ರೈತರಿಗೆ ಬರ ಪರಿಹಾರ ನೀಡದೇ ಮಲತಾಯಿ ಧೋರಣೆ ಮಾಡುತ್ತಿರುವ ರಾಜ್ಯ ಸರ್ಕಾರ
ಮುಂಡರಗಿ 27: ರಾಜ್ಯ ಸರ್ಕಾರವು ಮುಂಡರಗಿ ತಾಲೂಕನ್ನು ಸಂಪೂರ್ಣ ಬರಗಾಲ ಎಂದು ಘೋಷಣೆ ಮಾಡಿದ್ದು, ಈ ಬರಪರಿಹಾರಕ್ಕಾಗಿ ಕೇಂದ್ರ ಸರ್ಕಾರವು ಹಣನಿಡಿದ್ದರು ಸಹ ರಾಜ್ಯ ಸರ್ಕಾರವು ರೈತರಿಗೆ ಬರಪರಿಹಾರ ನೀಡುವಲ್ಲಿ ಮಲತಾಯಿ ದೋರಣೆ ಮಾಡುತ್ತಿದ್ದು ಆದ್ದರಿಂದ ತಾಲೂಕಿನ ಎಲ್ಲಾ ರೈತರಿಗೂ ಬರಪರಿಹಾರ ಹಣವನ್ನು ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಬಾರಕೋಲ ಚಳುವಳಿ ಪ್ರತಿಭಟನೆ ಮಾಡುವದರೊಂದಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವದರೊಂದಿಗೆ ಒತ್ತಾಯಿಸಿದರು.
ಮುಖ್ಯವಾಗಿ ಬೆಳೆಪರಿಹಾರವು ಮುಂಡರಗಿ ತಾಲೂಕಿನ 29 ಸಾವಿರ ರೈತರ ಪೈಕಿ ಈಗ 17 ಸಾವಿರ ರೈತರಿಗೆ ಮಾತ್ರ ಪರಿಹಾರ ಬಂದಿದ್ದು ಇನ್ನು ಸೂಮಾರು 12 ಸಾವಿರಕ್ಕೂ ಹೆಚ್ಚು ರೈತರ ಖಾತೆಗೆ ತ್ವರೀತವಾಗಿ ಪರಿಹಾರ ಹಣ ಜಮಾ ಮಾಡಬೇಕು ಹುಲಿಗುಡ್ಡ ಏತ ನೀರಾವರಿ ಯಜನನೇಯ (ಡ್ರೀಫ್ ಎರಗೇಷನ್) ಸಂಪೂರ್ಣವಾಗಿ ಬಂದಮಾಡಿ ಪೈಪುಗಳ ಮೂಲಕ ಅಥವಾ ಕಾಲುವೆ ಮೂಖಾಂತರ ನೀರು ಹರಿಸಬೇಕು. ಹಾಗೇ ತಾಲೂಕಿನಲ್ಲಿ ಪ್ರಾರಂಭವಾಗಿರುವ ಡ್ರೀಫ್ ಎರಗೇಷನ್ನ ಡ್ರೀಫ್ ಪೈಪು ಹಾಕುವುದನ್ನು ತತ್ಕ್ಷಣ ಬಂದ ಮಾಡಬೇಕು.
ತಾಲೂಕಿನಲ್ಲಿ 2024ನೇ ಸಾಲಿನ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು ಆದ್ದರಿಂದ ರೈತರಿಗೆ ಬೀತ್ತನೆ ಮಾಡುವದಕ್ಕೆ ಬೀಜ ರಸಗೋಬ್ಬರ ಸಮಪರ್ಕವಾಗಿ ಸಿಗಬೇಕು, ಮತ್ತು ರೋಗ ನಿರೋಧಕ ಶಕ್ತಿ ಇರುವಂತಹ ಬೀಜವನ್ನು ಪೋರೈಕೆ ಮಾಡಬೇಕು. ತಾಲೂಕಿನಲ್ಲಿ ಜೋಳ ಖರೀದಿ ಕೇಂದ್ರವನ್ನು ಆನ್ ಲೈನ್ ಅರ್ಜಿ ಹಾಕಲು ಅವಕಾಶ ಮಾಡಿಕೊಡಬೇಕು. ಮುಂಡರಗಿ ನಗರದಲ್ಲಿ ಪತ್ರಕಾ ಭವನವನ್ನು ನಿರ್ಮಾಣ ಮಾಡಬೇಕು, ತಾಲೂಕಿನ ಪ್ರತಿ ಹಳ್ಳಿಗೂ 100 ಎಕರೆ ವಿಸ್ಥೀರ್ಣದ ಕೇರೆ ನಿರ್ಮಾಣ ಮಾಡಬೇಕು.
