ ಕೇಳುಗರಿಗೆ ವೇದನೆಯಾಗುತ್ತದೆ.ಶಿಕ್ಷಕನು ಕೇವಲ ತಾನು ಚೆನ್ನಾಗಿ ಓದಿಕೊಂಡರೆ ಸಾಲದು.ಚೆನ್ನಾಗಿ ಕಲಿಸುವವನೇ ಶ್ರೇಷ್ಠ ಶಿಕ್ಷಕನೆಂದರೆ ಅತಿಶೋಕ್ತಿಯಾಗದು.
ಡಾ.ರಾಧಾಕೃಷ್ಣರು ಶಿಕ್ಷಕರ ಕುರಿತು ಹೇಳಿದ ಒಂದು ಮಾತನ್ನು ಉಲ್ಲೇಖಿಸುವೆ.ವಿದ್ಯಾಥರ್ಿಗಳು ತಮಗೆ ಗೌರವವನ್ನು ಕೊಡಬೇಕೆಂದು ಉಪಧ್ಯಾಯರು ಅಪಣ್ಣೆ ಮಾಡಬಾರದು.ಅಂತಹ ಪ್ರೀತಿಯನ್ನು ಸಂಪಾದಿಸಬೇಕೆಂದು ಹೇಳಿದ್ದಾರೆ.
ಶಿಕ್ಷಕ ಗೌರವವನ್ನು ಹೆಚ್ಚಿಸಿ ಸೇವೆಯನ್ನು ಗೈದ ಡಾ. ರಾಧಾಕೃಷ್ಣರ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿರುವದು ಶಿಕ್ಷಕವೃಂದಕ್ಕೆ ಹೆಮ್ಮೆಯ ವಿಷಯವೇ ಸರಿ! ಡಾ.ರಾಧಾಕೃಷ್ಣರು ವಿಶ್ವಗಣ್ಯವ್ಯಕ್ತಿಗಳಲ್ಲಿ ಒಬ್ಬರು.ಇವರು 1888 ರಲ್ಲಿ ಸಪ್ಟಂಬರ 5 ರಂದು ಚಿತ್ತೂರ ಜಿಲ್ಲೆಯ ತಿರುತಣಿ ಎಂಬ ಹಳ್ಳಿಯಲ್ಲಿ ತೆಲಗು ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದರು.
ಭಾರತದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ರಾಧಾಕೃಷ್ಣರ ಆಯೋಗ ರಚನೆಯಾಗಿ ವಿಶ್ವವಿದ್ಯಾನಿಲಯಗಳಿಗೆ ಮಾಡಿದ ಮಾರ್ಗದರ್ಶನ ಸಲಹೆ ಸೂಚನೆಗಳು ಇಂದಿನವರೆಗೂ ಅಜರಾಮರವಾಗಿವೆ.ರಾಧಾಕೃಷ್ಣರು ಹಲವು ವಿಶ್ವವಿದ್ಯಾನಿಲಯಗಳ ಕುಲಪತಿಗಳಾಗಿ,ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿ,1952 ರಿಂದ 1962 ರವರೆಗೆ ಭಾರತದ ಉಪ ರಾಷ್ಟ್ರಪತಿಯಾಗಿ ಮುಂದೆ ಅವರು 1962 ರಿಂದ 5 ವರ್ಷ ಭಾರತದ ರಾಷ್ಟ್ರಪತಿಯಾಗಿ ದೇಶಕ್ಕೆ ಸಲ್ಲಿಸಿದ ಸೇವೆ ಅಮೋಘವಾದದ್ದು.ಒಬ್ಬನೇ ವ್ಯಕ್ತಿ ವಿಜ್ಷಾನ,ಸಾಹಿತ್ಯ,ಕಲೆ,ಅಧ್ಯಾತ್ಮ ಹೀಗೆ ಹತ್ತು ಹಲವು ಬಹುಮುಖ ಪ್ರತಿಭೆಗಳನ್ನು ಹೊಂದಿದ್ದ ಶಿಕ್ಷಣ ತಜ್ಞನ ಹುಟ್ಟಿದ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿರುವದು ಅರ್ಥಪೂರ್ಣವೂ ಹೌದು ಔಚಿತ್ಯ ಪೂರ್ಣವು ಹೌದು.
- ಕೆ.ಬಿ.ಮರೋಬ, ಮುಧೋಳ
ಮೊ. 998029286