ಸರ್ಕಾರದಿಂದ ರೈತರಿಗೆ ಬಂದ ಬೆಳೆ ಪರಿಹಾರ ಹಣ ಹಾಗೂ ಮಾಸಾಸನ ಇನ್ನೀತರ ಯೋಜನೆಯ ಹಣವನ್ನು ಬ್ಯಾಂಕಿನವರು ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು. ಹೋಲದ ಐ.ಪಿ.ಸೆಟ್ ಕರೆಂಟನ್ನು ಸಂಜೆ 6 ರಿಂದ ಬೆಳಿಗ್ಗೆ 6-00 ಘಂಟೆಯವರಿಗೂ ಒಪನ್ ಡೆಲ್ಟಾ ಕರೆಂಟನ್ನ ಕೊಡಬೇಕು. ಬ್ಯಾಂಕಿನಲ್ಲಿ ರೈತರ ಸಾಲಕ್ಕೆ ಸೀವಿಲ್ ಸ್ಕೋರ್ನ್ನು ರದ್ದು ಪಡಿಸಬೇಕು. ಬರಗಾಲದ ಹಿನ್ನೇಲೆಯಾಗಿ ತಾಲೂಕಿನ ಪ್ರತಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಕೆಲಸವನ್ನು ಕಡ್ಡಾಯವಾಗಿ ಪ್ರಾರಂಭಿಸಬೇಕು.
ಪ್ರಧಾನ ಮಂತ್ರಿ ಜೀವ ವಿಮಾ ಹಣವನ್ನು ಆತ್ಮಹತ್ತೆ ಮಾಡಿಕೊಂಡ ರೈತರಿಗೆ ಹಾಗೂ ಯುದ್ಧ ಮಾಡಿ ಸಾವನನ್ನಿಪ್ಪಿದ ಸೈನಿಕರಿಗೆ ಮೀಸಲಿಡಬೇಕು. ಮುಂಡರಗಿ ಎ.ಪಿ.ಎಮ್.ಸಿಯಲ್ಲಿ ರೈತ ಭವನ ಹಾಗೂ ವಸತಿ ಗೃಹಗಳನ್ನು ನಿರ್ಮಾಣ ಮಾಡಬೇಕು, ಬೆಳೆ ವಿಮೆ ತಾರತಮ್ಯವನ್ನು ಸರಿಪಡಿಸಿ ಎಲ್ಲಾ ರೈತರಿಗೂ ಬೆಳೆ ವಿಮೆ ನೀಡಬೇಕು. ಈ ಎಲ್ಲಾ ರೈತರ ಬೇಡಿಕೆಗಳ ಅನುಷ್ಠಾನಕ್ಕೆ ಸರ್ಕಾರವು ಹಾಗೂ ಅಧಿಕಾರಿಗಳು ಸ್ಪಂಧಿಸದಿದ್ದರೆ ಮುಂದಿನ ದಿನಮಾನಗಳಲ್ಲಿ ರೈತ ಸಮೂಹವು ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮುಂಡರಗಿ ತಹಶೀಲ್ದಾರ ಕಛೇರಿಯ ಮುಂದೆ ಪ್ರತಿಭಟನೆ ಮಾಡುವದರೊಂದಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವದರೊಂದಿಗೆ ಒತ್ತಾಹಿಸಿದರು.
ಪ್ರತಿಭಟನಾ ರೈತರು ಮುಂಡರಗಿ ನಗರದ ಕೋಟೆ ಆಂಜುನಯ್ಯ ದೇವಸ್ಥಾನದಿಂದ ಬಾರಕೋಲ ಚಳುವಳಿ ಪ್ರತಿಭಟನೆ ಪ್ರಾರಂಭಿಸಿ ನಗರದ ಪ್ರಮುಖ ಬೀದಿಯಲ್ಲಿ ಬಾರಕೋಳ ಚಾಟಿ ಬೀಸುತ್ತಾ ತಹಶೀಲ್ದಾರ ಕಛೇರಿ ಬಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಪ್ರತಿಭಟನೆಯಲ್ಲಿ ಎತ್ತು ತ್ತುಮ ಚಕ್ಕಡಿಗಳು ಪಾಲ್ಗೊಂಡಿದ್ದವು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಗದಗ ಜಿಲ್ಲಾಧಿಕಾರಿ ವೈಶಾಲ ಎಂ, ಹೋರಾಟಗಾರರ ಮನವಿ ಸ್ವೀಕರಿಸಿ ಮಾತನಾಡುತ್ತಾ, ರೈತರಿಗೆ ಬರ ಹಾಗೂ ಬೆಳೆ ಪರಿಹಾರವನ್ನು ಎಲ್ಲಾ ರೈತರಿಗೂ ನೀಡುವದಕ್ಕೆ ಈಗಾಗಲೇ ಗದಗ ಜಿಲ್ಲಾ ಉಸ್ತೂವಾರಿ ಸಚಿವರಾದ ಎಚ್,ಕೆ, ಪಾಟೀಲರು ರಾಜ್ಯ ಸರ್ಕಾರದ ಕೃಷಿ ಮಂತ್ರಿಗಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸುತ್ತಿದ್ದು ನಾನು ಸಹ ಎಲ್ಲಾ ರೈತರಿಗೂ ಪರಿಹಾರ ಕಲ್ಪಿಸುವದಕ್ಕೆ ಪ್ರಮಾಣಿಕ ಪ್ರಯತ್ನ ಮಾಡುತ್ತೆನೆ, ಹಾಗೂ ಉಳಿದ ಬೇಡಿಕೆಗಳಿಗೆ ಆಯಾ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಹಂತ ಹಂತವಾಗಿ ಆಧ್ಯತೆಯ ಮೇರಿಗೆ ಅನುಷ್ಠಾನಕ್ಕೆ ಆದೇಶ ನೀಡುತ್ತೆನೆ ಎಂದು ರೈತರಿಗೆ ಆಶ್ವಾಸನೆ ನೀಡಿದ್ದರಿಂದ ರೈತರು ಪ್ರತಿಭಟನೆ ಸ್ಥಗೀತಗೊಳಿಸಿದರು. ಸಂಧರ್ಭದಲ್ಲಿ ತಾಲೂಕು ತಹಶಿಲ್ದಾರರಾದ ಧನಂಜಯ ಮಾಳಗಿತ್ತಿ, ಸಿ.ಪಿ.ಐ ಮಂಜುನಾಥ ಕುಸೂಗಲ್ ಒಳಗೊಂಡತ್ತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಉಪಾಧ್ಯಕ್ಷರಾದ ಶಿವಾನಂದ ಇಟಗಿ, ತಾಲೂಕು ಅಧ್ಯಕ್ಷರಾದ ಶರಣಪ್ಪ ಕಂಬಳಿ, ಎಚ್.ಬಿ.ಕುರಿ, ಚಂದ್ರ್ಪ ಬಳ್ಳಾರಿ, ದ್ಯಾಮಣ್ಣ ವಾಲಿಕಾರ, ಶಂಕರಗೌಡ ಜಾಲಿನಗೌಡ್ರ, ದೇವಪ್ಪ ಮ್ಯಾಗೇರಿ, ಅಶೋಕ ಬನ್ನಿಕೊಪ್ಪ, ಭೀಮಣ್ಣ ಬಂಡಿವಡ್ಡರ, ಸುರೇಶ ಹಡಪದ, ಪುಟ್ಟಪ್ಪ ಅಳವುಂಡಿ, ಮೃತ್ಯುಂಜ ಸಜ್ಜನರ, ರಾಜಪ್ಪ ಕರಡಿ, ಚಂದ್ರ್ಪ ಗದ್ದಿ, ಸುರೇಶ ಹಡಪದ, ಅಶ್ವಿನಿ ಬೀಡನಾಳ, ಶರಣಪ್ಪ ಶಿವಶಿಂಪಿಗೇರ, ಶರಣಪ್ಪ ಹಳ್ಳಕೇರಿ, ಕಸ್ತೂವೇವ್ವ ಅರಕೇರಿ, ಚಂದ್ರಶೇಖರ ರಾಟಿ, ಸಾವಿತ್ರಾ ಗಡದಾ, ನಾಗರಾಜ ತಳಕಲ್, ಈರಣ್ಣ ಬೇಟಗೇರಿ, ವಿಶ್ವನಾಥ ಕವಲೂರು, ಮಂಜುನಾಥ ಚನ್ನಳ್ಳಿ, ಲಕ್ಷ್ಮವ್ವ ಹಟ್ಟಿ, ಮುಂತ್ತಾದ ರೈತರು ಪಾಲ್ಗೊಂಡಿದ್ದರು.